ತಾಯಿ ಶೌಚಕ್ಕೆ ಹೋದಾಗ ನಾಪತ್ತೆಯಾಗಿದ್ದ ಮಗು ನೀರಿನ ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆ

ಆನೇಕಲ್‌: ತಾಯಿ ಶೌಚಕ್ಕೆ ಹೋದಾಗ ನಾಪತ್ತೆಯಾಗಿದ್ದ 33 ದಿನದ ಹಸುಗೂಸಿನ ಶವ ನೀರಿನ ಟ್ಯಾಂಕ್‌ನಲ್ಲಿ ಪತ್ತೆಯಾಗಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆನೇಕಲ್‌ ಸಮೀಪದ ಇಗ್ಗಲೂರಿನ ನಿವಾಸಿಗಳಾದ ಮನು ಮತ್ತು ಹರ್ಷಿತಾ ದಂಪತಿಯ ಮಗುವಿನ…

crime news

ಆನೇಕಲ್‌: ತಾಯಿ ಶೌಚಕ್ಕೆ ಹೋದಾಗ ನಾಪತ್ತೆಯಾಗಿದ್ದ 33 ದಿನದ ಹಸುಗೂಸಿನ ಶವ ನೀರಿನ ಟ್ಯಾಂಕ್‌ನಲ್ಲಿ ಪತ್ತೆಯಾಗಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಆನೇಕಲ್‌ ಸಮೀಪದ ಇಗ್ಗಲೂರಿನ ನಿವಾಸಿಗಳಾದ ಮನು ಮತ್ತು ಹರ್ಷಿತಾ ದಂಪತಿಯ ಮಗುವಿನ ಶವ ಟ್ಯಾಂಕ್‌ನಲ್ಲಿ ಸಿಕ್ಕಿದೆ. ಹಸುಗೂಸನ್ನು ನೀರಿನ ಟ್ಯಾಂಕ್‌ಗೆ ಯಾರು ಎಸೆದರು ಎಂಬ ಬಗ್ಗೆ ಸೂರ್ಯನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮನು ಮತ್ತು ಹರ್ಷಿತಾ ಪ್ರೀತಿಸಿ ಮದುವೆಯಾದವರು. ಹರ್ಷಿತಾ ಗರ್ಭಿಣಿಯಾದಾಗ ದಂಪತಿ ನಡುವೆ ವೈಮನಸ್ಸು ಮೂಡಿತು. 7 ತಿಂಗಳಿಗೇ ಸಿಜೇರಿಯನ್‌ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಅವಧಿ ಪೂರ್ವ ಶಿಶು ಜನನವಾದ ಕಾರಣ ಮಗುವಿನ ಬೆಳವಣಿಗೆಯಲ್ಲಿ ನ್ಯೂನತೆ ಕಂಡು ಬಂದಿತ್ತು. ಉಸಿರಾಟದ ತೊಂದರೆಗಾಗಿ ಅಪಾರ ಹಣ ಖರ್ಚು ಮಾಡಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗಿತ್ತು. ಮಗು ಸಂಪೂರ್ಣ ಚೇತರಿಸಿಕೊಂಡ ಬಳಿಕ ವಾರದ ಹಿಂದೆಯಷ್ಟೇ ಮನೆಗೆ ಕರೆತರಲಾಗಿತ್ತು.

Vijayaprabha Mobile App free

ಬುಧವಾರ ಬೆಳಗ್ಗೆ ತಾಯಿ ಶೌಚಾಲಯಕ್ಕೆ ಹೋದಾಗ ಮಗು ಇದ್ದಕ್ಕಿದ್ದಂತೆ ಕಾಣೆಯಾಗಿದೆ. ಗಾಬರಿಯಾಗಿ ಹುಡುಕಾಡಿದರೂ ಮಗು ಪತ್ತೆಯಾಗಿಲ್ಲ. ಕೂಡಲೇ ಸೂರ್ಯನಗರ ಪೊಲೀಸರಿಗೆ ಹರ್ಷಿತಾ ದೂರು ನೀಡಿದ್ದರು. ಪೊಲೀಸರು ಪರಿಶೀಲಿಸಿದಾಗ ಮನೆಯ ಸಿಂಟೆಕ್ಸ್ ನೀರಿನ ಟ್ಯಾಂಕ್‌ನಲ್ಲಿ ಮಗುವಿನ ಶವ ಪತ್ತೆಯಾಗಿದೆ. ಈ ಬಗ್ಗೆ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.