HMPV vs COVID-19 : ಹೂಮನ್ ಮೆಟಾನ್ಯುಮೊ ವೈರಸ್ (HMPV) ನ್ಯೂಮೋವಿರಿಡೇ ತಳಿಯಾಗಿದ್ದು, SARS-COV-2 ಕರೋನವಿರಿಡೇ ತಳಿಯಾಗಿದೆ. HMPV ಕೊವಿಡ್ ವೈರಸ್ ಅನ್ನೇ ಹೋಲುತ್ತಿದೆ. ಸಾಮಾನ್ಯವಾಗಿ ಶೀತ-ತರಹದ ರೋಗಲಕ್ಷಣಗಳು, ಇತರ ಉಸಿರಾಟದ ತೊ೦ದರೆ ಕಾಣಿಸಿಕೊಳ್ಳುತ್ತವೆ.
ಇದನ್ನೂ ಓದಿ: Human metanpneumovirus | ಏನಿದು ಚೀನಾದ ಹೂಮನ್ ಮೆಟಾನ್ಯುಮೊ ವೈರಸ್? ಭಾರತಕ್ಕೆ ಎಷ್ಟಿದೆ ಅಪಾಯ?
HMPV vs COVID-19 ನಡುವಿನ ವ್ಯತ್ಯಾಸವೇನು?
ಚೀನಾದಲ್ಲಿ HMPV ಮತ್ತು COVID-19 ನಡುವೆ ಸ್ವಲ್ಪ ವ್ಯತ್ಯಾಸವಿದೆ. ಸೂಕ್ಷ್ಮಜೀವಿಗಳಲ್ಲಿ ಸಣ್ಣ ವ್ಯತ್ಯಾಸಗಳಿದ್ದು, ರೋಗ ಲಕ್ಷಣಗಳು ಬಹುತೇಕ ಒಂದೇ ರೀತಿ ಇವೆ.
ಶ್ವಾಸಕೋಶದ ಕಾಯಿಲೆ
ಎರಡೂ ವೈರಸ್ ಮುಖ್ಯವಾಗಿ ಶ್ವಾಸಕೋಶವನ್ನು ಗುರಿಯಾಗಿಸಿಕೊಳ್ಳುತ್ತವೆ. ಇದರಿಂದಾಗಿ ಸೌಮ್ಯದಿಂದ ತೀವ್ರವಾದ ಸೋ೦ಕು ಉ೦ಟಾಗಲಿದ್ದು, ಈ ವೈರಸ್ ಶ್ವಾಸಕೋಶದ ಹನಿಗಳು ಮತ್ತು ಕಲುಷಿತ ಬಾಹ್ಯ ಸಂಪರ್ಕದ ಮೂಲಕ ಹರಡುತ್ತದೆ.
ಇದನ್ನೂ ಓದಿ: ಬೆಂಗಳೂರಿನ ಆಸ್ಪತ್ರೆಯಲ್ಲಿ 8 ತಿಂಗಳ ಮಗುವಿಗೆ HMPV ಸೋಂಕು ತಗುಲಿರುವ ಶಂಕೆ!
ಸಾಮಾನ್ಯ ಲಕ್ಷಣಗಳು
ಜ್ವರ, ಕೆಮ್ಮು, ಗಂಟಲು ನೋವು ಮತ್ತು ಉಸಿರಾಟದ ಸಮಸ್ಯೆ ಎರಡು ವೈರಸ್‌ನ ಸಾಮಾನ್ಯ ಲಕ್ಷಣವಾಗಿದ್ದು, HMPV ಮಧ್ಯಮ ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡಿದರೆ, COVID-19 ತೀವ್ರ ಅನಾರೋಗ್ಯಕ್ಕೆ ಕಾರಣವಾಗುತ್ತದೆ. COVID ನಿಂದ ಆಸ್ಪತ್ರೆಗೆ ದಾಖಲಾಗಬಹುದು & ಕೆಲವು ಸಂದರ್ಭಗಳಲ್ಲಿ ಸಾವಿಗೆ
HMPV vs COVID-19 : ಅಪಾಯ ಯಾರಿಗೆ?
ಮಕ್ಕಳು, ವೃದ್ಧರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಎರಡೂ ವೈರಸ್‌ಗಳಿಂದ ಹೆಚ್ಚಿನ ಅಪಾಯ ಎದುರಿಸುತ್ತಾರೆ. ವೈರಸ್ ತಡೆಗಟ್ಟುವಿಕೆಗೆ ಕೈ ಸ್ವಚ್ಛಗೊಳಿಸಿ, ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಮುಂತಾದ ಪ್ರಮಾಣಿತ ಮುನ್ನೆಚ್ಚರಿಕೆಗಳು ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: HMPV ಕೋವಿಡ್-19 ರಂತೆ ಹರಡುವುದಿಲ್ಲ: ರಾಜ್ಯ ಸರ್ಕಾರ