2000 rupee note: 2000 ರೂಪಾಯಿ ನೋಟುಗಳ ಕುರಿತು RBI ಮಹತ್ವದ ಘೋಷಣೆ

Vijayaprabha

2,000 rupee note: ಭಾರತೀಯ ರಿಸರ್ವ್ ಬ್ಯಾಂಕ್ 2000 ರೂ. ನೋಟುಗಳ ಡೆಪಾಸಿಟ್ ಮಾಡಲು ಅಥವಾ ಬದಲಾಯಿಸಿಕೊಳ್ಳಲು ಕೊನೆ ದಿನಾಂಕವನ್ನು ಅಕ್ಟೋಬರ್ 7 ನೇ ತಾರೀಖಿಗೆ ಗಡುವನ್ನು ವಿಸ್ತರಿಸಿ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಇಂದಿನಿಂದ ಈ ರಾಶಿಯರಿಗೆ ಭಾರೀ ಅದೃಷ್ಟ..!

ಹೌದು, ಈ ಹಿಂದೆ ಭಾರತೀಯ ರಿಸರ್ವ್ ಬ್ಯಾಂಕ್ ನೋಟುಗಳ 2000 ರೂ ವಿನಿಮಯದ ಮಾಡಿಕೊಳ್ಳಲು ಸೆಪ್ಟೆಂಬರ್ 30ಕ್ಕೆ ಗಡುವು ನಿಗದಿಪಡಿಸಿತ್ತು. ಆದರೆ, ₹2,000 ಮುಖಬೆಲೆಯ ನೋಟುಗಳ ವಿನಿಮಯದ ಮಾಡಿಕೊಳ್ಳಲು ಅಕ್ಟೋಬರ್ 7 ರವರೆಗೆ ನೋಟು ಬದಲಾಯಿಸಲು ಅವಕಾಶ ನೀಡಿರುವುದಾಗಿ ಪ್ರಕಟಿಸಿದೆ.

2000 rupee note

ಅಲ್ಲದೆ, ಈವರೆಗೆ 96ರಷ್ಟು ಮಾತ್ರ ನೋಟುಗಳು ತಲುಪಿದ್ದು, ಉಳಿದ ನೋಟುಗಳ ವಿನಿಮಯಕ್ಕೆ ಅವಧಿ ವಿಸ್ತರಿಸಿ RBI ಪ್ರಕಟಣೆ ಹೊರಡಿಸಿದೆ. ಮೇ.19ರಂದು ₹2,000 ನೋಟುಗಳನ್ನು ಹಿಂಪಡೆದುಕೊಳ್ಳುವುದಾಗಿ ಆದೇಶಿಸಿತ್ತು.

ಇದನ್ನೂ ಓದಿ: ಬಿಗ್ ಬಾಸ್ ಗೆ ಜೊತೆ ಜೊತೆಯಲಿ ಖ್ಯಾತಿಯ ಮೇಘಾಶೆಟ್ಟಿ ? ಕೊನೆಗೂ ಸಿಕ್ತು ಉತ್ತರ

2019ರಲ್ಲಿ ಚಲಾವಣೆಯಲ್ಲಿದ್ದ 3.56 ಲಕ್ಷ ಕೋಟಿ ಎರಡು ಸಾವಿರ ರೂ. ಮೌಲ್ಯದ ನೋಟುಗಳಲ್ಲಿ, ಈಗಾಗಲೇ 3.24 ಲಕ್ಷ ಕೋಟಿಯಷ್ಟು ಬ್ಯಾಂಕಿಗೆ ವಾಪಾಸ್ಸಾಗಿವೆ. ಅದರರ್ಥ ಪ್ರಸ್ತುತವಾಗಿ 0.14 ಲಕ್ಷ ಕೋಟಿಯ ನೋಟುಗಳಷ್ಟೆ ಚಾಲ್ತಿಯಲ್ಲಿವೆ, 96% ನೋಟುಗಳು ಮರಳಿವೆ.

2 ಸಾವಿರ ರೂಪಾಯಿ ನೋಟುಗಳ ಪೈಕಿ ಶೇ.93ರಷ್ಟು ನೋಟುಗಳು ಬ್ಯಾಂಕ್‌ಗಳಿಗೆ ವಾಪಸಾಗಿದ್ದು, ಇನ್ನೂ ವಿನಿಮಯ ಮಾಡಿಕೊಳ್ಳದವರು ಬ್ಯಾಂಕ್‌ಗಳು ಮತ್ತು ಅಂಚೆ ಕಚೇರಿಗಳಲ್ಲಿ ವಿನಿಮಯ ಮಾಡಿಕೊಳ್ಳಬೇಕು ಎಂದು ಹೇಳಿದೆ.

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ ಇಲ್ಲಿಕ್ಲಿಕ್ಮಾಡಿ
Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version