ದಾವಣಗೆರೆ: ರಾಜ್ಯಾದ್ಯಂತ ಅ.27ರಂದು ನಡೆದ ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಆಯ್ಕೆ ಪರೀಕ್ಷೆಗೆ ಕಟ್ಟುನಿಟ್ಟಿನ ನಿಯಮ ಅಳವಡಿಸಿದ್ದರು ಸಹ ಕೆಲವೆಡೆ ಸಣ್ಣಪುಟ್ಟ ತೊಂದರೆಗಳು ಆಗಿದ್ದು, ಇಲ್ಲೊಬ್ಬ ಮುಸ್ಲಿಂ ಯುವತಿ ಹಿಜಾಬ್ ತೆಗೆಯಲು ನಕಾರ ಮಾಡಿದ್ದಾಳೆ.
ಹೌದು, ದಾವಣಗೆರೆ ನಗರದ ಎಸ್.ಎಸ್.ಲೇಔಟನಲ್ಲಿರುವ ರಾಘವೇಂದ್ರ ಕಾಲೇಜಿನಲ್ಲಿ ತೆರೆಯಲಾದ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ಮುಸ್ಲಿಂ ಹಿಜಾಬ್ ಧರಿಸಿದ್ದಳು. ಪರೀಕ್ಷಾ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಹಿಜಾಬ್ ಕೂಡ ಧರಿಸುವಂತಿಲ್ಲ ಎಂದ ಪರೀಕ್ಷಾ ಮೇಲ್ವಿಚಾರಕರು ಹೇಳಿದ್ದಾರೆ.
ಈ ವೇಳೆ ಯುವತಿ ಜತೆಗೆ ಹಿಜಾಬ್ ಧರಿಸಿದ್ದ ಯುವತಿ ಹಾಗೂ ಕುಟುಂಬಸ್ಥರು ವಾಗ್ವಾದ ಮಾಡಿದ್ದಾರೆ. ಹಾಲ್ ಟಿಕೇಟ್ನಲ್ಲಿ ವಸ್ತ್ರ ಸಂಹಿತೆ ಬಗ್ಗೆ ನಿಯಮ ಇಲ್ಲ ಎಂದು ವಾದ ಮಂಡಿಸಿದ್ದಾರೆ. ಆಗ ಸ್ಥಳಕ್ಕೆ ದಾವಣಗೆರೆ ASP ವಿಜಯಕುಮಾರ್ ಸಂತೋಷ ಭೇಟಿ ನೀಡಿ ಪರೀಕ್ಷಾ ಪ್ರಾಧಿಕಾರದ ನಿಯಮ ಪಾಲಿಸುವಂತೆ ಮನವಿ ಮಾಡಿದ್ದಾರೆ. ಕುಟುಂಬಸ್ಥರು ಹಾಗೂ ಪೊಲೀಸರು ಪರೀಕ್ಷಾ ಮೇಲ್ವಿಚಾರಕರ ಜೊತೆ ಚರ್ಚೆ ನಡೆಸಿದ ಬಳಿಕ ಯುವತಿಗೆ ಪರೀಕ್ಷಾ ನಿಯಮಗಳನ್ನ ತಿಳಿಸಿ ಪಾಲಿಸುವಂತೆ ಸೂಚನೆ ನೀಡಲಾಯಿತು.
ಅಂತಿಮವಾಗಿ ಪೊಲೀಸರ ಮನವೊಲಿಸುವಿಕೆ ಯಶಸ್ವಿಯಾಗಿದ್ದು, ಯುವತಿ ತೆಗೆದು ಪರೀಕ್ಷೆ ಬರೆದಿದ್ದಾಳೆ. ಹಿಜಾಬ್ ಧರಿಸಿ ಪರೀಕ್ಷೆ ಕೊಠಡಿಗೆ ಯುವತಿಗೆ ಅನುಮತಿ ನೀಡಿಲ್ಲ ಎಂದು ಪರೀಕ್ಷಾ ಸಿಬ್ಬಂದಿ ಸ್ಪಷ್ಟನೆ ನೀಡಿದ್ದಾರೆ.