ಜಗ್ಗೇಶ್ ಬಿಚ್ಚಿಟ್ಟ ʻಗುರುʼ ಜೀವನ ಕತೆ; ಗುರುಪ್ರಸಾದ್ ಪುತ್ರಿಯ ಭವಿಷ್ಯಕ್ಕೆ ಸಹಾಯ ಮಾಡ್ತೀನಿ ಎಂದ ನಟ ಜಗ್ಗೇಶ್

Guruprasad life story :’ಮಠ’ ನಿರ್ದೇಶಕ ಗುರುಪ್ರಸಾದ್ ವಿಧಿವಶರಾಗಿದ್ದಾರೆ. ಅವರನ್ನು ಹತ್ತಿರದಿಂದ ನೋಡಿರುವ ನಟ ಜಗ್ಗೇಶ್, ಹೇಗಿದ್ದ ಗುರು ಹೇಗಾಗಿಬಿಟ್ಟ ಎಂದು ಅವರ ಜೀವನ ಕತೆ ಬಿಚ್ಚಿಟ್ಟಿದ್ದಾರೆ. ʻಗುರು ಬಹಳ ಒಳ್ಳೆಯ ನಿರ್ದೇಶಕ, ಬರವಣಿಗೆ…

Guruprasad life story unfolded by Jaggesh

Guruprasad life story :’ಮಠ’ ನಿರ್ದೇಶಕ ಗುರುಪ್ರಸಾದ್ ವಿಧಿವಶರಾಗಿದ್ದಾರೆ. ಅವರನ್ನು ಹತ್ತಿರದಿಂದ ನೋಡಿರುವ ನಟ ಜಗ್ಗೇಶ್, ಹೇಗಿದ್ದ ಗುರು ಹೇಗಾಗಿಬಿಟ್ಟ ಎಂದು ಅವರ ಜೀವನ ಕತೆ ಬಿಚ್ಚಿಟ್ಟಿದ್ದಾರೆ.

ʻಗುರು ಬಹಳ ಒಳ್ಳೆಯ ನಿರ್ದೇಶಕ, ಬರವಣಿಗೆ ಶೈಲಿ ಬಹಳ ಭಿನ್ನವಾಗಿತ್ತು. ಮನಸ್ಸು ಮಾಡಿದ್ದರೆ ಏನೋ ಸಾಧಿಸಬಹುದಾಗಿತ್ತು. ಆದರೆ ಎರಡು ವಿಷಯಗಳು ಅವರ ಬೆಳವಣಿಗೆಯನ್ನೇ ತಡೆದವು. ಮದ್ಯ ಮತ್ತು ಅಹಂ ಅವೆರಡು ಇಲ್ಲದೇ ಹೋಗಿದ್ದರೆ ಗುರುಪ್ರಸಾದ್ ರಾಜ್ಯದ ನಂಬರ್ 1 ನಿರ್ದೇಶಕ ಆಗಿರುತ್ತಿದ್ದರುʼ ಎಂದಿದ್ದಾರೆ.

ಇದನ್ನೂ ಓದಿ : ಮಠ, ಎದ್ದೇಳು ಮಂಜುನಾಥ ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ

Vijayaprabha Mobile App free

ಗುರುಪ್ರಸಾದ್ ಪುತ್ರಿಯ ಭವಿಷ್ಯಕ್ಕೆ ಸಹಾಯ ಮಾಡ್ತೀನಿ: ನಟ ಜಗ್ಗೇಶ್

ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಪುತ್ರಿಯ ಭವಿಷ್ಯಕ್ಕೆ ತಾವು ನೆರವಾಗುವುದಾಗಿ ನಟ ಜಗ್ಗೇಶ್ ಘೋಷಿಸಿದ್ದಾರೆ.

ಗುರುಪ್ರಸಾದ್ ಅವರು ಮಾಡಿದಂತಹ ಸಿನಿಮಾದಿಂದ ಬಂದ ಹಣದಿಂದ ಒಳ್ಳೆಯ ಜೀವನ ಕಟ್ಟಿಕೊಳ್ಳಬಹುದಿತ್ತು. ಆದರೆ, ಕುಡಿತದ ಚಟಕ್ಕೆ ಬಿದ್ದು ಜೀವನವನ್ನೇ ಹಾಳು ಮಾಡಿಕೊಂಡು ಬಿಟ್ಟ. ಆತನ ಪತ್ನಿ ಗರ್ಭಿಣಿ ಹಾಗೂ ಇರುವ ಪುತ್ರಿಯನ್ನು ನೋಡಿದ್ರೇ ಬೇಜಾರಾಗುತ್ತದೆ. ನಾನು ಗುರುಪ್ರಸಾದ್ ಅವರ ಪುತ್ರಿಯ ಭವಿಷ್ಯಕ್ಕೆ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.