ಉತ್ತಮ ಆರೋಗ್ಯಕ್ಕೆ ನೀರು ಅತ್ಯಗತ್ಯ ಅಂಶವಾಗಿದೆ. ದೇಹವು ಮೂತ್ರ ಮತ್ತು ಬೆವರಿನ ಮೂಲಕ ನಿರಂತರವಾಗಿ ನೀರನ್ನು ಹೊರಹಾಕುತ್ತದೆ. ಆದ್ದರಿಂದ, ಅತಿಯಾದ ಬಾಯಾರಿಕೆಯಿಂದ ತಪ್ಪಿಸಿಕೊಳ್ಳಲು ನಾವು ಪ್ರತಿದಿನ ಸಾಕಷ್ಟು ನೀರನ್ನು ಕುಡಿಯಬೇಕು.
ನೀರು ನಮ್ಮೆಲ್ಲರ ಆರೋಗ್ಯಕ್ಕೆ ತುಂಬಾನೇ ಅತ್ಯಗತ್ಯ. ಏಕೆಂದರೆ ಇದು ನಮ್ಮ ದೇಹದ ತೂಕದ ಸುಮಾರು 50 ರಿಂದ 70 ಪ್ರತಿಶತದಷ್ಟಿರುತ್ತದೆ. ದೇಹದ ಬೆಳವಣಿಗೆಗೆ ನಮಗೆ ನೀರು ಬೇಕು. ದೇಹದ ಎಲ್ಲಾ ವ್ಯವಸ್ಥೆಗಳು ಸರಾಗವಾಗಿ ನಡೆಯುವಂತೆ ಮಾಡುವಲ್ಲಿ ನೀರು ತುಂಬಾನೇ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಅಲ್ಲದೆ, ಕೆಲವೊಮ್ಮೆ, ಪ್ರೋಟೀನ್, ಕೊಬ್ಬುಗಳು ಮತ್ತು ಕಾರ್ಬೋಹೈಡ್ರೇಟ್ ಗಳೊಂದಿಗೆ ನೀರನ್ನು ನಾಲ್ಕನೇ ಸೂಕ್ಷ್ಮ ಪೋಷಕಾಂಶವೆಂದು ಪರಿಗಣಿಸಲಾಗುತ್ತದೆ. ನಿಮ್ಮ ದೇಹದ ಪ್ರತಿಯೊಂದು ಜೀವಕೋಶ, ಅಂಗಾಂಶ ಮತ್ತು ಅಂಗದ ಸರಿಯಾದ ಕಾರ್ಯನಿರ್ವಹಣೆಗೆ ಇದು ಅತ್ಯಗತ್ಯ. ನೀರು ನಮಗೆ ಸಹಾಯ ಮಾಡುವ ಒಂದು ಅಮೂಲ್ಯವಾದ ಪೋಷಕಾಂಶವಾಗಿದೆ. ಮೂತ್ರವಿಸರ್ಜನೆ, ಬೆವರುವಿಕೆ ಮತ್ತು ಕರುಳಿನ ಚಲನೆಗಳ ಮೂಲಕ ತ್ಯಾಜ್ಯವನ್ನು ತೆಗೆದು ಹಾಕುತ್ತದೆ. ದೇಹದ ಸಾಮಾನ್ಯ ತಾಪಮಾನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಸೂಕ್ಷ್ಮ ಅಂಗಾಂಶಗಳು ಮತ್ತು ಅಂಗಗಳನ್ನು ರಕ್ಷಿಸುತ್ತದೆ. ನಿಮ್ಮ ಜೀವಕೋಶಗಳಿಗೆ ಎಲ್ಲಾ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಸರಿಯಾಗಿ ಸಾಗಿಸುವುದು. ನಿಮ್ಮ ಮೂತ್ರಕೋಶದಿಂದ ಬ್ಯಾಕ್ಟೀರಿಯಾವನ್ನು ತೆಗೆದು ಹಾಕುವುದು. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಮಲಬದ್ಧತೆಯನ್ನು ನಿವಾರಿಸುತ್ತದೆ. ರಕ್ತದೊತ್ತಡದವನ್ನು ನಿಯಂತ್ರಣದಲ್ಲಿಡುತ್ತದೆ. ಎಲೆಕ್ಟ್ರೋಲೈಟ್ ಗಳ (ಸೋಡಿಯಂ) ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಸ್ಪಷ್ಟ, ಸುಕ್ಕು ಮುಕ್ತ ಚರ್ಮವನ್ನು ಒದಗಿಸಲು ಸಹಾಯ ಮಾಡುತ್ತದೆ. ಕುಡಿಯುವ ನೀರು ವ್ಯಾಯಾಮದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಮತ್ತು ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಇದು ಸಹಾಯ ಮಾಡುತ್ತದೆ. ಅಲರ್ಜಿ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಮತ್ತು ಅಸ್ತಮಾವನ್ನು ಸರಾಗಗೊಳಿಸುತ್ತದೆ ಎಂದು ಸಂಶೋಧನೆ ತೋರಿಸಿದೆ. ಆದ್ದರಿಂದ, ದೇಹದ ಕಾರ್ಯಗಳನ್ನು ಬೆಂಬಲಿಸಲು ಸಾಕಷ್ಟು ನೀರುಗಳನ್ನು ಕುಡಿಯುವುದು ನಮ್ಮನ್ನು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಸಾಮಾನ್ಯ ಕಾರ್ಯಗಳನ್ನು ನಿರ್ವಹಿಸಲು ನಮ್ಮ ದೇಹದಲ್ಲಿ ಸಾಕಷ್ಟು ನೀರು ಇಲ್ಲದಿದ್ದಾಗ ಬಾಯಾರಿಕೆ ಹೆಚ್ಚಾಗಬಹುದು. ನಿರ್ಜಲೀಕರಣವು ಕಡಿಮೆ ರಕ್ತದೊತ್ತಡ, ತಲೆತಿರುಗುವಿಕೆ, ಗೊಂದಲ ಮತ್ತು ಗಾಢ ಹಳದಿ ಬಣ್ಣದ ಮೂತ್ರಕ್ಕೆ ಕಾರಣವಾಗಬಹುದು.
