ನವದೆಹಲಿ: ಕೇಂದ್ರ ಸರ್ಕಾರವು ರೈತರಿಗಾಗಿ ಪ್ರಧಾನಿ ಕಿಸಾನ್ ಸಮ್ಮನ್ ನಿಧಿ ಯೋಜನೆಯನ್ನು ಬಹಳ ಮಹತ್ವಾಕಾಂಕ್ಷೆಯೊಂದಿಗೆ ಜಾರಿಗೆ ತಂದಿದೆ. ಈ ಯೋಜನೆಯಡಿ ಕೇಂದ್ರ ಸರಕಾರದಿಂದ ರೈತರು 6,000 ರೂ. ಪಡೆಯಬಹುದು. ಆದರೆ, ಈ ಹಣವು ಏಕಕಾಲದಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ಬರುವುದಿಲ್ಲ. ಮೂರು ಕಂತುಗಳಲ್ಲಿ ರೈತರ ಖಾತೆಗಳಿಗೆ ಜಮಾ ಆಗುತ್ತೆ. ಅಂದರೆ ಕಂತಿಗೆ 2,000 ರೂ.ಗಳಂತೆ ವಾರ್ಷಿಕ 6,000 ರೂ.ಗಳನ್ನು ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.
ಕೇಂದ್ರ ಸರ್ಕಾರ ಈಗಾಗಲೇ ಆರು ಕಂತುಗಳಲ್ಲಿ ಹಣವನ್ನು ರೈತರ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಿದೆ. ಈಗ ಕೇಂದ್ರ ಸರ್ಕಾರ ರೈತರಿಗೆ 7 ನೇ ರೂ. 2000 ಗಳನ್ನೂ ಇನ್ನೂ 25 ದಿನಗಳ ನಂತರ ಹಣವು ರೈತರ ಖಾತೆಗೆ ಜಮಾ ಆಗಲಿದೆ.
ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯ 7 ನೇ ಕಂತು 2,000 ರೂ.ಗಳನ್ನು ಡಿಸೆಂಬರ್ ಆರಂಭದಿಂದ ರೈತರ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಲಾಗುವುದು. ಕಳೆದ 23 ತಿಂಗಳಲ್ಲಿ ಕೇಂದ್ರ ಸರ್ಕಾರ ರೈತರ ಬ್ಯಾಂಕ್ ಖಾತೆಗಳಲ್ಲಿ 95 ಕೋಟಿ ರೂ. ಈ ಯಾಜನೆಯಲ್ಲಿ 11 ಕೋಟಿ ರೈತರು ನೇರವಾಗಿ ಲಾಭ ಪಡೆದಿದ್ದಾರೆ.
ಕೇಂದ್ರ ಸರ್ಕಾರ ಒದಗಿಸುವ ಪಿಎಂ ಕಿಸಾನ್ ಹಣ ಮೂರು ಕಂತುಗಳಲ್ಲಿ ರೈತರಿಗೆ ತಲುಪಲಿದೆ. ಮೊದಲ ಕಂತು ಡಿಸೆಂಬರ್ 1 ರಿಂದ ಮಾರ್ಚ್ 31 ರವರೆಗೆ ಪಾವತಿಸಲಾಗುವುದು. ಎರಡನೇ ಕಂತು ಏಪ್ರಿಲ್ 1 ರಿಂದ ಜುಲೈ 31 ರವರೆಗೆ ಲಭ್ಯವಿರುತ್ತದೆ. ಮೂರನೇ ಕಂತು ಆಗಸ್ಟ್ 1 ರಿಂದ ನವೆಂಬರ್ 30 ರವರೆಗೆ ಪಾವತಿಸಲಾಗುವುದು.
ಇನ್ನು ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯಲ್ಲಿ ರಾಜ್ಯ ಸರ್ಕಾರ ಕೂಡ ನಿಗದಿ 4000 ಮಾಡಿದ್ದೂ, 2 ಕಂತುಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಇದನ್ನು ಓದಿ: ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ; ಪಟಾಕಿ ನಿಷೇದ!