ಸರ್ಕಾರದಿಂದ ರೈತರಿಗೆ ಡಬಲ್ ಧಮಾಕ: ಬಗರ್ ಹುಕುಂ ಭೂಮಿಯ ಮಾಲಿಕತ್ವ ಅರ್ಜಿ ವಿಸ್ತರಣೆ; ಪ್ರತೀ ಹೆಕ್ಟೇರ್ ಗೆ ₹13,800 ಪರಿಹಾರ!

ಚಿತ್ರದುರ್ಗ: ಬಗರ್ ಹುಕುಂ ಭೂಮಿಯ ಮಾಲಿಕತ್ವ ಪಡೆಯಲು ಅರ್ಜಿ ಸಲ್ಲಿಕೆ ಅವಧಿಯನ್ನು ಒಂದು ವರ್ಷಗಳ ಕಾಲ ರಾಜ್ಯ ಸರ್ಕಾರ ವಿಸ್ತರಣೆ ಮಾಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಕಂದಾಯ ಸಚಿವ…

ಚಿತ್ರದುರ್ಗ: ಬಗರ್ ಹುಕುಂ ಭೂಮಿಯ ಮಾಲಿಕತ್ವ ಪಡೆಯಲು ಅರ್ಜಿ ಸಲ್ಲಿಕೆ ಅವಧಿಯನ್ನು ಒಂದು ವರ್ಷಗಳ ಕಾಲ ರಾಜ್ಯ ಸರ್ಕಾರ ವಿಸ್ತರಣೆ ಮಾಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್ ಅವರು, ಉಳುವವನೇ ಭೂಮಿಯ ಒಡೆಯ ಯೋಜನೆ ಜಾರಿಗೆ ಸರ್ಕಾರ ಬದ್ಧವಾಗಿದ್ದು, ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಯಾವುದೇ ಹಣ ಪಡೆಯದೆ, ಉಚಿತವಾಗಿ ಜಾಗದ ಹಕ್ಕು ನೀಡಿ, ನೋಂದಣಿ ಮಾಡಿ ಕೊಡಲಾಗುವುದು ಎಂದರು.

ಪ್ರತೀ ಹೆಕ್ಟೇರ್ ಗೆ ₹13,800 ಪರಿಹಾರ: ಅಶೋಕ್

Vijayaprabha Mobile App free

ಇನ್ನು, ಬೆಳೆಹಾನಿಯಾಗಿದ್ದರೆ ಪ್ರತೀ ಹೆಕ್ಟೇರ್ ಗೆ ₹13,800 ಪರಿಹಾರ ಸಿಗಲಿದೆ ಎಂದು ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಬೆಳೆಹಾನಿ ಬಗ್ಗೆ ಈಗಾಗಲೇ ಅಧಿಕಾರಿಗಳು ಸಮೀಕ್ಷೆ ನಡೆಸುತ್ತಿದ್ದು, ಆ್ಯಪ್​ಗೆ ಅಪ್ಲೋಡ್ ಮಾಡುತ್ತಾರೆ. ಇದು ಪೂರ್ಣಗೊಂಡ ಬಳಿಕ ತಿಂಗಳ ಒಳಗೆ ಬೆಳೆ ಪರಿಹಾರ ಒದಗಿಸುತ್ತೇವೆ.

ಪ್ರಕೃತಿ ವಿಕೋಪದಿಂದ ಸಾವನ್ನಪ್ಪುವ ಪ್ರಕರಣಗಳಿಗೂ 24 ಗಂಟೆಯೊಳಗೆ ಪರಿಹಾರ ನೀಡುವಂತೆ ತಹಶೀಲ್ದಾರ್ ಗಳಿಗೆ ಸೂಚಿಸಿದ್ದೇನೆಂದು ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.