Actor Darshan: ರೇಣುಕಾಸ್ವಾಮಿ ಕೊಲೆ (Renukaswamy murder) ಆರೋಪಿ ನಟ ದರ್ಶನ್ (Actor Darshan) ಬಿಡುಗಡೆಗಾಗಿ ಅವರ ಅಭಿಮಾನಿಗಳು ಫೋಟೋ ಹಿಡಿದು ದೈವದ ಮೊರೆ ಹೋಗಿದ್ದು, ಬಳ್ಳಾರಿಯ ಬಲಕಲ್ ಅನ್ನೋ ಗ್ರಾಮದ ಬೀರಲಿಂಗೇಶ್ವರ ದೈವ ಸ್ಪೋಟಕ ಭವಿಷ್ಯ (Biralingeshwar God prediction) ನುಡಿದಿದೆ.
ದ ಬಳಿ ದರ್ಶನ್ ಬಿಡುಗಡೆ ಅಭಿಮಾನಿಗಳು ದಿನಾಂಕ ಕೇಳಿದ್ದಾರೆ. ಈ ವೇಳೆ ಮೂರು ತಿಂಗಳ ಬಳಿಕ ದರ್ಶನ್ ಹೊರ ಬರ್ತಾರೆ ಅಂತಾ ಬೀರಲಿಂಗೇಶ್ವರ ದೈವ ಭವಿಷ್ಯ ನುಡಿದಿದೆ.
ಹೌದು, 3 ತಿಂಗಳ ಬಳಿಕ ನಟ ದರ್ಶನ್ ಹೊರ ಬರ್ತಾರೆ ಎಂದು ಬಳ್ಳಾರಿಯ ಬಲಕಲ್ ಗ್ರಾಮದ ಬೀರಲಿಂಗೇಶ್ವರ ದೈವ ಭವಿಷ್ಯ ನುಡಿದಿದೆ. ದರ್ಶನ್ ಭಾವಚಿತ್ರದ ಮೇಲೆ ತಲೆಯಿಟ್ಟು ದೈವ ನುಡಿದ ಮಾತಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ದರ್ಶನ್ ಬಿಡುಗಡೆಗೆ ಅಭಿಮಾನಿಗಳು ದೈವದ ಬಳಿ ದಿನಾಂಕ ಕೇಳಿದ್ದಾರೆ.
ಇನ್ನು ಈ ವಿಡಿಯೋವನ್ನು ದರ್ಶನ್ ಅಭಿಮಾನಿಗಳು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ರೇಣುಕಾಸ್ವಾಮಿ ಕೊನೆ ಕ್ಷಣಗಳ ಫೋಟೋ ನೋಡಿ ಅತ್ತ ತಂದೆ ಕಾಶಿನಾಥಯ್ಯ ‘ದರ್ಶನ್ ಫ್ಯಾನ್ಸ್ ಈಗಲಾದರೂ ಎಚ್ಚೆತ್ತುಕೊಳ್ಳಿ’ ಎಂದು ಮನವಿ ಮಾಡ್ತಿದ್ದಾರೆ.
https://vijayaprabha.com/money-is-deposited-in-the-account-of-the-beneficiaries-of-the-gruhalakshmi-yojana/