ಖ್ಯಾತ ಗಾಯಕಿ ಲತಾ ಮಂಗೇಶ್ಕರ್ (92) ಅವರು ವಿಧಿವಶರಾಗಿದ್ದು, ಕಳೆದ 29 ದಿನಗಳಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಕೊರೋನಾ ಮತ್ತು ನ್ಯುಮೋನಿಯಾದಿಂದ ಚೇತರಿಸಿಕೊಂಡಿದ್ದರಿಂದ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ನಿನ್ನೆಯಷ್ಟೇ ವೈದ್ಯರು ಹೇಳಿದ್ದರು. ಇನ್ನು ಖ್ಯಾತ ಗಾಯಕಿ ಲತಾ ಮಂಗೇಶ್ಕರ್ 7 ದಶಕಗಳ ತನ್ನ ವೃತ್ತಿಜೀವನದಲ್ಲಿ ಅವರು, 30,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.
ಲತಾ ಮಂಗೇಶ್ಕರ್ ಹಿನ್ನಲೆ:
>ಜನನ: ಸೆಪ್ಟೆಂಬರ್ 28, 1929.
>ಜನ್ಮ ಸ್ಥಳ: ಮಧ್ಯಪ್ರದೇಶದ ಇಂದೋರ್.
>13 ನೇ ವಯಸ್ಸಿನಲ್ಲಿ ಗಾಯಕರಾಗಿ ವೃತ್ತಿಜೀವನ ಪ್ರಾರಂಭ.
>1947ರಲ್ಲಿ ಮಜ್ಬೂರ್ ಚಿತ್ರಕ್ಕೆ ಹಿನ್ನಲೆ ಗಾಯಕರಾಗಿ ಚಲನಚಿತ್ರ ವೃತ್ತಿಜೀವನ ಆರಂಭ.
>36 ರಾಷ್ಟ್ರೀಯ ಮತ್ತು ವಿದೇಶಿ ಭಾಷೆಗಳಲ್ಲಿ 30,000 ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿ.
ಲತಾ ಮಂಗೇಶ್ಕರ್ ಅವರಿಗೆ ಸಂದ ಅತ್ಯುನ್ನತ ಪ್ರಶಸ್ತಿಗಳು:
* 1969 ರಲ್ಲಿ ಪದ್ಮಭೂಷಣ ಪ್ರಶಸ್ತಿ
* 1989 ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ
* 1999 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ
* ಲತಾ ಮಂಗೇಶ್ಕರ್ ಅವರಿಗೆ 2001 ರಲ್ಲಿ ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಇವುಗಳಲ್ಲದೆ, ಫ್ರೆಂಚ್ ಸರ್ಕಾರವು ‘ದಿ ಲೀಜನ್ ಆಫ್ ಆನರ್ ಪ್ರಶಸ್ತಿ’ ಅನ್ನು ಲತಾ ಮಂಗೇಶ್ಕರ್ ಅವರಿಗೆ ನೀಡಿ ಗೌರವಿಸಿದೆ.