ರಾಜ್ಯದಲ್ಲಿ ಚುನಾವಣೆ ದಿನಾಂಕ ಘೋಷಣೆ; ಇಂದಿನಿಂದಲೇ ನೀತಿ ಸಂಹಿತೆ ಜಾರಿ, ಯಾವುದಕ್ಕೆ ಅನ್ವಯ? ಚುನಾವಣೆ ಪ್ರಮುಖ ದಿನಾಂಕಗಳು ಇಲ್ಲಿವೆ

Vijayaprabha

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು,ರಾಜ್ಯದ ಒಟ್ಟು 224 ಕ್ಷೇತ್ರಗಳಿಗೆ ಒಟ್ಟು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಸುದ್ದಿಗೋಷ್ಠಿ ನಡೆಸಿ, ಮೇ.10ಕ್ಕೆ ಮತದಾನ ನಡೆಯಲಿದೆ. ಮೇ.13ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ತಿಳಿಸಿದರು.

ಇದನ್ನು ಓದಿ: ಪ್ರಿಯಾಂಕಾ ಚೋಪ್ರಾಗೆ ಕಿರುಕುಳ ನೀಡಿ ಓಡಿಸಿದ ಕರಣ್..ಶಾರುಖ್ ಜೊತೆಗಿನ ಸ್ನೇಹವೇ ಕಾರಣ: ಕಂಗನಾ ರಣಾವತ್

ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಮುಖ ದಿನಾಂಕಗಳು:

ಏಪ್ರಿಲ್ 13 ಅಧಿಸೂಚನೆ ಪ್ರಕಟ

ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ

ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನ

ಮೇ 10 ರಂದು ಒಂದೇ ಹಂತದಲ್ಲಿ ಮತದಾನ

ಮೇ 13 ರಂದು ಮತ ಎಣಿಕೆ

ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯ

ಮೇ 23ರ ಒಳಗೆ ಹೊಸ ಸರ್ಕಾರ ರಚನೆ

ಇದನ್ನು ಓದಿ: Pan Aadhaar link: ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್, ಪ್ಯಾನ್-ಆಧಾರ್ ಕಾರ್ಡ್​ ಲಿಂಕ್ ಗಡುವು ಮತ್ತೆ ವಿಸ್ತರಣೆ

ಇಂದಿನಿಂದಲೇ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿ!

ಬಹು ನಿರೀಕ್ಷಿತ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮೇ 10 ರಂದು ಮತದಾನ ನಡೆಯಲಿದ್ದು, ಹಾಗಾಗಿ, ಇಂದಿನಿಂದ ಎಲ್ಲಾ ವಿಷಯಗಳ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿಡಲಿದ್ದು, ಚುನಾವಣಾ ಅಕ್ರಮ ತಡೆಯುವಲ್ಲಿ ಕ್ರಮ ವಹಿಸಲಿದೆ. ಇಂದಿಂದ ರಾಜ್ಯಾದ್ಯಂತ ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ ವಾಹನಗಳ ತಪಾಸಣೆ ನಡೆಯಲಿದೆ.

ಇದನ್ನು ಓದಿ: ಉದ್ಯೋಗಿಗಳಿಗೆ ಭರ್ಜರಿ ಗುಡ್‌ ನ್ಯೂಸ್‌; ಪಿಎಫ್ ಬಡ್ಡಿ ದರ ಹೆಚ್ಚಿಸಿದ ಕೇಂದ್ರ, ಶೇಕಡಾವಾರು ಎಷ್ಟು ಏರಿಕೆ?

ಚುನಾವಣಾ ನೀತಿ ಸಂಹಿತೆ ಯಾವುದಕ್ಕೆ ಅನ್ವಯ?

ವಿಧಾನಸೌಧ ಸೇರಿ ಸರ್ಕಾರಿ ಕಟ್ಟಡಗಳಲ್ಲಿ ಸಭೆಗಳನ್ನು ಮಾಡುವಂತಿಲ್ಲ.

ಸರ್ಕಾರಿ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಫ್ಲೆಕ್ಸ್ ಅಳವಡಿಸುವಂತಿಲ್ಲ, ಸೌಲಭ್ಯ ಪಡೆಯುವಂತಿಲ್ಲ.

ಸರ್ಕಾರಿ ಘೋಷಣೆ ಹೊರಡಿಸುವಂತಿಲ್ಲ, ಸಹಿ ಹಾಕುವಂತಿಲ್ಲ.

ನಾಯಕರು ಸರ್ಕಾರಿ ಕಾರುಗಳನ್ನು ಬಿಟ್ಟು ಖಾಸಗಿ ಕಾರುಗಳಲ್ಲಿ ಓಡಾಡಬೇಕು. ಆದರೆ ಸರ್ಕಾರಿ ಕಾರುಗಳನ್ನು ಚುನಾವಣಾ ಕಾರ್ಯಗಳ ನಿರ್ವಹಣೆಗಾಗಿ ಅಧಿಕಾರಿಗಳು ಬಳಕೆ ಮಾಡಬಹುದು.

ಸಿಎಂ, ಸಚಿವರು, ವಿಪಕ್ಷ ನಾಯಕರಿಗೆ ಭದ್ರತೆ ಮುಂದುವರಿಯುತ್ತದೆ.

ಇದನ್ನು ಓದಿ: CRPF ನಲ್ಲಿ 9,212 ಕಾನ್ಸ್‌ಟೇಬಲ್‌ ಹುದ್ದೆಗಳು; SSLC ವಿದ್ಯಾರ್ಹತೆ, ಈಗಲೇ ಅರ್ಜಿ ಸಲ್ಲಿಸಿ

Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version