ಪ್ಯಾರಿಸ್ ಒಲಿಂಪಿಕ್ಸ್ ವಿಜೇತರಿಗೆ ನೀಡಲಾದ ಪದಕಗಳ ಗುಣಮಟ್ಟ ಅತ್ಯಂತ ಕಳಪೆ ಮಟ್ಟದ್ದಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಅಮೆರಿಕದ ಸ್ಕೇಟ್‌ಬೋರ್ಡರ್ ನೈಜಾ ಹ್ಯೂಸ್ಟನ್ ತಮ್ಮ ಕಂಚಿನ ಪದಕ ಕೆಲವೇ ದಿನಗಳಲ್ಲಿ ಮಾಸಿ ಹೋಗಿದೆ ಎಂದು ಆರೋಪಿಸಿದ್ದಾರೆ.
“ಕಂಚಿನ ಪದಕದ ಬಣ್ಣ ಮಾಸಿ ಹೋಹಿದೆ. ಪದಕದ ಮೇಲ್ಪದರ ಕಿತ್ತು ಬರಲಾರಂಭಿಸಿದೆ. ಇದು ನಾವು ನಿರೀಕ್ಷಿಸಿದಷ್ಟು ಉತ್ತಮ ಗುಣಮಟ್ಟ ಹೊಂದಿಲ್ಲ.
ಹಿಂದೆಂದು ಈ ರೀತಿ ಒಲಿಂಪಿಕ್ಸ್ ಪದಕ ಕಂಡಿಲ್ಲ. ಇದು ಅತ್ಯಂತ ಕಳಪೆ ಗುಣಮಟ್ಟ ಹೊಂದಿದೆ. ಇದನ್ನು ಜೋಪಾನವಾಗಿ ಇಡುವುದು ಹೇಗೆ ಎಂದು ತಿಳಿಯುತ್ತಿಲ್ಲ ಎಂದಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment