ಮೈಸೂರು :ಮೊದಲಿನ ಸಿದ್ದರಾಮಯ್ಯ ಅಲ್ಲ, ನಾನು ಬದಲಾಗುತ್ತೇನೆ. ಇನ್ಮುಂದೆ ವಿಪಕ್ಷಗಳ ಯಾವ ನಾಯಕರ ಮೇಲೂ ಕರುಣೆ ತೋರುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಆಕೋಶ್ರ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲರ ಕುರಿತು ಹೋಗ್ಲಿ ಬಿಡು ಅಂತ ನಾನು ಅಂತಿದ್ದೆ. ಅದೇ ನನಗೆ ಈಗ ಮುಳ್ಳಾಗ್ತಿದೆ. ವಿಪಕ್ಷಗಳ ಎಲ್ಲಾ ನಾಯಕರ ಹಳೇ ಕಥೆ ಓಪನ್ ಮಾಡ್ತೀನಿ. ದ್ವೇಷದ ರಾಜಕಾರಣ ಅಂದರೂ ಪರವಾಗಿಲ್ಲ. ನಾನು ಇನ್ಮುಂದೆ ಡೋಂಟ್ ಕೇರ್ ಎಂದು ವಿಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.
ತಪ್ಪೇ ಮಾಡದ ನನ್ನ ಮೇಲೆ ಬೀದಿ ಬೀದಿ ಸುತ್ತಿಕೊಂಡು ಸುಳ್ಳು ಹಬ್ಬಿಸಿ ನನ್ನ ಹೆಸರು ಕೆಡಿಸುತ್ತಿದ್ದಾರೆ. ನಾನು ಇನ್ಮೇಲೆ ವಿಪಕ್ಷಗಳ ವಿಚಾರದಲ್ಲಿ ತಾಳ್ಮೆಯಾಗಿರುವುದಿಲ್ಲ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment