LPG Cylinder Price: ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಬಿಗ್ ಶಾಕ್; LPG ಸಿಲಿಂಡರ್ ದರ ಭಾರೀ ಏರಿಕೆ

Vijayaprabha

LPG Cylinder Price: LPG ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಕೆಟ್ಟ ಸುದ್ದಿ. ಸಿಲಿಂಡರ್ ದರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಲವಾಗಿದ್ದು, ಇಂದಿನಿಂದಲೇ ಹೊಸ ದರ ಜಾರಿಗೆ ಬಂದಿದೆ. ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆ ನಿರ್ಧಾರ ಕೆಲವರಿಗೆ ಮಾತ್ರ ಅನ್ವಯಿಸುತ್ತದೆ. ಆದರೆ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಬೆಲೆ ಸ್ಥಿರವಾಗಿದೆ. ಬದಲಾವಣೆ ಇಲ್ಲ.

ಇದನ್ನೂ ಓದಿ: 2000 ರೂಪಾಯಿ ನೋಟುಗಳ ಕುರಿತು RBI ಮಹತ್ವದ ಘೋಷಣೆ

LPG Cylinder Price: ವಾಣಿಜ್ಯ ಬಳಕೆಯ LPG ಸಿಲಿಂಡರ್‌ ಬೆಲೆ ಭಾರಿ ಏರಿಕೆ

LPG Cylinder Price

ಹಬ್ಬ ಹರಿದಿನಕ್ಕೂ ಮುನ್ನವೇ ಸಿಲಿಂಡರ್ ಬೆಲೆ ಏರಿಕೆಯಿಂದ ಸಾಕಷ್ಟು ಮಂದಿ ಕಂಗಾಲಾಗಿದ್ದಾರೆ ಎನ್ನಬಹುದು. ಬೆಂಗಳೂರು ನಗರದಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್‌ ಬೆಲೆ ಕಳೆದ 209 ರೂಪಾಯಿ ಏರಿಕೆಯಾಗಿದೆ. ದೆಹಲಿಯಲ್ಲಿ ಸಿಲಿಂಡರ್ ಬೆಲೆ ರೂ. 209 ಹೆಚ್ಚಿಸಲಾಗಿದೆ. ಮತ್ತು ಕೋಲ್ಕತ್ತಾದಲ್ಲಿ ಸಿಲಿಂಡರ್ ಬೆಲೆ ರೂ. 203 ಜಿಗಿದಿದೆ. ಅದೇ ರೀತಿ ಮುಂಬೈನಲ್ಲಿ ಸಿಲಿಂಡರ್ ಬೆಲೆ 202 ರೂ. ಮತ್ತು ಚೆನ್ನೈನಲ್ಲಿ ಸಿಲಿಂಡರ್ ದರ ರೂ. 203 ಏರಿಕೆ ಕಂಡಿದೆ. ದರ ಏರಿಕೆಯು 19 ಕೆಜಿ ಸಿಲಿಂಡರ್ ಬೆಲೆಗೆ ಅನ್ವಯಿಸುತ್ತದೆ.

ಇದನ್ನೂ ಓದಿ: ಇಂದಿನಿಂದ ಈ ರಾಶಿಯರಿಗೆ ಭಾರೀ ಅದೃಷ್ಟ..!

ಆದರೆ ಮೋದಿ ಸರಕಾರ ಕಳೆದ ತಿಂಗಳು ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು 200 ರೂ ಕಡಿತಗೊಳಿಸಿತ್ತು. ಆದರೆ ಆಗ 19 ಕೆಜಿ ಸಿಲಿಂಡರ್ ಬೆಲೆ ರೂ.157ಕ್ಕೆ ಇಳಿದಿತ್ತು. ಅಂದರೆ ಆಗ 19 ಕೆಜಿ ಸಿಲಿಂಡರ್ ದರ ಕಡಿಮೆಯಾಗಿದೆ ಈಗ ಹೆಚ್ಚಾಗಿದೆ ಎನ್ನಬಹುದು.

ವಿವಿಧ ನಗರಗಳ ಸಿಲಿಂಡರ್‌ ಬೆಲೆ

ಬೆಂಗಳೂರು ನಗರದಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್‌ ಬೆಲೆ ಕಳೆದ ತಿಂಗಳು 1,609.50 ಇತ್ತು. ಇದೀಗ 209 ರೂಪಾಯಿ ಹೆಚ್ಚಳದೊಂದಿಗೆ 1,818 ರೂಪಾಯಿಗೆ ಏರಿಕೆಯಾಗಿದೆ. ದೆಹಲಿಯಲ್ಲಿ ಸಿಲಿಂಡರ್ ಬೆಲೆ ರೂ.1522 ರಿಂದ ರೂ. 1731 ರಲ್ಲಿ ಏರಿಕೆಯಾಗಿದೆ. ಕೋಲ್ಕತ್ತಾದಲ್ಲಿ ಸಿಲಿಂಡರ್ ಬೆಲೆ ರೂ.1636 ರಿಂದ ರೂ.1839 ಕ್ಕೆ ಏರಿಕೆಯಾಗಿದೆ. ಮುಂಬೈನಲ್ಲಿ ಸಿಲಿಂಡರ್ ಬೆಲೆ ಇದುವರೆಗೆ 1482 ಇತ್ತು. ಆದರೆ ಈಗ ರೂ.1684ಕ್ಕೆ ಏರಿಕೆಯಾಗಿದೆ. ಅಲ್ಲದೆ, ಚೆನ್ನೈನಲ್ಲಿ ಸಿಲಿಂಡರ್ ಬೆಲೆ ರೂ.1898 ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ:ಬಿಗ್ ಬಾಸ್ ಗೆ ಜೊತೆ ಜೊತೆಯಲಿ ಖ್ಯಾತಿಯ ಮೇಘಾಶೆಟ್ಟಿ ? ಕೊನೆಗೂ ಸಿಕ್ತು ಉತ್ತರ

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ ಇಲ್ಲಿಕ್ಲಿಕ್ಮಾಡಿ
Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version