drinking water: ದಿನಕ್ಕೆ ಎಷ್ಟು ನೀರು ಕುಡಿಯಬೇಕು? ನೀರು ಕುಡಿಯದಿದ್ದರೆ ಏನಾಗುತ್ತದೆ ಗೊತ್ತಾ..?

drinking water: ನಾವು ಆರೋಗ್ಯ ಮತ್ತು ಸದೃಢವಾಗಿರಲು ಬಯಸಿದರೆ, ಪ್ರತಿದಿನ ಸಾಕಷ್ಟು ನೀರು ಕುಡಿಯುವುದು ಅಗತ್ಯ. ಆದರೆ ಕಡಿಮೆ ನೀರು ಅಥವಾ ಜಾಸ್ತಿ ತೆಗೆದುಕೊಂಡರೂ ಆರೋಗ್ಯಕ್ಕೆ ಹಾನಿಯಾಗುವ ಸಂಭವವಿದೆ. ದಿನಕ್ಕೆ ಎಷ್ಟು ನೀರು ಕುಡಿಯಬೇಕು? ನೀರು ಕುಡಿಯದಿದ್ದರೆ ಏನಾಗುತ್ತದೆ ಗೊತ್ತಾ..? ತಿಳಿದುಕೊಳ್ಳೋಣ

Vijayaprabha

drinking water: ನಾವು ಆರೋಗ್ಯ ಮತ್ತು ಸದೃಢವಾಗಿರಲು ಬಯಸಿದರೆ, ಪ್ರತಿದಿನ ಸಾಕಷ್ಟು ನೀರು ಕುಡಿಯುವುದು ಅಗತ್ಯ. ಆದರೆ ಕಡಿಮೆ ನೀರು ಅಥವಾ ಜಾಸ್ತಿ ತೆಗೆದುಕೊಂಡರೂ ಆರೋಗ್ಯಕ್ಕೆ ಹಾನಿಯಾಗುವ ಸಂಭವವಿದೆ.

ಇದನ್ನು ಓದಿ: ಬೆಂಗಳೂರು ನೀರಿನ ಸಮಸ್ಯೆ; ಕನ್ನಡದಲ್ಲಿ ಟ್ವೀಟ್​ ಮಾಡಿ ಪರಿಹಾರ ತಿಳಿಸಿದ ಮೆಗಾ ಸ್ಟಾರ್​

ಹೌದು, ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ನ ಅಧ್ಯಯನ ಪ್ರಕಾರ, ಪುರುಷರು ದಿನಕ್ಕೆ 3.7 ಲೀಟರ್‌ಗಿಂತ 5 ಲೀಟರ್ಗಳಷ್ಟು ಕುಡಿಯಬಹುದು. ಮಹಿಳೆಯರು 2.7 ಲೀಟರ್ ನಿಂದ 4 ಲೀಟರ್ ವರೆಗೆ ಕುಡಿಯಬಹುದು. ಇದು ಬೇಸಿಗೆಯಲ್ಲಿ ಹೆಚ್ಚು ನಿರ್ಜಲೀಕರಣಕ್ಕೆ ಕಾರಣವಾಗುವುದರಿಂದ ಹೆಚ್ಚು ನೀರು ಕುಡಿಯುವುದು ಒಳ್ಳೆಯದಲ್ಲ ಎಂದಿದೆ.

drinking water: ಸಾಕಷ್ಟು ನೀರು ಕುಡಿಯದಿದ್ದರೆ ಏನಾಗುತ್ತದೆ..?

How much drinking water drink per day
  • ದೇಹದಲ್ಲಿ ನೀರಿನ ಕೊರತೆಯಾದರೆ ಅನೇಕ ಸಮಸ್ಯೆಗಳು ಎದುರಾಗುತ್ತವೆ.
  • ಮೂತ್ರದ ಸೋಂಕು, ಮಲಬದ್ಧತೆ, ಅಜೀರ್ಣ, ಮುಖದಲ್ಲಿ ಮೊಡವೆಗಳಂತಹ ಸಮಸ್ಯೆಗಳು ಬರುತ್ತವೆ.
  • ನೀರಿನ ಕೊರತೆಯು ಮೂತ್ರಪಿಂಡಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಮೂತ್ರನಾಳದ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.
  • ಇಂತಹ ಸಮಸ್ಯೆಗಳಿಂದ ದೂರವಿರಲು ಪ್ರತಿದಿನ ಕನಿಷ್ಠ ನಾಲ್ಕು ಲೀಟರ್ ನೀರು ಕುಡಿಯಬೇಕು ಎನ್ನುತ್ತಾರೆ ತಜ್ಞರು.

ಇದನ್ನು ಓದಿ:ನಿಮ್ಮ ಹಲ್ಲುಗಳು ಹುಳುಕಾಗಿವೆಯೇ? ಹಲ್ಲು ನೋವಿಗೆ ಸಿಂಪಲ್‌ ಮನೆ ಮದ್ದು

drinking water: ಬೆಳಗ್ಗೆ ಎದ್ದ ಕೂಡಲೇ ಎಷ್ಟು ನೀರು ಕುಡಿಯಬೇಕು ಗೊತ್ತಾ?

  • ಬೆಳಗ್ಗೆ ಎದ್ದ ಕೂಡಲೇ 650 ಮಿ.ಲೀ. ನೀರನ್ನು ಕುಡಿಯಬೇಕು. ದಿನ ಕಳೆದಂತೆ ಇದರ ಪ್ರಮಾಣವನ್ನು ಹೆಚ್ಚಿಸುತ್ತಾ ಹೋಗಬೇಕು.
  • ಹಲ್ಲುಜ್ಜುವ ಮೊದಲು ನೀರು ಕುಡಿಬೇಕು.
  • ಒಂದು ಲೋಟ ಬಿಸಿ ನೀರು ಕುಡಿದರೆ ಅದರಿಂದ ಜೀರ್ಣಕ್ರಿಯೆ ಸುಧಾರಣೆ ಆಗುವುದು ಮತ್ತು ಚಯಾಪಚಯ ಕ್ರಿಯೆಗೆ ಇದು ಸಹಕಾರಿ.
  • ನೀರು ಜೀರ್ಣಕ್ರಿಯೆಯನ್ನು ಉತ್ತೇಜಿಸುವುದು ಮತ್ತು ದಿನದ ಕಾರ್ಯಗಳಿಗೆ ಸಜ್ಜಾಗುವಂತೆ ಮಾಡುವುದು.
  • ಆಹಾರದ ಕಣಗಳು ಸರಿಯಾದ ರೀತಿಯಲ್ಲಿ ವಿಘಟನೆಯಾಗಿ ಪೋಷಕಾಂಶಗಳನ್ನು ಹೀರಿಕೊಳ್ಳುವಂತೆ ಮಾಡುವುದು.

ಇದನ್ನು ಓದಿ:  2 ಉಚಿತ ಗ್ಯಾಸ್ ಸಿಲೆಂಡ‌ರ್; ಯಾರಿಗೆ ಸಿಗುತ್ತೆ? ಅರ್ಜಿ ಸಲ್ಲಿಸುವುದು ಹೇಗೆ?

ವಾಟ್ಸಾಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ ಇಲ್ಲಿಕ್ಲಿಕ್ಮಾಡಿ
Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version