ನಾವು ದಿನಕ್ಕೆ ಎಷ್ಟು ನೀರು ಕುಡಿಯಬೇಕು*?
* ಉಸಿರಾಟ, ಬೆವರು ಮತ್ತು ಮೂತ್ರದ ಮೂಲಕ ನಮ್ಮ ದೇಹವು ಪ್ರತಿದಿನ ನೀರನ್ನು ಹೊರ ಹಾಕುತ್ತದೆ. ನಮ್ಮ ದೇಹದಲ್ಲಿರುವ ಜೀರ್ಣಕ್ರಿಯೆ ವ್ಯವಸ್ಥೆಯು ಸರಾಗವಾಗಿ ಚಲಿಸಲು, ನೀವು ಸಾಕಷ್ಟು ದ್ರವ ಪದಾರ್ಥಗಳನ್ನು ಅಥವಾ ಪಾನೀಯಗಳನ್ನು ಕುಡಿಯುವ ಅಥವಾ ತಿನ್ನುವ ಮೂಲಕ ಅದರ ನೀರಿನ ಸರಬರಾಜನ್ನು ಮರುಪೂರಣ ಮಾಡಬೇಕು. ಯುನೈಟೆಡ್ ಸ್ಟೇಟ್ಸ್ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್, ಎಂಜಿನಿಯರಿಂಗ್ ಮತ್ತು ಮೆಡಿಸಿನ್ ಪ್ರಕಾರ, ಸಮಶೀತೋಷ್ಣ ಹವಾಮಾನದಲ್ಲಿ ವಾಸಿಸುವ ಆರೋಗ್ಯವಂತ ವಯಸ್ಕರು ಈ ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು.
ವಾಸಿಸುವ ಸ್ಥಳ: ಕಡಿಮೆ ತೇವಾಂಶದೊಂದಿಗೆ ಮಧ್ಯಮ ತಾಪಮಾನದಲ್ಲಿ ವಾಸಿಸುವವರಿಗಿಂತ ಬಿಸಿ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಹೆಚ್ಚಿನ ನೀರು ಬೇಕಾಗುತ್ತದೆ. ಜನರು ಎತ್ತರದ ಪ್ರದೇಶಗಳಲ್ಲಿ ವಾಸಿಸುವಾಗ ಹೆಚ್ಚಿನ ನೀರಿನ ಅಗತ್ಯವಿರುತ್ತದೆ.
ಆಹಾರ ಪದ್ಧತಿಗಳು: ನೀವು ಸಾಕಷ್ಟು ಕಾಫಿ ಮತ್ತು ಇತರ ಕೆಫೀನ್ ಪಾನೀಯಗಳನ್ನು ಕುಡಿದರೆ ಅಥವಾ ನಿಮ್ಮ ಆಹಾರದಲ್ಲಿ ಉಪ್ಪು, ಮಸಾಲೆಯುಕ್ತ ಅಥವಾ ಸಕ್ಕರೆ ಆಹಾರಗಳು ಹೆಚ್ಚಾಗಿದ್ದರೆ, ನೀವು ಹೆಚ್ಚು ನೀರು ಕುಡಿಯಬೇಕಾಗುತ್ತದೆ.
ಹವಾಮಾನ: ನೀವು ಇರುವ ಸ್ಥಳದ ಹವಾಮಾನ ತುಂಬಾನೇ ಬಿಸಿಯಾಗಿದ್ದರೆ, ಬೆವರಿನ ಕಾರಣದಿಂದಾಗಿ ನಿಮ್ಮ ದೇಹವನ್ನು ತಣ್ಣಗೆ ಇರಿಸಿಕೊಳ್ಳಲು ನಿಮಗೆ ಹೆಚ್ಚಿನ ನೀರು ಬೇಕಾಗಬಹುದು.
ಪರಿಸರ: ನೀವು ಬಿಸಿ ತಾಪಮಾನ ಅಥವಾ ಬಿಸಿ ಕೋಣೆಗಳಿಗೆ ಒಡ್ಡಿಕೊಂಡರೆ, ನಿಮಗೆ ಸಾಮಾನ್ಯಕ್ಕಿಂತ ಬೇಗನೆ ಬಾಯಾರಿಕೆ ಆಗಬಹುದು.