SBI ನ ಹೊಸ ಯೋಜನೆ ಮತ್ತೆ ಬಂದಿದೆ; ಗ್ರಾಹಕರಿಗೆ ಹೆಚ್ಚು ಲಾಭ, ಕೊನೆಯ ದಿನಾಂಕ ಯಾವಾಗ? ಇಲ್ಲಿದೆ ನೋಡಿ

Vijayaprabha

ಎಸ್‌ಬಿಐ(SBI) : ಸಾರ್ವಜನಿಕ ವಲಯದ ದೈತ್ಯ ಬ್ಯಾಂಕ್ ಎಸ್‌ಬಿಐ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಈ ಹಿಂದೆ ಅವಧಿ ಮುಗಿದ ವಿಶೇಷ ಚಿಲ್ಲರೆ ಅವಧಿಯ ಠೇವಣಿ ಯೋಜನೆಯನ್ನು (Special Retail Term Deposit Scheme) ಮರಳಿ ತರುವುದಾಗಿ ಅದು ಘೋಷಿಸಿದೆ.

ಇದನ್ನು ಓದಿ: VIMUL ನಲ್ಲಿ ವಿವಿಧ ಹುದ್ದೆಗಳು; ಎಸ್‌ಎಸ್‌ಎಲ್‌ಸಿ, ಐಟಿಐ, ಪದವಿ ವಿದ್ಯಾರ್ಹತೆ, 25 ಏಪ್ರಿಲ್ ಕೊನೆ ದಿನ

ಹೌದು, ಎಸ್‌ಬಿಐ ಅಮೃತ್ ಕಲಶ ಠೇವಣಿ (Amrit Kalash deposit) 400 ದಿನಗಳ ಅವಧಿಯ ವಿಶೇಷ ನಿಶ್ಚಿತ ಠೇವಣಿ ಯೋಜನೆಯಾಗಿದೆ. ಈ ಹಿಂದೆ ಸ್ಟೇಟ್ ಬ್ಯಾಂಕ್ ಇದೇ ಅವಧಿಯಲ್ಲಿ ಇದನ್ನು ತಂದಿತ್ತು. 2023, ಫೆಬ್ರವರಿ 15 ರಂದು ಪರಿಚಯಿಸಲಾಯಿತು. ಇದಕ್ಕೆ ಸೇರಲು ಕೊನೆಯ ದಿನಾಂಕವನ್ನು ಮಾರ್ಚ್ 31 ಎಂದು ನಿಗದಿಪಡಿಸಲಾಗಿತ್ತು. ಆದರೆ.. ಈಗ 15 ದಿನಗಳ ನಂತರ ಮತ್ತೆ ಅದೇ ಯೋಜನೆಯನ್ನು ತರುತ್ತಿರುವುದಾಗಿ ಘೋಷಿಸಿ ಗ್ರಾಹಕರಿಗೆ ಸಂತಸದ ಸುದ್ದಿ ಎಸ್‌ಬಿಐ ನೀಡಿದೆ. ಎಸ್‌ಬಿಐ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಇದನ್ನು ಬಹಿರಂಗಪಡಿಸಿದ್ದು, ಗ್ರಾಹಕರಿಗೆ ಹೆಚ್ಚಿನ ಲಾಭವೆಂದರೆ ಈ ವಿಶೇಷ ಠೇವಣಿ ಯೋಜನೆಗೆ ಹೆಚ್ಚಿನ ಬಡ್ಡಿ ಸಿಗುತ್ತದೆ.

ಇದನ್ನು ಓದಿ: ಪಾನ್ ಕಾರ್ಡ್ ಹೊಂದಿರುವವರಿಗೆ ಬಿಗ್ ನ್ಯೂಸ್: ಪ್ಯಾನ್-ಆಧಾರ್ ಲಿಂಕ್ ಆಯ್ಕೆಯಲ್ಲಿ ಭಾರಿ ಬದಲಾವಣೆ!

ಎಸ್‌ಬಿಐ ವೆಬ್‌ಸೈಟ್ ಪ್ರಕಾರ, ಈ ವಿಶೇಷ ಠೇವಣಿ ಯೋಜನೆಯು (Special Deposit Scheme) ಏಪ್ರಿಲ್ 12 ರಿಂದ ಮತ್ತೆ ಪ್ರಾರಂಭವಾಗಿದ್ದು, ಇದರ ಅಡಿಯಲ್ಲಿ ಸಾಮಾನ್ಯ ಜನರು ಶೇಕಡಾ 7.10 ರ ಬಡ್ಡಿದರವನ್ನು ಪಡೆಯಬಹುದು. ಹಿರಿಯ ನಾಗರಿಕರು ಹೆಚ್ಚುವರಿ 50 (basis points) ಮೂಲ ಅಂಕಗಳನ್ನು ಪಡೆಯಲಿದ್ದು, ಈ ಲೆಕ್ಕಾಚಾರದಲ್ಲಿ ಅವರಿಗೆ ಶೇ.7.60 ಬಡ್ಡಿ ಸಿಗಲಿದೆ. ಈ ಯೋಜನೆಗೆ ಸೇರಲು ಕೊನೆಯ ದಿನಾಂಕ 2023, ಜೂನ್ 30 ಆಗಿದ್ದು, ಇನ್ನು 2 ತಿಂಗಳು ಮಾತ್ರ ಬಾಕಿ ಇದೆ.

ಇದನ್ನು ಓದಿ: ಪ್ರಧಾನಮಂತ್ರಿ ಟ್ರ್ಯಾಕ್ಟರ್ ಯೋಜನೆ: ಅದ್ಭುತ ಅವಕಾಶ, ಅರ್ಧ ಬೆಲೆಗೆ ಟ್ರ್ಯಾಕ್ಟರ್; ಅರ್ಹತೆ, ಅರ್ಜಿ ವಿವರ ಇಲ್ಲಿದೆ!

ಈ ಯೋಜನೆಯ ಭಾಗವಾಗಿ, ದೇಶೀಯ ಚಿಲ್ಲರೆ ಅವಧಿಯ ಠೇವಣಿ (Domestic Retail Term Deposits) ರೂ 2 ಕೋಟಿಗಿಂತ ಕಡಿಮೆ ಸ್ಥಿರ ಠೇವಣಿ ಮಾಡಬೇಕು. NRI ರೂಪಾಯಿ ಅವಧಿಯ ಠೇವಣಿಗಳೂ ಈ ಅವಕಾಶ ಲಭ್ಯವಿದ್ದು, ಹೊಸ ಠೇವಣಿ, ನವೀಕರಣ ಠೇವಣಿ, ಅವಧಿ ಠೇವಣಿ ಮತ್ತು ವಿಶೇಷ ಅವಧಿ ಠೇವಣಿಗಳಿಗೆ ಇದನ್ನು ಬಳಸಬಹುದು. ಇದರಲ್ಲಿ, SBI ಮಾಸಿಕ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಪ್ರತಿ 3 ತಿಂಗಳಿಗೊಮ್ಮೆ ಮತ್ತು 6 ತಿಂಗಳಿಗೊಮ್ಮೆ ಪಾವತಿಸುತ್ತದೆ.

ಇದನ್ನು ಓದಿ: TUMUL ನಲ್ಲಿ 219 ಹುದ್ದೆಗಳಿಗೆ ಅರ್ಜಿ ಅಹ್ವಾನ; ಮೂರೇ ದಿನ ಬಾಕಿ, ಇಂದೇ ಅರ್ಜಿ ಸಲ್ಲಿಸಿ

SBI ಯ ಸಾಮಾನ್ಯ ಬಡ್ಡಿದರಗಳ ವಿಷಯಕ್ಕೆ ಬಂದಾಗ, 7 ದಿನಗಳಿಂದ 10 ವರ್ಷಗಳ ಅವಧಿಯ ಸ್ಥಿರ ಠೇವಣಿಗಳ ಮೇಲಿನ ಬಡ್ಡಿಯು ಕನಿಷ್ಠ 3 ಪ್ರತಿಶತದಿಂದ ಗರಿಷ್ಠ 7 ಪ್ರತಿಶತದವರೆಗೆ ಬಡ್ಡಿ ಇರುತ್ತದೆ. ಮತ್ತು ಹಿರಿಯ ನಾಗರಿಕರ ವಿಷಯಕ್ಕೆ ಬಂದರೆ, ಇದು 3.50 ಪ್ರತಿಶತದಿಂದ 7.50 ಪ್ರತಿಶತದವರೆಗೆ ಇರುತ್ತದೆ. ಎಸ್‌ಬಿಐ ವಿ ಕೇರ್ ಠೇವಣಿ ಯೋಜನೆಯಡಿ (We Care Deposit Scheme), ಹೆಚ್ಚುವರಿ 50 ಬೇಸಿಸ್ ಪಾಯಿಂಟ್‌ಗಳ ಬಡ್ಡಿ ಲಭ್ಯವಿದೆ. SBI ಮತ್ತೊಂದು ವಿಶೇಷ ಠೇವಣಿ ಯೋಜನೆ ಸರ್ವೋತ್ತಮ್ FD ಕೂಡ ಇದೆ.

ಇದನ್ನು ಓದಿ: Google Pay ನಲ್ಲಿ ಸಿಬಿಲ್ ಸ್ಕೋರ್ ಉಚಿತವಾಗಿ ಪರಿಶೀಲಿಸಬಹುದು; ಸ್ಟೆಪ್ ಬೈ ಸ್ಟೆಪ್ ಪ್ರೊಸಸ್ ಇಲ್ಲಿದೆ ನೋಡಿ

Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version