ಕೋಲಾರ: ಟಿವಿ ವೀಕ್ಷಿಸುತ್ತಾ ಶಿಕ್ಷಕಿ ಕುಳಿತಿದ್ದಾಗ ಏಕಾಏಕಿ ಮನೆಯೊಳಗೆ ನುಗ್ಗಿ ಹಂತಕರು ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿರುವ ಪ್ರಕರಣ ಸಂಬಂಧಪಟ್ಟಂತೆ ಬಿಗ್ ಟ್ವಿಸ್ಟ್ ವೊಂದು ಸಿಕ್ಕಿದ್ದು, ಮುಳಬಾಗಿಲು ಮೂಲದ ಆರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 14 ರಂದು ಸಂಜೆ ಶಿಕ್ಷಕಿ ದಿವ್ಯಶ್ರೀ (43) ಎಂಬುವವರನ್ನು ಮುಳಬಾಗಿಲು ನಗರದ ಸುಂಕೂ ಲೇಔಟ್ ನಲ್ಲಿ ಕೊಲೆ ಮಾಡಲಾಗಿತ್ತು.ಈ ಪ್ರಕರಣದ ಜಾಡು ಹಿಡಿದ ನಗರ ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿಗಳಿಗೆ ಬಲೆ ಬೀಸಿದ್ದರು.
ಅದರಂತೆಯೇ ಇಂದು ತಿರುಪತಿಯಲ್ಲಿ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಆರು ಜನ ಹಂತಕರಲ್ಲಿ ಬಹುತೇಕ ಅಪ್ರಾಪ್ತರು ಎಂಬ ಮಾಹಿತಿ ದೊರಕಿದೆ. ಸದ್ಯ ವಿಚಾರಣೆ ವೇಳೆ ಜಮೀನು ವ್ಯಾಜ್ಯ, ದ್ವೇಷದಿಂದ ಶಿಕ್ಷಕಿ ದಿವ್ಯಶ್ರಿ ಕೊಲೆಗೆ ಸುಫಾರಿ ನೀಡಲಾಗಿದೆ ಎಂದು ತಿಳಿದುಬಂದಿದೆ. ಸುಫಾರಿ ನೀಡಿದ ಪ್ರಮುಖ ಆರೋಪಿಗಾಗಿ ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment