ಸೊಳ್ಳೆಗಳು ಎಂದರೆ ಭಯಪಡುವ ಪರಿಸ್ಥಿತಿ ಇದೆ. ಡೆಂಗ್ಯೂ, ಮಲೇರಿಯಾ ಮತ್ತು ಚಿಕನ್ ಗುನ್ಯಾದಂತಹ ರೋಗಗಳು ಹೆಚ್ಚಾಗಿವೆ. ಹಾಗಾಗಿ ಸೊಳ್ಳೆಗಳು ಕಚ್ಚುವುದರಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕಾಗಿದೆ. ಇನ್ನೂ ಹಲವರ ಮನೆಯಲ್ಲಿ ಹೆಚ್ಚು ಸೊಳ್ಳೆಗಳು ಇದ್ದು, ಮಲಗಿಸಲು ಕೊಡೋದಿಲ್ಲ. ಹೀಗಿರುವಾಗ ಸೊಳ್ಳೆ ಬತ್ತಿಗಳ ಮೊರೆ ಹೋಗುತ್ತೇವೆ. ಆದರೆ ರಾಸಾಯನಿಕಗಳ ಬಳಕೆಯಿಂದ ಅನೇಕರಿಗೆ ಉಸಿರುಗಟ್ಟುವಿಕೆ ಮತ್ತು ಉಸಿರಾಟದ ತೊಂದರೆಗಳು ಪ್ರಾರಂಭವಾಗುತ್ತವೆ.
ಇವೆಲ್ಲಕ್ಕಿಂತ ಕೆಲವು ನೈಸರ್ಗಿಕ ಪರಿಹಾರಗಳನ್ನು ಪ್ರಯತ್ನಿಸಬಹುದು. ಅದರಲ್ಲಿ ಒಂದು ಬಾಳೆಹಣ್ಣಿನ ಸಿಪ್ಪೆ. ಇದು ಸೊಳ್ಳೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಬಾಳೆಹಣ್ಣಿನ ಸಿಪ್ಪೆಯಿಂದ ಸೊಳ್ಳೆಗಳನ್ನು ಓಡಿಸಬಹುದು. ಕೊಂಚ ವಿಚಿತ್ರವೆನಿಸಿದರೂ ಇದು ನಿಮಗೆ ಉಪಯುಕ್ತವಾಗಿದೆ.
ಬಾಳೆಹಣ್ಣಿನ ಸಿಪ್ಪೆಯ ವಾಸನೆಯಿಂದ ಸೊಳ್ಳೆಗಳನ್ನು ಓಡಿಸಬಹುದು. ಇದಕ್ಕಾಗಿ ರಾತ್ರಿ ಮಲಗುವ ಮುನ್ನ ಕೋಣೆಯ ವಿವಿಧ ಮೂಲೆಗಳಲ್ಲಿ ಒಂದಿಷ್ಟು ಬಾಳೆಹಣ್ಣಿನ ಸಿಪ್ಪೆಗಳನ್ನು ಇಡಿ, ಇದರಿಂದ ಸೊಳ್ಳೆಗಳ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಬಾಳೆಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ. ನಂತರ ಸೊಳ್ಳೆಗಳು ಹೆಚ್ಚಿರುವ ಮನೆಯ ಮೂಲೆಗಳಲ್ಲಿ ಆ ಪೇಸ್ಟ್ ಅನ್ನು ಹಚ್ಚಿ. ಬಾಳೆಹಣ್ಣಿನ ಸಿಪ್ಪೆಯ ಪೇಸ್ಟ್ ಸೊಳ್ಳೆಗಳನ್ನು ನಿವಾರಿಸಲು ಸಹ ಸಹಾಯ ಮಾಡುತ್ತದೆ.
ಬಾಳೆಹಣ್ಣಿನ ಸಿಪ್ಪೆಯನ್ನು ಸುಡುವುದರ ಮೂಲಕವೂ ಸೊಳ್ಳೆಗಳ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಆದರೆ ಬಾಳೆಹಣ್ಣಿನ ಸಿಪ್ಪೆಯನ್ನು ಬಹಳ ಎಚ್ಚರಿಕೆಯಿಂದ ಸುಡಬೇಕು. ಬಾಳೆಹಣ್ಣಿನ ಸಿಪ್ಪೆಯನ್ನು ಸುಟ್ಟು ಸ್ವಲ್ಪ ಸಮಯದವರೆಗೆ ಕೋಣೆಯಲ್ಲಿ ಇಡಬಹುದು, ಆದರೆ ಅದರ ವಾಸನೆ ಹರಡಿದ ತಕ್ಷಣ, ಅದನ್ನು ತೆಗೆದುಹಾಕಿ. ಏಕೆಂದರೆ ಬಾಳೆಹಣ್ಣಿನ ಸಿಪ್ಪೆ ಸುಟ್ಟ ವಾಸನೆ ತುಂಬಾ ಕೆಟ್ಟದಾಗಿರುತ್ತದೆ.
ಬಾಳೆಹಣ್ಣಿನ ಸಿಪ್ಪೆಯು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ, ಇದು ಸೊಳ್ಳೆ ಕಡಿತದ ನಂತರ ಉಂಟಾಗುವ ಕೆಂಪು ದದ್ದು ಮತ್ತು ತುರಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.