ಪಡಿತರ ಚೀಟಿಯಲ್ಲಿ ಎಷ್ಟು ವಿಧಗಳಿವೆ, ನಿಮ್ಮ ಕಾರ್ಡ್ ಯಾವ ವರ್ಗಕ್ಕೆ ಸೇರುತ್ತದೆ? ಈ ಕಾರ್ಡ್ ಇದ್ದವರಿಗೆ ಈ ಸೌಲಭ್ಯ..!

Vijayaprabha

Ration card: ಪಡಿತರ ಚೀಟಿಯನ್ನು ಬಡವರ ಗುರುತಿನ ಚೀಟಿ ಎಂದು ಕರೆಯಲಾಗುತ್ತದೆ. ಇದನ್ನು ರಾಜ್ಯ ಸರ್ಕಾರಗಳು ಹೊರಡಿಸುತ್ತವೆ. ಅರ್ಹ ಕುಟುಂಬಗಳು ಈ Card ಮೂಲಕ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ ಸಬ್ಸಿಡಿ ದರದಲ್ಲಿ ಆಹಾರ ಸರಕುಗಳನ್ನು ಖರೀದಿಸಬಹುದು. ಬಡತನ ರೇಖೆಗಿಂತ ಕೆಳಗಿರುವವರಿಗೆ ಹಾಗೂ ಇತರರಿಗೆ ಈ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಪಡಿತರ ಚೀಟಿ ಎಂದರೆ ಒಂದೇ ಎಂದು ಹಲವರು ಭಾವಿಸುತ್ತಾರೆ. ಆದರೆ, ಇದರಲ್ಲೂ ಹಲವು ವಿಧಗಳಿವೆ ಎಂಬುದು ತಿಳಿದಿಲ್ಲ. ಪ್ರಸ್ತುತ ದೇಶದಲ್ಲಿ 5 ವಿಧದ ಪಡಿತರ ಚೀಟಿಗಳನ್ನು ನೀಡಲಾಗಿದೆ.

ಇದನ್ನು ಓದಿ: Aadhaar card ಹೊಂದಿರುವವರಿಗೆ ಎಚ್ಚರಿಕೆ; ಇಂತಹ ಆಧಾರ್ ಕಾರ್ಡ್ ರದ್ದು, ಕೇಂದ್ರದ ಪ್ರಮುಖ ನಿರ್ಧಾರ!

ಆದ್ಯತಾ ಗೃಹ ಪಡಿತರ ಚೀಟಿ (Priority Housing Ration Card) – PHH

ಅಂತ್ಯೋದಯ ಪಡಿತರ ಚೀಟಿಗೆ ಒಳಪಡದ ಅರ್ಹ ಕುಟುಂಬಗಳಿಗೆ ರಾಜ್ಯ ಸರ್ಕಾರಗಳು ಈ ಪಡಿತರ ಚೀಟಿಗಳನ್ನು ನೀಡುತ್ತವೆ. ಪ್ರತಿ ಕುಟುಂಬದ ಸದಸ್ಯರಿಗೆ ತಿಂಗಳಿಗೆ 5 ಕೆಜಿ ಅಕ್ಕಿ ನೀಡಲಾಗುತ್ತದೆ. ಇದನ್ನು ಟ್ರಾನ್ಸ್ಜೆಂಡರ್ಸ್, 40 ಪ್ರತಿಶತ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು, ಬುಡಕಟ್ಟು ಗುಂಪುಗಳಿಗೆ ಸೇರಿದ ಕುಟುಂಬಗಳು, ಭೂರಹಿತರು ಮತ್ತು ವಿಧವಾ ಪಿಂಚಣಿ ಪಡೆಯುವ ವರ್ಗಗಳಿಗೆ ನೀಡಲಾಗುತ್ತದೆ.

ಇದನ್ನು ಓದಿ: Vodafone Idea: ನೀವು ಈ ಸಿಮ್ ಬಳಸುತ್ತಿದ್ದೀರಾ? ಭರ್ಜರಿ ಸಿಹಿಸುದ್ದಿ..181ರೂ, 599ರೂಗೆ ಅದ್ಭುತ ಕೊಡುಗೆ!

ಅಂತ್ಯೋದಯ ಪಡಿತರ ಚೀಟಿ (AAY)

ಬಡತನ ರೇಖೆಗಿಂತಲೂ ಕೆಳಗಿರುವ ನಿರಾಶ್ರಿತ ಕುಟುಂಬಗಳಿಗೆ ಈ ಅಂತ್ಯೋದಯ ಕಾರ್ಡ್ (Antyodaya Ration Card) ಅನ್ನು ನೀಡಲಾಗುತ್ತದೆ. ಈ ಕಾರ್ಡ್ ಇರುವವರಿಗೆ ತಿಂಗಳಿಗೆ 35 ಕಿಲೋ ಆಹಾರ ಪದಾರ್ಥಗಳು ಸಿಗುತ್ತವೆ. ಯಾವುದೇ ಸ್ಥಿರವಾದ ಆದಾಯ ಇಲ್ಲದ ಅವರು, 65 ವರ್ಷ ವಯಸ್ಸಿನ ಮಹಿಳೆ ಅಥವಾ ಪುರುಷನು ಒಬ್ಬನೇ ಇರುವ ಅವರಿಗೆ, ರಿಕ್ಷಾ ತುಳಿಯುವರಿಗೆ, ಕೂಲಿಗಳಿಗೆ, ದಿನ ಕೂಲಿಗಳಿಗೆ ನೀಡುವವರು.

