ಅಕ್ಟೋಬರ್ 1ರಿಂದ ಈ ನಿಯಮಗಳಲ್ಲಿ ಬದಲು; ಈಗಲೇ ಈ ಕೆಲಸ ಪೂರ್ಣಗೊಳಿಸಿ

Vijayaprabha

ಅಕ್ಟೋಬರ್ 1ರಿಂದ ಹೊಸ ನಿಯಮಗಳು ಜಾರಿಗೆ ಬರಲಿದ್ದು, ಮ್ಯೂಚುವಲ್ ಫಂಡ್ ಫೋಲಿಯೋಗಳು, ಡಿಮ್ಯಾಟ್, ಟ್ರೇಡಿಂಗ್ ಖಾತೆಗಳು & 2 ಸಾವಿರ ನೋಟುಗಳ ಠೇವಣಿಗಳ ಗಡುವು 30ರಂದು ಕೊನೆಗೊಳ್ಳಲಿದ್ದು, ವಿದೇಶಿ ವೆಚ್ಚವು ರೂ.7 ಲಕ್ಷವನ್ನು ಮೀರಿದರೆ ಕ್ರೆಡಿಟ್ ಕಾರ್ಡ್‌ಗಳ ಮೇಲೆ 20% ಟಿಸಿಎಸ್ ವಿಧಿಸಲಾಗುತ್ತದೆ. ವೈದ್ಯಕೀಯ ಅಥವಾ ಶಿಕ್ಷಣದ ವೆಚ್ಚವು ರೂ.7 ಲಕ್ಷಕ್ಕಿಂತ ಹೆಚ್ಚಾದರೆ ಶೇಕಡಾ 5 ಟಿಸಿಎಸ್ ವಿಧಿಸಲಾಗುತ್ತದೆ. ಜನನ ಮತ್ತು ಮರಣಗಳ ನೋಂದಣಿ ಕಾಯ್ದೆಯು ಅಕ್ಟೊಬರ್ 1ರಿಂದ ಜಾರಿಗೆ ಬರಲಿದೆ.

ಇದನ್ನು ಓದಿ: ಏರ್‌ಟೆಲ್ ಬಳಕೆದಾರರಿಗೆ ಗುಡ್ ನ್ಯೂಸ್; ರೂ.99 ಅಗ್ಗದ ಬೆಲೆಗೆ ಅನಿಯಮಿತ 5G ಡೇಟಾ

ಅಕ್ಟೊಬರ್ ನಿಂದ ಈ ವಾಹನಗಳು ದುಬಾರಿ

ಭಾರತೀಯ ಆಟೋಮೊಬೈಲ್ ತಯಾರಕ ಟಾಟಾ ಮೋಟಾರ್ಸ್ ತನ್ನ ವಾಣಿಜ್ಯ ವಾಹನಗಳ ಬೆಲೆ ಏರಿಕೆಯನ್ನು ಮಾಡಲಿದೆ. ಶೇಕಡಾ 3ರಷ್ಟು ವಾಹನಗಳ ಬೆಲೆ ಏರಿಕೆ ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ. ಬೆಲೆ ಹೆಚ್ಚಳವು ಹಿಂದಿನ ಆಂತರಿಕ ವೆಚ್ಚಗಳ ಉಳಿದ ಪರಿಣಾಮವನ್ನು ಸರಿದೂಗಿಸಲು ಮತ್ತು ವಾಣಿಜ್ಯ ವಾಹನಗಳ ಶ್ರೇಣಿಯಾದ್ಯಂತ ಈ ಬೆಲೆಯನ್ನು ಅಳವಡಿಸಲು ನಿರ್ಧರಿಸಲಾಗಿದೆ ಎಂದು ಕಂಪನಿಯು ಫೈಲಿಂಗ್‌ನಲ್ಲಿ ಷೇರು ವಿನಿಮಯ ಕೇಂದ್ರಕ್ಕೆ ತಿಳಿಸಿದೆ ಎನ್ನಲಾಗಿದೆ.

