Benefits of honey: ಚೆಲುವೆಯ ಅಂದದ ಮುಖಕ್ಕೆ ಜೇನಿನ ಫೇಸ್ ಮಾಸ್ಕ್; ಒಣ, ಒಡೆದ ತುಟಿಗಳ ಆರೈಕೆಗೆ ಜೇನುತುಪ್ಪ ಉತ್ತಮ ಔಷಧಿ

Vijayaprabha

benifits of honey: ಹಾಲು ಮತ್ತು ಜೇನುತುಪ್ಪದ ಮಿಶ್ರಣವು ಮುಖದ ನೈಸರ್ಗಿಕ ಹೊಳಪನ್ನು ಮರಳಿ ಪಡೆಯಲು ಸಹಾಯ ಮಾಡುವುದಲ್ಲದೆ, ಒಣ ಹಾಗು ಒಡೆದ ತುಟಿಗಳ ಆರೈಕೆಗೆ ಜೇನುತುಪ್ಪ ಉತ್ತಮ ಔಷಧಿಯಾಗಿದೆ.

benifits of honey: ಚೆಲುವೆಯ ಅಂದದ ಮುಖಕ್ಕೆ ಜೇನಿನ ಫೇಸ್ ಮಾಸ್ಕ್!

Benefits of honey

ಹಾಲು ಮತ್ತು ಜೇನುತುಪ್ಪದ ಮಿಶ್ರಣವು ಮುಖದ ನೈಸರ್ಗಿಕ ಹೊಳಪನ್ನು ಮರಳಿ ಪಡೆಯಲು ಸಹಾಯ ಮಾಡಲು ಉತ್ತಮ ಔಷಧಿಯಾಗಿದೆ. ಹಾಲಿನಲ್ಲಿರುವ ಗುಣಗಳು ಹಸಿ ಹಾಲಿನಲ್ಲಿ ಲ್ಯಾಕ್ಟಿಕ್ ಆಮ್ಲವಿದ್ದು ಇದು ಆಲ್ಫಾ ಹೈಡ್ರಾಕ್ಸಿ ಆಸಿಡ್ ಅಥವಾ AHA ಆಗಿದ್ದು, ಲ್ಯಾಕ್ಟಿಕ್ ಆಮ್ಲವು ಅದರ ಅತ್ಯಂತ ಪರಿಣಾಮಕಾರಿ ಎಫ್ಫೋಲಿಯೇಟಿಂಗ್ ಗೆ ಹೆಸರುವಾಸಿಯಾಗಿದೆ. ಇದು ಸತ್ತ ಚರ್ಮದ ಕೋಶಗಳನ್ನು ಮತ್ತು ನಿಮ್ಮ ತ್ವಚೆಯಲ್ಲಿರುವ ಎಲ್ಲಾ ಕೊಳೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಕಣ್ಣಿನ ಆರೈಕೆ ಏಕೆ ಮುಖ್ಯ; ನೈಸರ್ಗಿಕವಾಗಿ ಕಣ್ಣಿನ ದೃಷ್ಟಿ ಸುಧಾರಿಸುವುದು ಹೇಗೆ?

1. ಜೇನುತುಪ್ಪ ಮತ್ತು ಪಪ್ಪಾಯಿ..

ಜೇನುತುಪ್ಪ ಮತ್ತು ಪಪ್ಪಾಯ ಫೇಸ್ ಪ್ಯಾಕ್ ಅರ್ಧ ಕಪ್ ಪಪ್ಪಾಯದ ತಿರುಳಿಗೆ 2 ಚಮಚ ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣಮಾಡಿ. ನಂತರ ಮುಖಕ್ಕೆ ಹಚ್ಚಿ 15-20 ನಿಮಿಷಗಳ ಕಾಲ ಮುಖದ ಮೇಲೆ ಆರಲು ಬಿಡಬೇಕು. ನಂತರ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ಸೂರ್ಯನ ಕಿರಣದಿಂದ ಮುಂಕಾದ ತ್ವಚೆ ಹೊಳಪನ್ನು ಪಡೆದುಕೊಳ್ಳುವುದರ ಜೊತೆಗೆ ಚರ್ಮವು ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ. ಪಪ್ಪಾಯಿ ಹಣ್ಣಿನಲ್ಲಿದೆ ‘ಸೌಂದರ್ಯದ’ ಮಾಂತ್ರಿಕ ಶಕ್ತಿ!