ಇದನ್ನು ಓದಿ: WhatsApp ಮೂಲಕ LPG ಸಿಲಿಂಡರ್‌ ಬುಕ್ ಮಾಡುವುದು ಹೇಗೆ? Indane, HP, ಭಾರತ್ ಗ್ಯಾಸ್ ಬುಕ್ ಮಾಡುವ ಸುಲಭ ವಿಧಾನ

ಏಬೋ ಪಾವರ್ಟಿ ಲೈನ್ ರೇಷನ್ ಕಾರ್ಡ್ (APL)

ಎಪಿಎಲ್ (APL) ಪಡಿತರ ಚೀಟಿಯನ್ನು ಬಡತನ ರೇಖೆಗಿಂತ ಮೇಲೆ ಇರುವ ಕುಟುಂಬಗಳಿಗೆ ನೀಡಲಾಗಿದೆ. ಈ ಕಾರ್ಡ್ ಮೇಲೆ ಸರಕುಗಳಿಗೆ ಮಿತಿ ಇರುತ್ತದೆ. ಅಕ್ಕಿ ಮುಂತಾದ ಕನಿಷ್ಠ ಆಹಾರ ಪದಾರ್ಥಗಳನ್ನು ಒದಗಿಸಲಾಗುವುದಿಲ್ಲ. ಗುಲಾಬಿ ಪಡಿತರ ಚೀಟಿ ಎನ್ನುತ್ತಾರೆ.

ಇದನ್ನು ಓದಿ: ಪಡಿತರ ಚೀಟಿದಾರರಿಗೆ ಸರ್ಕಾರದಿಂದ ಭರ್ಜರಿ ಗಿಫ್ಟ್; ಅಕ್ಕಿ ಜೊತೆ ಈ ವಸ್ತುಗಳು ಉಚಿತವಾಗಿ ಸಿಗಲಿವೆ!

ಬಿಲೋ ಪಾವರ್ಟಿ ಲೈನ್ ಪಡಿತರ ಚೀಟಿ (BPL)

ಬಡತನ ರೇಖೆಯ ಕೆಳಗೆ ಇರುವ ಕುಟುಂಬಗಳಿಗೆ BPL ರೇಷನ್ ಕಾರ್ಡ್ ಅನ್ನು ನೀಡಲಾಗುತ್ತದೆ.ಈ ಕಾರ್ಡನ್ನು ಬಡ ಕುಟುಂಬಗಳಿಗೆ ಸೇರಿದವರಿಗೆ ನೀಡುತ್ತಾರೆ. BPL ರೇಷನ್ ಕಾರ್ಡ್ ಅನ್ನು ಹೊಂದಿರುವವರಿಗೆ ಪ್ರತಿ ಕುಟುಂಬಕ್ಕೆ 10 ರಿಂದ 20 ಕೇಜಿಗಳವರೆಗೆ ಆಹಾರ ಸರಕುಗಳನ್ನು 50 ಶೇಕಡಾ ಸಬ್ಸಿಡಿಯೊಂದಿಗೆ ನೀಡಲಾಗುತ್ತದೆ.

ಇದನ್ನು ಓದಿ: BSNL ಸೂಪರ್ ಆಫರ್: OTT, ಗೇಮಿಂಗ್ ಪ್ಯಾಕೇಜ್, ದಿನಕ್ಕೆ 2GB ಡೇಟಾ; ರೀಚಾರ್ಜ್ ಮಾಡುವ ಅಗತ್ಯವಿಲ್ಲ, ಸಿಮ್ ಬ್ಲಾಕ್ ಆಗುವ ಭಯ ಬೇಕಿಲ್ಲ!

ಅನ್ನಪೂರ್ಣ ಯೋಜನಾ ರೇಷನ್ ಕಾರ್ಡ್ (AY)

ಈ ಕಾರ್ಡ್‌ಗಳನ್ನು ಬಡ ಕುಟುಂಬದಲ್ಲಿನ ವೃದ್ಧರಿಗೆ ನೀಡಲಾಗುತ್ತದೆ. ಈ ಕಾರ್ಡ್ ಇರುವ ಅವರಿಗೆ ತಿಂಗಳಿಗೆ 10 ಕಿಲೋ ಅಕ್ಕಿ ಕೊಡುತ್ತಾರೆ. ಆದರೆ ಪ್ರಸ್ತುತ ಎಪಿಎಲ್, ಬಿಪಿಎಲ್, ಏವೈ ಕಾರ್ಡ್ಗಳನ್ನು ನೀಡುತ್ತಿಲ್ಲ. ಕೇವಲ ಪಿಪಿಹೆಚ್, ಏವೈ ಕಾರ್ಡ್‌ಗಳನ್ನು ಮಾತ್ರ ನೀಡಲಾಗುತ್ತಿದೆ. ಕರೋನ ಮಹಾಮಾರಿ ವಿಜೃಂಭಣೆಯ ನಂತರ ರೇಷನ್ ಕಾರ್ಡ್ ಇರುವ ಅವರಿಗೆ ಉಚಿತವಾಗಿ ಅಕ್ಕಿ ನೀಡುತ್ತಿದೆ ಕೇಂದ್ರ ಸರ್ಕಾರ.

ಇದನ್ನು ಓದಿ: ಕೇಂದ್ರ ಸರ್ಕಾರದಿಂದ ಮತ್ತೊಂದು ಯೋಜನೆ; ರೈತರಿಗೆ 15 ಲಕ್ಷ ರೂ ನೀಡುತ್ತಿರುವ ಯೋಜನೆ ಇದೆ

Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version