Sweet flag |ಬಜೆ ಬೇರಿನ ಆರೋಗ್ಯ ಪ್ರಯೋಜನಗಳು

Sweet flag : ಸಾಮಾನ್ಯವಾಗಿ ಹಳ್ಳಿಗಳಲ್ಲಿ ಬಳಸುವ ಬಜೆ ಬೇರಿನಲ್ಲಿ ಅನೇಕ ಆರೋಗ್ಯಕರ ಗುಣಗಳಿದ್ದು, ಬಜೆ ಬೇರಿನ ಆರೋಗ್ಯ ಪ್ರಯೋಜನಗಳು ಹೀಗಿವೆ ಮಕ್ಕಳ ಆರೋಗ್ಯ ಚಿಕ್ಕ ಮಕ್ಕಳಿಗೆ ಹಲ್ಲು ಹುಟ್ಟುವ ಸಮಯದಲ್ಲಿ ಜ್ವರ ಬರುತ್ತಿದ್ದರೆ…

Sweet flag

Sweet flag : ಸಾಮಾನ್ಯವಾಗಿ ಹಳ್ಳಿಗಳಲ್ಲಿ ಬಳಸುವ ಬಜೆ ಬೇರಿನಲ್ಲಿ ಅನೇಕ ಆರೋಗ್ಯಕರ ಗುಣಗಳಿದ್ದು, ಬಜೆ ಬೇರಿನ ಆರೋಗ್ಯ ಪ್ರಯೋಜನಗಳು ಹೀಗಿವೆ

ಮಕ್ಕಳ ಆರೋಗ್ಯ

ಚಿಕ್ಕ ಮಕ್ಕಳಿಗೆ ಹಲ್ಲು ಹುಟ್ಟುವ ಸಮಯದಲ್ಲಿ ಜ್ವರ ಬರುತ್ತಿದ್ದರೆ ಬಜೆಯ ಬೇರನ್ನು ತೇಯ್ದು ಹಾಲಿನೊಂದಿಗೆ ಬೆರೆಸಿ ಸೇವನೆ ಮಾಡಲು ಕೊಡಬೇಕು. ಒಂದು ವರ್ಷದೊಳಗಿನ ಮಕ್ಕಳಿಗೆ ಪ್ರತಿದಿನ ಬಜೆ ಬೇರನ್ನು ಸುಟ್ಟು ಭಸ್ಮ ತಯಾರಿಸಿ ಎರಡು ಚಿಟಿಕೆಯಷ್ಟು ಜೇನುತುಪ್ಪ ಬೆರೆಸಿ ತಿನ್ನಿಸಿದರೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಮಕ್ಕಳ ಮಾತು

ಮಕ್ಕಳಿಗೆ ಮಾತು ಬರಲು ತಡವಾಗಿದ್ದಲ್ಲಿ ಅಥವಾ ಸ್ಪಷ್ಟ ಉಚ್ಚಾರಣೆ ಇಲ್ಲದಿದ್ದರೆ ಪ್ರತಿದಿನ ಬಜೆಯ ಬೇರನ್ನು ತೇಯ್ದು ಜೇನಿನೊ೦ದಿಗೆ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಅದನ್ನು ತಿನ್ನಿಸಬೇಕು.

Vijayaprabha Mobile App free

ನೆನಪಿನ ಶಕ್ತಿ

ಮಕ್ಕಳು ಮತ್ತು ದೊಡ್ಡವರು ಬಜೆ ಬೇರನ್ನು ಸೇವನೆ ಮಾಡುವುದರಿಂದ ನೆನಪಿನ ಶಕ್ತಿ ಜೊತೆಗೆ ದೇಹದಲ್ಲಿ ಚುರುಕುತನ ಮೂಡುತ್ತದೆ. ಜೊತೆಗೆ ಸ್ಮರಣಶಕ್ತಿ, ಬುದ್ಧಿ ಚುರುಕಾಗಲೂ ಕೂಡ ಇದನ್ನು ಲಿ೦ಬು ರಸದಲ್ಲಿ ತೇಯ್ದು ಸೇವನೆ ಮಾಡಲಾಗುತ್ತದೆ.

ಬೇಧಿ ಸಮಸ್ಯೆ

ಈ ಗಿಡಮೂಲಿಕೆಯನ್ನು ಗ್ಯಾಸ್ಟ್ರಿಕ್, ಬೇಧಿಯಂತಹ ಆರೋಗ್ಯ ಸಮಸ್ಯೆಗಳಿಗೆ ಬಳಸಬಹುದಾಗಿದೆ. ಇದು ನಿಮ್ಮ ಜೀರ್ಣಶಕ್ತಿಯನ್ನು ಸುಧಾರಿಸುತ್ತದೆ. ಹೀಗಾಗಿ ಬಜೆ ಬೇರನ್ನು ಚೂರ್ಣ, ಮಾತ್ರೆ ಅಥವಾ ಪುಡಿಯ ರೂಪದಲ್ಲಿ ಬಳಸಬಹುದು.

ನೋವು ಕಡಿಮೆಯಾಗುತ್ತದೆ

ಬಜೆ ಬೇರು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು ಇದನ್ನು ತೇಯ್ದು ನೋವಿರುವ ಜಾಗಕ್ಕೆ ಹಚ್ಚಿದರೆ ನೋವು ಮತ್ತು ಊತ ಕಡಿಮೆಯಾಗುತ್ತದೆ. ಜೊತೆಗೆ ದೇಹದಲ್ಲಿನ ಸಂಧಿವಾತಕ್ಕೆ ಸ೦ಬ೦ಧಿಸಿದ ನೋವು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.