ಕಲ್ಕತ್ತ: ಮಮತಾ ಬ್ಯಾನರ್ಜಿ ಕೇಂದ್ರ ಭದ್ರತಾ ಪಡೆಗಳು ಬಿಜೆಪಿಗೆ ಸಹಾಯ ಮಾಡುತ್ತಿವೆ ಮತ್ತು ಮತದಾರರಿಗೆ ಮತದಾನ ಮಾಡುವುದನ್ನು ತಡೆಯುತ್ತಿದೆ ಎಂಬ ಆರೋಪಕ್ಕೆ ಚುನಾವಣಾ ಆಯೋಗವು ಮಮತಾ ಅವರಿಗೆ ನೋಟಿಸ್ ಕಳುಹಿಸಿದೆ. ಈ ಹಿಂದೆ ಆಯೋಗವು ‘ಮುಸ್ಲಿಮರು ಒಂದಾಗಿದ್ದಾರೆ’ ಎಂಬ ಹೇಳಿಕೆಯ ಮೇಲೆ ಮಮತಾ ಅವರಿಗೆ ನೋಟಿಸ್ ಕಳುಹಿಸಿತ್ತು. ನಿನ್ನೆ, ಏಪ್ರಿಲ್ 8 ರಂದು ಇಸಿ ಕಳುಹಿಸಿದ ಎರಡನೇ ನೋಟಿಸ್‌ನಲ್ಲಿ ಮಮತಾ ಬ್ಯಾನರ್ಜಿ ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ.
ನರೇಂದ್ರ ಮೋದಿ ಮೇಲೆ ಏಕೆ ಕ್ರಮ ತೆಗೆದುಕೊಳ್ಳುವುದಿಲ್ಲ?
ಚುನಾವಣಾ ಆಯೋಗ ದಿಂದ ನೋಟಿಸ್ ಪಡೆದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು, ‘ ನಾನು ಚುನಾವಣಾ ಪ್ರಚಾರದ ವೇಳೆ ನಾನು ಆಯೋಗದ ನಿಯಮ ಉಲ್ಲಂಘನೆ ಮಾಡಿದ್ದೇನೆ ಎಂದು ನನ್ನ ವಿರುದ್ಧ 10 ನೋಟಿಸ್ಗಳನ್ನು ನೀಡಿದ್ದಾರೆ. ಇದಕ್ಕೆಲ್ಲ ನಾನು ಹೆದರೋಲ್ಲ, ನಾನು ಎಲ್ಲರೂ ಸೇರಿ ಮತ ಚಲಾಯಿಸುವಂತೆ ಹೇಳಿದ್ದೇನೆ ಎಂದ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಷ್ಟು ದೂರುಗಳು ದಾಖಲಾಗಿವೆ? ನರೇಂದ್ರ ಮೋದಿ ಪ್ರತಿದಿನ ಹಿಂದೂ-ಮುಸ್ಲಿಂ ಬಗ್ಗೆ ಮಾಡುತ್ತಾರೆ, ಏಕೆ ಅವರ ವಿರುದ್ದ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ?’ ಎಂದು ದೀದಿ ಪ್ರಶ್ನಿಸಿದ್ದಾರೆ.