ಇದನ್ನು ಓದಿ: ತುರ್ತಾಗಿ ಪಾನ್ ಕಾರ್ಡ್ ಬೇಕೇ? ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಿ, ಆಧಾರ್ ಇದ್ದರೆ ಸಾಕು!

₹2000 ನೋಟುಗಳು

ಅಕ್ಟೋಬರ್‌ 1 ರಿಂದ ದೇಶದಲ್ಲಿ ಹಲವು ಹೊಸ ನಿಯಮಗಳು ಜಾರಿಯಾಗಲಿವೆ. ₹2000 ನೋಟುಗಳು ಅಕ್ಟೋಬರ್‌ 1 ರಿಂದ ಚಾಲ್ತಿಯಲ್ಲಿ ಇರುವುದಿಲ್ಲ. ಆರ್‌ಬಿಐ ಈ ತಿಂಗಳ 30ರ ವರೆಗೆ ಗಡುವು ನೀಡಿದೆ. ಇನ್ನೂ 2 ಸಾವಿರ ರೂಪಾಯಿ ನೋಟುಗಳಿದ್ದರೆ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟು ಬದಲಾಯಿಸಿಕೊಳ್ಳುವಂತೆ ರಿಸರ್ವ್‌ ಬ್ಯಾಂಕ್‌ ಸೂಚಿಸಿದೆ. ಈ ವರ್ಷ ಮೇ 19 ರಂದು 2 ಸಾವಿರ ರೂಪಾಯಿ ನೋಟುಗಳನ್ನು ಹಿಂಪಡೆಯುವುದಾಗಿ ಆರ್‌ಬಿಐ ಘೋಷಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಆರ್‌ಬಿಐ ಮೇ 23 ರಿಂದ 2 ಸಾವಿರ ರೂಪಾಯಿ ನೋಟುಗಳನ್ನು ಸ್ವೀಕರಿಸುತ್ತಿದೆ.

ಇದನ್ನು ಓದಿ:  ಸ್ಪರ್ಧಾರ್ಥಿಗಳಿಗಾಗಿ ಪ್ರಚಲಿತ ವಿದ್ಯಮಾನಗಳು; ಈ ಬಾರಿಯ ಬೋರ್ಲಾಗ್ ಪ್ರಶಸ್ತಿ ಯಾರಿಗೆ ಸಿಕ್ಕಿದೆ ಗೊತ್ತಾ?

ಡಿಮ್ಯಾಟ್ ನಾಮಿನಿ ಸೂಚನೆಗೆ

ಡಿಮ್ಯಾಟ್ ಹೊಂದಿರುವವರು ಮತ್ತು ಮ್ಯೂಚುವಲ್ ಫಂಡ್ ಹೂಡಿಕೆದಾರರು ತಮ್ಮ ಖಾತೆಗಳಿಗೆ ನಾಮಿನಿಗಳನ್ನು ನಾಮನಿರ್ದೇಶನ ಮಾಡುವ ಗಡುವು ಇದೇ 30ರಂದು ಕೊನೆಗೊಳ್ಳಲಿದೆ. ಇನ್ನು ಮುಂದೆ ಸಮಯ ವಿಸ್ತರಣೆ ಇರುವುದಿಲ್ಲ, ಘೋಷಣೆ ಸಲ್ಲಿಸದಿದ್ದಲ್ಲಿ ಖಾತೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಸೆಬಿ ತಿಳಿಸಿದೆ. ಯಾವುದೇ ಅನಿರೀಕ್ಷಿತ ಅವಘಡಗಳ ಸಂದರ್ಭದಲ್ಲಿ ಹೂಡಿಕೆದಾರರ ಹಣವನ್ನು ವಾರಸುದಾರರಿಗೆ ಯಾವುದೇ ಸಮಸ್ಯೆಗಳಿಲ್ಲದೆ, ವರ್ಗಾಯಿಸಲು ಇದು ಉಪಯುಕ್ತವಾಗಿದೆ.

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ ಇಲ್ಲಿಕ್ಲಿಕ್ಮಾಡಿ
Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version