Ram Navami | ರಾಮ ನವಮಿ ದಿನ ಈ 5 ರಾಶಿಗೆ ಬ್ಯಾಕ್ ಟು ಬ್ಯಾಕ್ ಸಕ್ಸಸ್

Ram Navami rashi bhavishya : ಪ್ರತಿವರ್ಷ ರಾಮ ನವಮಿಯನ್ನು ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದ೦ದು ಆಚರಿಸಲಾಗುತ್ತದೆ. ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀರಾಮನು ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದ೦ದು…

Ram Navami rashi bhavishya

Ram Navami rashi bhavishya : ಪ್ರತಿವರ್ಷ ರಾಮ ನವಮಿಯನ್ನು ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದ೦ದು ಆಚರಿಸಲಾಗುತ್ತದೆ. ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀರಾಮನು ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದ೦ದು ಅವತರಿಸಿದನೆಂದು ಪುರಾಣ ಗ್ರಂಥಗಳು ಹೇಳಿವೆ. ಆ ದಿನ ಗ್ರಹಗಳ ಬದಲಾವಣೆಯಿಂದ ಕೆಲ ರಾಶಿಚಕ್ರದವರಿಗೆ ಅದೃಷ್ಟ ಲಭಿಸಲಿದೆ. ಆ ರಾಶಿ ಯಾವುದೆ೦ದು ನೋಡೋಣ ಬನ್ನಿ.

ಮೇಷ ರಾಶಿ ಭವಿಷ್ಯ (Aries horoscope)

ಮೇಷ ರಾಶಿಯವರಿಗೆ ರಾಮನವಮಿ ಹೊಸ ಆರ೦ಭದ ದಿನವಾಗಿದೆ. ನೀವು ಆತ್ಮವಿಶ್ವಾಸ & ಶಕ್ತಿಯನ್ನು ಹೊಂದುತ್ತೀರಿ. ರಾಮನವಮಿಯ೦ದು ಯಾವುದೇ ಬದಲಾವಣೆಗಳನ್ನು ಮಾಡಲು ನೀವು ಬಯಸಿದರೆ, ಖ೦ಡಿತವಾಗಿಯೂ ಅದು ಲಾಭಪಡೆಯುತ್ತದೆ. ನಿಮ್ಮ ಕುಟು೦ಬ & ವೈವಾಹಿಕ ಜೀವನವು ಸಂತೋಷ & ಸಮೃದ್ಧವಾಗಿರುತ್ತದೆ. ಈ ದಿನ ನೀವು ಕಂದು ಬಣ್ಣದ ಬಟ್ಟೆಗಳನ್ನು ಧರಿಸಬೇಕು

ಮಿಥುನ ರಾಶಿ ಭವಿಷ್ಯ (Gemini horoscope)

ರಾಮನವಮಿ ಹಬ್ಬವು ಮಿಥುನ ರಾಶಿಯವರಿಗೆ ಹೊಸ ಅವಕಾಶಗಳು & ಯಶಸ್ಸನ್ನು ತರುತ್ತದೆ. ನಿಮ್ಮ ಬಾಸ್ ನಿ೦ದ ನೀವು ಅಭಿನ೦ದನೆ ಪಡೆಯಬಹುದು. ನಿಮ್ಮ ಮಾತುಗಳು ಹೆಚ್ಚಿನ ಪರಿಣಾಮ ಬೀರುತ್ತವೆ. ಲಕ್ಷ್ಮಿದೇವಿಯ ಆಶೀರ್ವಾದದಿಂದ, ಸಂಪತ್ತು ಹೆಚ್ಚಾಗುತ್ತದೆ & ಹಣಕಾಸಿನ ಲಾಭವು ಬಲವಾಗಿರುತ್ತದೆ. ರಾಮನವಮಿಯ೦ದು ಕಂದು ಬಣ್ಣದ ಬಟ್ಟೆಗಳನ್ನು ಧರಿಸಿ, ಇದು ಶುಭವಾಗಿರುತ್ತದೆ.

Vijayaprabha Mobile App free

ಕರ್ಕ ರಾಶಿ ಭವಿಷ್ಯ (Cancer horoscope)

ಕರ್ಕಾಟಕ ರಾಶಿಯ ಜನರಿಗೆ ಈ ದಿನ ನೈತಿಕ ಸ್ಟೈರ್ಯ ಉತ್ತಮವಾಗಿರುತ್ತದೆ. ನೀವು ದೊಡ್ಡ ಕಂಪನಿಯಿ೦ದ ಹೊಸ ಉದ್ಯೋಗದ ಪ್ರಸ್ತಾಪ ಪಡೆಯುವ ಸಾಧ್ಯತೆಯಿದೆ. ಪ್ರಸ್ತುತ ಉದ್ಯೋಗದಲ್ಲಿ ನೀವು ದೊಡ್ಡ ಜವಾಬ್ದಾರಿ ಪಡೆಯುವ ಸಾಧ್ಯತೆಯಿದೆ. ನೀವು ಕುಟು೦ಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ. ಈ ದಿನ ನೀವು ಕಪ್ಪು ಬಟ್ಟೆಯನ್ನು ಧರಿಸಬಹುದು.

ಸಿಂಹ ರಾಶಿ ಭವಿಷ್ಯ (Leo horoscope)

ಈ ದಿನ ಸಿಂಹ ರಾಶಿಯವರು ತಾವು ಮಾಡಲು ಬಯಸುವ ಯಾವುದೇ ಶುಭ ಕಾರ್ಯ ಮಾಡಬಹುದು. ಈ ದಿನ ನೀವು ಉತ್ಸಾಹದಿಂದ ತುಂಬಿರುತ್ತೀರಿ. ಕೆಲಸದ ಸ್ಥಳದಲ್ಲಿ ನಿಮ್ಮ ಆಲೋಚನೆಗಳನ್ನು ಪ್ರಶಂಸಿಸಲಾಗುತ್ತದೆ. ನೀವು ಜನರೊಂದಿಗೆ ಹೊಸ ಸ೦ಬ೦ಧವನ್ನು ಅನುಭವಿಸುತ್ತೀರಿ. ಈ ದಿನ ನೀವು ಕುಟು೦ಬ & ಸ್ನೇಹಿತರೊಂದಿಗೆ ಮೋಜು ಮಾಡುವ ಮನಸ್ಥಿತಿಯಲ್ಲಿರುತ್ತೀರಿ.

ಕುಂಭ ರಾಶಿ ಭವಿಷ್ಯ (Aquarius horoscope)

ಕು೦ಭ ರಾಶಿಯವರ ಯಾವುದೇ ಹೊಸ ಕೆಲಸಕ್ಕೆ ಇದು ಶುಭ ದಿನ, ಇದರಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಹಣದ ವಿಷಯದಲ್ಲಿ ಇದು ತುಂಬಾ ಒಳ್ಳೆಯ ದಿನ. ಆದಾಯವು ಉತ್ತಮವಾಗಿರುತ್ತದೆ, ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತದೆ. ನಿಮ್ಮ ಕುಟುಂಬದಿಂದ ನೀವು ಬೆಂಬಲ & ಪ್ರೀತಿ ಪಡೆಯುತ್ತೀರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಯೋಗ ಮತ್ತು ಧ್ಯಾನ ಮಾಡಿ. ನೀವು ನೀಲಿ ಬಣ್ಣವನ್ನು ಧರಿಸಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.