ರೇಷನ್ ಕಾರ್ಡ ತಿದ್ದುಪಡಿಗೆ ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ; ಸಂಪೂರ್ಣ ಮಾಹಿತಿ ಇಲ್ಲಿದೆ

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ರೇಷನ್ ಕಾರ್ಡ ಹೊಂದಿರುವ ಗ್ರಾಹಕರಿಗೆ ತಿದ್ದುಪಡಿ(ration card tiddupadi) ಮಾಡಿಕೊಳ್ಳಲು ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ರೇಷನ್ ಕಾರ್ಡ ಹೊಂದಿರುವ ಗ್ರಾಹಕರಿಗೆ ತಿದ್ದುಪಡಿ(ration card tiddupadi) ಮಾಡಿಕೊಳ್ಳಲು ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

ಈ ಬಾರಿ ಹೆಚ್ಚು ದಿನಗಳ ವರೆಗೆ ಅರ್ಜಿ ಸಲ್ಲಿಸಲು ಅವಕಾಶ(ration card tiddupadi arji) ಮಾಡಿಕೊಡಲಾಗಿದ್ದು ಯಾರೆಲ್ಲ ತಿದ್ದುಪಡಿ ಮಾಡಿಸಿಕೊಳ್ಳಲು ಕಾಯುತ್ತಿರುವವರು ಈ ಅವಕಾಶವನ್ನು ಬಳಕೆ ಮಾಡಿಕೊಳಬಹುದು. ಯಾವ ದಿನ ತಿದ್ದುಪಡಿಗೆ ಅವಕಾಶ ನೀಡಲಾಗಿದೆ? ತಿದ್ದುಪಡಿ ಅರ್ಜಿಯ ಸ್ಥಿತಿಯನ್ನು ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡುವುದು? ಯಾವೆಲ್ಲ ತಿದ್ದುಪಡಿಗೆ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು? ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

Advertisement

ration card tiddupadi-2024: ಯಾವೆಲ್ಲ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ?

1) ಹೊಸ ಸದಸ್ಯರ ಹೆಸರು ಸೇರ್ಪಡೆಗೆ ಅವಕಾಶ.

2) ಆಧಾರ್ ಈ-ಕೆವೈಸಿ

3) ಹೆಸರು ತೆಗೆಯುವುದು

4) ವಿಳಾಸ ಬದಲಾವಣೆ

5) ನ್ಯಾಯಬೆಲೆ ಅಂಗಡಿ ಬದಲಾವಣೆ

6) ಹೆಸರು ತಿದ್ದುಪಡಿ ಮಾಡಬಹುದು.

reqiured document for ration card correction- ಅರ್ಜಿ ಸಲ್ಲಿಸಬೇಕಾಗುವ ಅಗತ್ಯ ದಾಖಲಾತಿಗಳು:

ಅರ್ಜಿದಾರರ ಅಧಾರ್ ಕಾರ್ಡ ಪ್ರತಿ.ಹೊಸ ಹೆಸರು ಸೇರ್ಪಡೆಗೆ ಜಾತಿ ಮತ್ತು ಅದಾಯ ಪ್ರಮಾಣ ಪತ್ರ.ಮೊಬೈಲ್ ಸಂಖ್ಯೆ.ಹಾಲಿ ಪಡಿತರ ಚೀಟಿ/ರೇಷನ್ ಕಾರ್ಡ.

How to apply for ration card correction-ಎಲ್ಲಿ ಅರ್ಜಿ ಸಲ್ಲಿಸಬೇಕು?

ರೇಷನ್ ಕಾರ್ಡ ತಿದ್ದುಪಡಿ ಮಾಡಿಕೊಳ್ಳಲು ಆಸಕ್ತಿಯಿರುವ ಗ್ರಾಹಕರು ನಿಮ್ಮ ಹಳ್ಳಿಗೆ ಹತ್ತಿರವಿರುವ ಗ್ರಾಮ ಒನ್/ಕರ್ನಾಟಕ ಒನ್ ಕೇಂದ್ರವನ್ನು ಅಗತ್ಯ ದಾಖಲೆಗಳ ಸಮೇತ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಬೇಕು.

ration card tiddupadi date-ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಅವಧಿ:

ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸಲು  ದಿನಾಂಕ: 02 ಆಗಸ್ಟ್ 2024 ರಿಂದ 10 ಆಗಸ್ಟ್ 2024ರ ವರೆಗೆ ಪ್ರತಿ ದಿನ ಬೆಳ್ಳಗೆ 10-00 ಗಂಟೆಯಿಂದ ಸಂಜೆ 5-00 ಗಂಟೆ ವರೆಗೆ ಅವಕಾಶ ಮಾಡಿಕೊಡಲಾಗಿದೆ. ಸರ್ವರ್ ಸಮಸ್ಯೆ ಬಂದಲ್ಲಿ ಸಾರ್ವಜನಿಕರಿಗೆ ಈ ಬಾರಿಯು ನಿರಾಸೆ ಮೂಡಿಸಿದಂತಾಗುತ್ತದೆ.

ration card application status check- ತಿದ್ದುಪಡಿ ಅರ್ಜಿಯು ಯಾವ ಹಂತದಲ್ಲಿದೆ ಎಂದು ಚೆಕ್ ಮಾಡುವ ವಿಧಾನ:

ಗ್ರಾಹಕರು ಒಮ್ಮೆ ಅನ್ಲೈನ್ ಮೂಲಕ ರೇಷನ್ ಕಾರ್ಡ ತಿದ್ದುಪಡಿಗೆ ಮತ್ತು ಹೊಸ ರೇಷನ್ ಕಾರ್ಡಗೆ ಅರ್ಜಿ ಸಲ್ಲಿಸಿದ ನಂತರ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂದು ಈ ಕೆಳಗಿನ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ ತಿಳಿದುಕೊಳ್ಳಬಹುದಾಗಿದೆ.

Step-1: ಮೊದಲು ಈ ration card application status ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.https://ahara.kar.nic.in/Home/EServices

Step-2: ನಂತರ ಇಲ್ಲಿ ಆಯ್ಕೆಯ ವಿಭಾಗಳು ತೋರಿಸುತ್ತವೆ ಇಲ್ಲಿ “ಇ-ಸ್ಥಿತಿ” ಬಟನ್ ಮೇಲೆ ಕ್ಲಿಕ್ ಮಾಡಿ “ತಿದ್ದುಪಡಿ ವಿನಂತಿಯ ಸ್ಥಿತಿ” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: “ತಿದ್ದುಪಡಿ ವಿನಂತಿಯ ಸ್ಥಿತಿ” ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ಈ ರೀತಿ ಮೂರು ಆಯ್ಕೆಗಳು ತೋರಿಸುತ್ತದೆ.

1) ONLY FOR BENGALURU DISTRICTS CLICK HERE(BENGALURU(URBAN/RURAL/CITY) districts only)

2) ONLY FOR KALABURAGI/BENGALURU DIVISIONS EXCEPT BENGALURU(URBAN/RURAL/CITY) CLICK HERE(Ballari, Bidar, Chikkaballapura, Chitradurga, Davangere, Kalaburagi, Kolar, Koppal, Raichur,Ramanagara, Shivamoga, Tumakuru, Yadgir, Vijayanagara districts only)

3) ONLY FOR BELAGAVI/MYSURU DIVISIONS CLICK HERE (Bagalkote, Belagavi, Chamarajnagara, Chikkamagaluru, Dakshinakannada, Dharwar, Gadag, Hassan, Haveri, Kodagu, Mandya, Mysuru, Udupi, Uttarakannada, Vijayapura districts only)

ನಿಮ್ಮ ಜಿಲ್ಲೆಯ ಹೆಸರು ಇರುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಂಡು ಮುಂದುವರೆಯಬೇಕು.

Step-4: ಇಲ್ಲಿ  RC No ಮತ್ತು Akcnowledgment No ಅನ್ನು ಹಾಕಿ “Go” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ರೇಶನ್ ಕಾರ್ಡ ತಿದ್ದುಪಡಿ ಅರ್ಜಿ ಯಾವ ಹಂತದಲ್ಲಿದೆ ಎಂದು ನಿಮ್ಮ ಮೊಬೈಲ್ ನಲ್ಲೇ ತೋರಿಸುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

vijayaprabha news google news

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement