ರೈಲ್ವೆ ನೇಮಕಾತಿ ಮಂಡಳಿಯು, ದಕ್ಷಿಣ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತಹ ಆಪ್ರೆಂಟಿಸ್ ಹುದ್ದೆಗಳನ್ನು(Southern Railway Recruitment 2024) ಭರ್ತಿ ಮಾಡಿಕೊಳ್ಳಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಹಚ್ಚೆ ಆಹ್ವಾನಿಸಿದೆ.
ರೈಲ್ವೆ ಇಲಾಖೆಯ ದಕ್ಷಿಣ ರೈಲ್ವೆ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಶೈಕ್ಷಣಿಕರತೆಗಳು ವಯೋಮಿತಿಯ ಅರ್ಹತೆಗಳು ಹಾಗೂ ಅರ್ಜಿ ಶುಲ್ಕ, ಅರ್ಜಿ ಸಲ್ಲಿಕೆ ಲಿಂಕ್ ವಿವರವನ್ನು ಕೆಳಗಿನ ಭಾಗದಲ್ಲಿ ನೀಡಲಾಗಿದೆ.
ದಕ್ಷಿಣ ರೈಲ್ವೆ ವಿಭಾಗದ ಈ ನೇಮಕಾತಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಗಸ್ಟ್ 12ನೇ ತಾರೀಖಿನ ಒಳಗಾಗಿ ಆನ್ಲೈನ್(Southern Railway Recruitment) ಮುಖಾಂತರ ಅರ್ಜಿ ಸಲ್ಲಿಸಬೇಕು. ಈ ಸಲ್ಲಿಸುವ ಅಗತ್ಯ ಮಾಹಿತಿಯನ್ನು ಕೆಳಗಿನ ಭಾಗದಲ್ಲಿ ತಿಳಿದುಕೊಳ್ಳಿ.
Southern Railway Recruitment Details-ನೇಮಕಾತಿ ವಿವರ :
• ನೇಮಕಾತಿ ಇಲಾಖೆ : ರೈಲ್ವೆ ನೇಮಕಾತಿ ಮಂಡಳಿ
• ಹುದ್ದೆಗಳ ಸಂಖ್ಯೆ : 2438
• ಅರ್ಜಿ ಸಲ್ಲಿಕೆ : ಆನ್ಲೈನ್ ಮೂಲಕ
ಹುದ್ದೆಗಳ ಹೆಸರು-Vacancy Details :
ದಕ್ಷಿಣ ರೈಲ್ವೆ ವಲಯದಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿರುವ ಆಪ್ರೆಂಟಿಸ್ ಹುದ್ದೆಗಳು ವಿವಿಧ ವಿಭಾಗಗಳಲ್ಲಿ ಖಾಲಿ ಇದ್ದು, ಫಿಟ್ಟರ್, ಎಲೆಕ್ಟ್ರಿಷಿಯನ್ ಸೇರಿದಂತೆ ವಿವಿಧ ಹುದ್ದೆಗಳು ಖಾಲಿ ಇವೆ.
Education Qualification-ಶೈಕ್ಷಣಿಕ ಅರ್ಹತೆಗಳು :
ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ 10ನೇ ತರಗತಿಯಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಪಾಸಾಗಿ, ಖಾಲಿ ಇರುವ ಹುದ್ದೆಗಳಿಗೆ ಸಂಬಂಧಿಸಿದ ಟ್ರೇಡ್ ನಲ್ಲಿ ಐಟಿಐ ಪಾಸ್ ಆಗಿರಬೇಕು.
Southern Railway Recruitment 2024 : ವಯೋಮಿತಿ ಅರ್ಹತೆ :
ನೇಮಕಾತಿಯಲ್ಲಿ ನಿಗದಿಪಡಿಸಿದ ದಿನಾಂಕ ಅಂದರೆ 18 ಜುಲೈ 2024ಕ್ಕೆ ಅಭ್ಯರ್ಥಿಗಳ ಕನಿಷ್ಠ 15 ವರ್ಷ ಹಾಗೂ ಕರಿಷ್ಟ 24 ವರ್ಷದ ವಯೋಮಿತಿಯಲ್ಲಿರಬೇಕು.
ಮೀಸಲಾತಿ ವ್ಯಾಪ್ತಿಯಲ್ಲಿ ಬರುವವರಿಗೆ ಈ ಕೆಳಗಿನಂತೆ ಸಡಿಲಿಕೆ ನೀಡಲಾಗುತ್ತದೆ :
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಅಂಗವಿಕಲ ವರ್ಗದ ಅಭ್ಯರ್ಥಿಗಳಿಗೆ 10 ವರ್ಷದ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.
Application fee-ಅರ್ಜಿ ಶುಲ್ಕ :
• ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಪಾವತಿಸಬೇಕು.
• ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳಾ ಅಭ್ಯರ್ಥಿಗಳು ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ವಿನಾಯಿತಿ ನೀಡಲಾಗಿದೆ.
Important Dates-ಅರ್ಜಿ ಸಲ್ಲಿಕೆಗೆ ನಿಗದಿಪಡಿಸಿದ ದಿನಾಂಕಗಳು :
• ಆನ್ಲೈನ್ ಮೂಲಕ ನೋಂದಣಿಗೆ ನಿಗದಿಪಡಿಸಿದ ಪ್ರಾರಂಭ ದಿನಾಂಕ : 22 ಜುಲೈ 2024
• ಆನ್ಲೈನ್ ಮೂಲಕ ನೋಂದಣಿಗೆ ನಿಗದಿಪಡಿಸಿದ ಕೊನೆಯ ದಿನಾಂಕ : 12 ಆಗಸ್ಟ್ 2024
Website links-ನೇಮಕಾತಿ ಪ್ರಮುಖ ಲಿಂಕುಗಳು :
• ಅರ್ಜಿ ಸಲ್ಲಿಸುವ ಲಿಂಕ್: Click here
• ಅಧಿಸೂಚನೆ : ಡೌನ್ಲೋಡ್