Women reservation: ಕೇಂದ್ರದ ಸಂಚಲನ ನಿರ್ಧಾರ; ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಂಪುಟ ಒಪ್ಪಿಗೆ

Vijayaprabha

Women reservation: ಪ್ರಧಾನಿ ಮೋದಿ ನೇತೃತ್ವದಲ್ಲಿ ಸಂಸತ್ತಿನ ಗ್ರಂಥಾಲಯ ಕಟ್ಟಡದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹಿಳೆಯರಿಗೆ ಸಂಸತ್ತಿನಲ್ಲಿ ಶೇ.33ರಷ್ಟು ಮೀಸಲಾತಿ ನೀಡುವ ಮಸೂದೆ ಸೇರಿದಂತೆ ಹಲವು ಮಸೂದೆಗಳಿಗೆ ಒಪ್ಪಿಗೆ ನೀಡಲಾಗಿದೆ. ಈ ಮಸೂದೆಗಳನ್ನು ವಿಶೇಷ ಅಧಿವೇಶನ ವೇಳೆ ಮಂಡಿಸಿ ಅನುಮೋದನೆ ಪಡೆಯಲಾಗುತ್ತದೆ. ಶೇ.33ರಲ್ಲಿ ಪರಿಶಿಷ್ಟ ಜಾತಿ, ಪಂಗಡ ಮತ್ತು ಆಂಗ್ಲೋ ಇಂಡಿಯನ್ಸ್ ಸಮುದಾಯಗಳಿಗೂ ಹಂಚಿಕೆ ಮಾಡಲಾಗುತ್ತದೆ ಎನ್ನಲಾಗಿದೆ.

ಇದನ್ನೂ ಓದಿ: ಕಣ್ಣಿನ ಆರೈಕೆ ಏಕೆ ಮುಖ್ಯ; ನೈಸರ್ಗಿಕವಾಗಿ ಕಣ್ಣಿನ ದೃಷ್ಟಿ ಸುಧಾರಿಸುವುದು ಹೇಗೆ?

Women reservation: ಮಹಿಳಾ ರಾಜಕಾರಣಕ್ಕೆ ಬಂಪರ್‌; ಮಹಿಳಾ ಮೀಸಲಾತಿ ಮಸೂದೆಯ ಸ್ಥಿತಿಗತಿ ಏನು?

Union Cabinet approves Womens Reservation Bill

ಮಹಿಳಾ ಮೀಸಲಾತಿ ಕಾಯಿದೆಗೆ 2010ರಲ್ಲೇ ರಾಜ್ಯಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆಯಾದರೂ ಲೋಕಸಭೆಯಲ್ಲಿ ಮಂಡನೆಯಾಗಿಲ್ಲ. ಮಸೂದೆಗೆ ಕಾಂಗ್ರೆಸ್, ಬಿಜೆಪಿ ಬೆಂಬಲಿಸಿದ್ದರೂ 33% ನಲ್ಲಿ ಹಿಂದುಳಿದವರಿಗೂ ಮೀಸಲಾತಿ ನೀಡಬೇಕೆಂಬ ಕಾರಣಕ್ಕೆ ವಿಳಂಬವಾಗಿತ್ತು. ಪ್ರಸ್ತುತ ಲೋಕಸಭೆಯಲ್ಲಿ 78 ಮಹಿಳಾ ಸಂಸದರಿದ್ದಾರೆ. ಇದನ್ನು ಒಟ್ಟು ಸಂಖ್ಯೆ 543ಕ್ಕೆ ಹೋಲಿಸಿದಲ್ಲಿ 15%ಗಿಂತಲೂ ಕಡಿಮೆ ಇದೆ. ಇನ್ನು ಕರ್ನಾಟಕ ಸೇರಿ ಹಲವು ರಾಜ್ಯಗಳ ವಿಧಾನಸಭೆಗಳಲ್ಲೂ 10%ಗಿಂತ ಕಡಿಮೆ ಶಾಸಕಿಯರಿದ್ದಾರೆ.ಕಾಂಗ್ರೆಸ್, ಬಿಜು ಜನತಾ ದಳ, ಭಾರತ್ ರಾಷ್ಟ್ರ ಸಮಿತಿ ಸೇರಿದಂತೆ ಹಲವು ಪಕ್ಷಗಳು ಮಹಿಳಾ ಮೀಸಲಾತಿ ಮಸೂದೆ ಮಂಡಿಸುವಂತೆ ಒತ್ತಾಯಿಸಿ ಪತ್ರ ಬರೆದಿದ್ದರು.

ಇದನ್ನೂ ಓದಿ: ಇಂದು ಚಂದ್ರನ ಸ್ಥಾನ ಬದಲಾವಣೆಯಿಂದ ಯಾವ ರಾಶಿಯವರಿಗೆ ಲಾಭ!? ಇಲ್ಲಿದೆ ನೋಡಿ ನಿಮ್ಮ ರಾಶಿ!

27 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲಾತಿ, ಈ ದಿನ ಮಂಡನೆ

ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ 27 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಮೋದಿ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಈ ಮಸೂದೆಯನ್ನು ಸೆಪ್ಟೆಂಬರ್ 20ರಂದು ಅಂದರೆ ಬುಧವಾರ ಸಂಸತ್ತಿನಲ್ಲಿ ಮಂಡಿಸಲಾಗುವುದು.

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ ಇಲ್ಲಿಕ್ಲಿಕ್ಮಾಡಿ
Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version