ಇಂದಿನಿಂದ ಐಪಿಎಲ್‌ ಆರಂಭ; ಏನಿದು ʻಇಂಪ್ಯಾಕ್ಟ್ ಪ್ಲೇಯರ್ʼ ನಿಯಮ ಏನು? ಆವೃತ್ತಿಯ ವಿಶೇಷತೆಗಳೇನು?

Vijayaprabha

ಇಂದಿನಿಂದ ಐಪಿಎಲ್‌ (IPL) 16 ಅದ್ದೂರಿ ಆರಂಭ ಕಾಣಲಿದೆ. ಇಂದು ಸಂಜೆ 7.30ಕ್ಕೆ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಮೊದಲ ಪಂದ್ಯದಲ್ಲಿ ಸಿಎಸ್‌ಕೆ ಹಾಲಿ ಚಾಂಪಿಯನ್‌ ಗುಜರಾತ್‌ ತಂಡವನ್ನು ಎದುರಿಸಲಿದೆ. ಅದಕ್ಕೂ ಮೊದಲು ಗ್ರ್ಯಾಂಡ್‌ ಓಪನಿಂಗ್‌ ಸೆರಮನಿ ನಡೆಯಲಿದೆ. ಕನ್ನಡತಿ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ತಾರೆಯರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಈ ಐಪಿಎಲ್‌ನಲ್ಲಿ ಒಟ್ಟು 70 ಲೀಗ್‌, 3 ಪ್ಲೇ-ಆಫ್‌ ಹಾಗೂ ಒಂದು ಫೈನಲ್‌ ಪಂದ್ಯ ನಡೆಯಲಿದೆ.

ಇದನ್ನು ಓದಿ: ಇಂದಿನಿಂದ ಐಪಿಎಲ್‌ ಹಬ್ಬ: IPL ಉದ್ಘಾಟನಾ ಸಮಾರಂಭದಲ್ಲಿ ಸೊಂಟ ಬಳುಕಿಸಲಿದ್ದಾರೆ ರಶ್ಮಿಕಾ ಮಂದಣ್ಣ, ಮಿಲ್ಕಿ ಬ್ಯೂಟಿ ತಮನ್ನಾ

IPL 2023: ʻಇಂಪ್ಯಾಕ್ಟ್ ಪ್ಲೇಯರ್ʼ ನಿಯಮ ಏನು?

ಐಪಿಎಲ್ 16ನೇ ಸೀಸನ್ ನಾಳೆಯಿಂದ ಆರಂಭವಾಗಲಿದೆ. ಈ ಋತುವಿನಲ್ಲಿ ಹಲವು ಹೊಸ ನಿಯಮಗಳನ್ನು ಅಳವಡಿಸಲಾಗಿದೆ. ಇವುಗಳಲ್ಲಿ ಒಂದು ಇಂಪ್ಯಾಕ್ಟ್ ಪ್ಲೇಯರ್ ನಿಯಮ. ಈ ನಿಯಮದ ಅನುಸಾರ ಪಂದ್ಯದ ಮಧ್ಯದಲ್ಲಿ ತಮ್ಮ ತಂಡದಲ್ಲಿನ ಒಬ್ಬ ಆಟಗಾರನನ್ನು ಬದಲಿಸಲು ಎರಡೂ ತಂಡಗಳಿಗೆ ಅವಕಾಶವಿದೆ. ಇದಕ್ಕಾಗಿ ಟಾಸ್ ನಂತರ ನಾಯಕರು ತಮ್ಮ ನಾಲ್ವರು ಬದಲಿ ಆಟಗಾರರು ಯಾರು ಎಂದು ಹೇಳಬೇಕಾಗುತ್ತದೆ. ಇವರಲ್ಲಿ ಒಬ್ಬರಿಗೆ ಆಡಲು ಅವಕಾಶ ಕೊಡಬಹುದು.

ಇದನ್ನು ಓದಿ: ಎಣ್ಣೆ ಹೊಡೆದಾಗ ಕೊಹ್ಲಿ ಸ್ಥಿತಿ ಹೇಗಿರುತ್ತೆ.. ವಿರಾಟ್ ಕೊಹ್ಲಿ ಕುಡಿತದ ಸೀಕ್ರೆಟ್‌ ಬಿಚ್ಚಿಟ್ಟ ಪತ್ನಿ ಅನುಷ್ಕಾ ಶರ್ಮಾ

IPL 16ನೇ ಆವೃತ್ತಿಯ ವಿಶೇಷತೆಗಳೇನು?

* ಈ ಬಾರಿ ಟೂರ್ನಿಯಲ್ಲಿ 10 ತಂಡಗಳು ಭಾಗಿಯಾಗಿವೆ.

* ಪ್ರತಿ ತಂಡವೂ 7 ಪಂದ್ಯಗಳನ್ನು ತವರಿನ ಕ್ರೀಡಾಂಗಣದಲ್ಲಿ ಆಡಲಿವೆ

*16ನೇ ಆವೃತ್ತಿಯೂ ಒಟ್ಟು 52 ದಿನಗಳ ಕಾಲ ನಡೆಯಲಿದೆ

* ಟೂರ್ನಿಯಲ್ಲಿ ಒಟ್ಟು 70 ಲೀಗ್‌ ಪಂದ್ಯಗಳು ನಡೆಯಲಿದೆ

* ಈ ಬಾರಿಯ ಪಂದ್ಯಗಳು ದೇಶದ 12 ಕ್ರೀಡಾಂಗಣದಲ್ಲಿ ನಡೆಯಲಿವೆ

* 10 ತಂಡಗಳ ಪೈಕಿ 3 ತಂಡಗಳನ್ನು (ಡೆಲ್ಲಿ ಕ್ಯಾಪಿಟಲ್ಸ್‌, ಸನ್‌ರೈಸರ್ಸ್‌ ಹೈದರಾಬಾದ್‌, ಆರ್‌ಸಿಬಿ) ವಿದೇಶಿ ಆಟಗಾರರು ಮುನ್ನಡೆಸಲಿದ್ದಾರೆ.

ಇದನ್ನು ಓದಿ: KPSC ಯಲ್ಲಿ 47 ಸಹಕಾರಿ ಸಂಘಗಳ ನಿರೀಕ್ಷಕರ ಹುದ್ದೆಗಳು; Degree ವಿದ್ಯಾರ್ಹತೆ, ಈಗಲೇ ಅರ್ಜಿ ಸಲ್ಲಿಸಿ

Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version