ವಾಷಿಂಗ್ಟನ್: ಅಮೆರಿಕದ ಖ್ಯಾತ ನಟ ಜೇಮ್ಸ್ ಎರ್ಲ್ ಜೋ ನ್ಸ್ (93) ಅವರು ನಿಧನರಾಗಿದ್ದಾರೆ ಎಂದು ವರದಿಯಾಗಿದೆ.ದೀರ್ಘಕಾಲದ ಮಧುಮೇಹದಿಂದ ಬಳಲುತ್ತಿದ್ದ ಜೋನ್ಸ್ ಅವರು ಸೋಮವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂದು ಸಹಾಯಕ ಬ್ಯಾರಿ ಮ್ಯಾಕ್ಫರ್ಸನ್ ಹೇಳಿದ್ದಾರೆ.
ಅಲ್ಲದೇ ಜೋನ್ಸ್ ನಿಧನ ಕುರಿತು ಅವರ ಮಗ ಹ್ಯಾಮಿಲ್ ಎಕ್ಸ್ ನಲ್ಲಿ ‘#RIP ಡ್ಯಾಡ್’ ಎಂದು ಪೋಸ್ಟ್ ಮಾಡಿದ್ದಾರೆ.ಜೇಮ್ಸ್ ಎರ್ಲ್ ಜೋನ್ಸ್ ಅವರು ‘ದಿ ಲಯನ್ ಕಿಂಗ್’ ಕಾರ್ಟೂನ್ ಚಿತ್ರಕ್ಕೆ ಧ್ವನಿ ನೀ ಡಿದ್ದಾರೆ. ‘ಸ್ಟಾರ್ ವಾರ್ಸ್ ’ ಸೇ ರಿದಂತೆ ಹಲವು ಖ್ಯಾತ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಟಿವಿ ಕಾರ್ಯ ಕ್ರಮಗಳನ್ನು ನಡೆಸಿಕೊಡುವುದರ ಜತೆಗೆ ರಂಗಭೂಮಿ ಕಲಾವಿದರಾಗಿಯೂ ತೊಡಗಿಸಿಕೊಂಡಿದ್ದರು.
1969ರಲ್ಲಿ ದಿ ಗ್ರೇ ಟ್ ವೈಟ್ಹೋ ಪ್, 1987ರಲ್ಲಿ ‘ಫೆನ್ಸಸ್’ ಚಿತ್ರಕ್ಕೆ ಪ್ರಶಸ್ತಿ ಲಭಿಸಿತ್ತು. ಆದೇ ರೀ ತಿ 1991ರಲ್ಲಿ ದೂರದರ್ಶ ನದಲ್ಲಿ ಪ್ರಸಾರವಾದ ‘ಗೇ ಬ್ರಿಯಲ್ಸ್ ಫೈ ರ್’, ಹೀ ಟ್ ವೇ ವ್’ ಕಾರ್ಯ ಕ್ರಮಗಳು ಜೋ ನ್ಸ್ಗೆ ಖ್ಯಾತಿ ತಂದುಕೊಟ್ಟಿದ್ದವು. 2011ರಲ್ಲಿ ಆಸ್ಕರ್ ಪ್ರಶಸ್ತಿಗೆ ಭಾಜನರಾಗಿದ್ದರು.