ಇದನ್ನೂ ಓದಿ: ಗ್ಯಾಸ್, ಸೆಳೆತ, ಅಜೀರ್ಣ, ಹೊಟ್ಟೆ ಉಬ್ಬರ ಸಮಸ್ಯೆಗೆ ನೈಸರ್ಗಿಕ ಪರಿಹಾರ

2. ಕಡಲೆ ಹಿಟ್ಟು+ ಜೇನುತುಪ್ಪ

4 ಚಮಚ ಕಡಲೆ ಹಿಟ್ಟು, 1 ಚಮಚ ಅರಿಶಿನ, 2 ಚಮಚ ಗೋಧಿ ಹಿಟ್ಟು, ಚಿಟಿಕೆಯಷ್ಟು ನ್ಯಾಚುರಲ್ ಕ್ಯಾಂಪ್‍ಪೋರ್, ಒಂದೆರಡು ಎಸಳು ಕೇಸರಿ, 2 ಚಮಚ ಸಾಸಿವೆ ಎಣ್ಣೆ, 2 ಚಮಚ ಜೇನುತುಪ್ಪ, 2ಚಮಚ ಹಾಲು. ಇವೆಲ್ಲವನ್ನು ಒಂದು ಬೌಲ್‍ನಲ್ಲಿ ಹಾಕಿ ಸರಿಯಾಗಿ ಕಲಸಿ. ನಂತರ 10-15 ನಿಮಿಷ ನೆನೆಯಲು ಬಿಡಿ. ಬಳಿಕ ಮುಖಕ್ಕೆ ಹಚ್ಚಿಕೊಳ್ಳಬೇಕು. ಮುಖಕ್ಕೆ ಹಚ್ಚಿದ ನಂತರ ಫೇಸ್ ಪ್ಯಾಕ್ ಒಣಗಿದ ಮೇಲೆ ತಣ್ಣೀರಿನಲ್ಲಿ ಮುಖವನ್ನು ತೊಳೆಯಿರಿ.

ಇದನ್ನೂ ಓದಿ: ಮಧುಮೇಹಿಗಳಿಗೆ 5 ಆರೋಗ್ಯಕರ ಪಾನೀಯಗಳು; ಒಮ್ಮೆ ಟ್ರೈ ಮಾಡಿ ನೋಡಿ..!

ಒಣ ಹಾಗೂ ಒಡೆದ ತುಟಿಗಳ ಆರೈಕೆಗೆ ಜೇನುತುಪ್ಪ!!

ಒಣ ಹಾಗೂ ಒಡೆದ ತುಟಿಗಳ ಆರೈಕೆಗೆ ಜೇನುತುಪ್ಪವು ಅತೀ ಉತ್ತಮ ಔಷಧಿಯಾಗಿದೆ. ಸ್ವಲ್ಪ ಬಾದಾಮಿಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ನೆನೆಸಿ. ರುಬ್ಬಿಕೊಂಡು ಅದರ ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ತುಟಿಗಳಿಗೆ ಹಚ್ಚಿಕೊಂಡು ಮಸಾಜ್ ಮಾಡಿ. ಬಳಿಕ ತಣ್ಣೀರಿನಿಂದ ತೊಳೆಯಿರಿ. ಒಣ ಹಾಗೂ ಒಡೆದ ತುಟಿಗಳ ಆರೈಕೆಗೆ ದಿನದಲ್ಲಿ ಎರಡು ಸಲ ಇದನ್ನು ಬಳಸಿ.

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ ಇಲ್ಲಿಕ್ಲಿಕ್ಮಾಡಿ
Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version