(PMMV Yojana) ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಧಾನ ಮಂತ್ರಿ ಮಾತೃತ್ವ ವಂದನ ಯೋಜನೆಯಲ್ಲಿ ಗರ್ಭಿಣಿಯರಿಗೆ ಆರ್ಥಿಕ ನೆರವು ನೀಡುವ ಯೋಜನೆ ಇದಾಗಿದೆ. ಈ ಯೋಜನೆಯಲ್ಲಿ 5,000 ಹಣವನ್ನು ಖಾತೆಗೆ ಜಮಾ ಮಾಡುತ್ತಿದ್ದು, ಇದಕ್ಕಾಗಿ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ ಕುರಿತು ಇಲ್ಲಿದೆ ಮಾಹಿತಿ.
ಏನಿದು ಪ್ರಧಾನ ಮಂತ್ರಿ ಮಾತೃತ್ವ ವಂದನ ಯೋಜನೆ:
ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆಯಡಿ ಗರ್ಭಿಣಿಯರಿಗೆ 5,000 ರೂ.ಗಳ ಆರ್ಥಿಕ ನೆರವು ನೀಡಲಾಗುತ್ತಿದೆ. ಈ ಯೋಜನೆಯನ್ನ ಸರ್ಕಾರವು 2017 ರಲ್ಲಿ ಪ್ರಾರಂಭಿಸಿತು, ವಿಶೇಷವಾಗಿ ಆರ್ಥಿಕವಾಗಿ ದುರ್ಬಲ ವರ್ಗದ ಮಹಿಳೆಯರಿಗಾಗಿ. ಈ ಮೊತ್ತವನ್ನ ಸರ್ಕಾರವು ಮೂರು ಕಂತುಗಳಲ್ಲಿ ವಿತರಿಸುತ್ತದೆ. ಮೊದಲ ಕಂತಿನಲ್ಲಿ 1,000 ರೂ.ಗಳನ್ನ ಮಹಿಳೆಯ ಖಾತೆಗಳಿಗೆ ಜಮಾ ಮಾಡುತ್ತಾರೆ. 6 ತಿಂಗಳ ಗರ್ಭಧಾರಣೆಯ ನಂತರ, ಎರಡನೇ ಕಂತಿನ 2,000 ರೂ.ಗಳನ್ನ ಮಹಿಳೆಯರ ಖಾತೆಗೆ ಕಳುಹಿಸಲಾಗುತ್ತದೆ. ಮಗುವಿನ ಜನನದ ನಂತರ, ಉಳಿದ ಕೊನೆಯ ಕಂತು 2,000 ರೂ.ಗಳನ್ನು ನೀಡಲಾಗುವುದು.
ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು?;
ಈ ಯೋಜನೆಯ ಪ್ರಯೋಜನಗಳನ್ನ ಪಡೆಯಲು ಮಹಿಳೆಯರು 19 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.
ಅರ್ಜಿ ಸಲ್ಲಿಕೆ ಹೇಗೆ?;
ಈ ವೆಬ್ ಸೈಟ್ ಗೆ ಬೇಟಿ ನೀಡಿ ಅರ್ಜಿ ಸಲ್ಲಿಸಬಹದಾಗಿದೆ. https://pmmvy.wcd.gov.in/