Darshan : ಜೈಲಿನಲ್ಲಿ ಹಾಸಿಗೆ, ದಿಂಬು ಬೇಕು ಎಂದು ನಟ ದರ್ಶನ್ ಕೋರ್ಟ್ ಮೆಟ್ಟಿಲೇರಿದ್ದು, ಇಂದು ವಿಚಾರಣೆ ನಡೆಯಲಿದೆ.
ಹೌದು, ಕೊಲೆ ಪ್ರಕರಣದಲ್ಲಿ ಮತ್ತೆ ಜೈಲುಪಾಲಾಗಿರುವ ದರ್ಶನ್ ಕೆಲ ಮೂಲಸೌಕರ್ಯಕ್ಕೆ ಬೇಡಿಕೆ ಇಟ್ಟಿದ್ದಾರೆ. ಕಳೆದ ವಾರ ಮೂಲ ಸೌಕರ್ಯ ನೀಡಿ, ಜೈಲಿನ ಮ್ಯಾನ್ಯುಯಲ್ ಪ್ರಕಾರ ಅಂತ ಕೋರ್ಟ್ ಆದೇಶ ಮಾಡಿತ್ತು. ಅದೇ ರೀತಿ ಜೈಲಿನ ಅಧಿಕಾರಿಗಳು ಜಮ್ಖಾನ, ದಿಂಬು ಕಲ್ಪಿಸಿದೆ. ಜೊತೆಗೆ ವಾಕಿಂಗ್‌ಗೆ ಅವಕಾಶ ನೀಡಿದೆ. ಇದರಿಂದ ಕುಪಿತರಾದ ದರ್ಶನ್ ಮತ್ತೆ ಕೋರ್ಟ್‌ಗೆ ಜೈಲಾಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ.
ಕೋರ್ಟ್ ಹೇಳಿದರೂ ಹಾಸಿಗೆ ಕೊಟ್ಟಿಲ್ಲ ಅಂತ ದರ್ಶನ್ ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಕನಿಷ್ಠ ಸೌಲಭ್ಯವನ್ನೂ ನೀಡಿಲ್ಲ. ಜೈಲು ಸೇರಿ ತಿಂಗಳಾದರೂ ಕ್ವಾರಂಟೈನ್ ಸೆಲ್‌ನಲ್ಲಿ ಇಟ್ಟಿದ್ದಾರೆಂದು ಎಂದು ದರ್ಶನ್ ಪರ ವಕೀಲರು ಕೋರ್ಟ್ ಗಮನಕ್ಕೆ ತಂದಿದ್ದಾರೆ. ಜೈಲಿನಲ್ಲಿ ಸರಿಯಾಗಿ ಸೌಲಭ್ಯ ಕೊಡುತ್ತಿಲ್ಲ. ನಾನು ಸಾಯ್ತೀನಿ, ವಿಷ ಕೊಟ್ಟುಬಿಡಿ ಎಂದು ದರ್ಶನ್ ನುಡಿದಿದ್ದರು.




