UPI Payment: ಬಂಪರ್ ಆಫರ್ ಘೋಷಣೆ, ಇನ್ಮುಂದೆ UPI ವಹಿವಾಟುಗಳಿಗೆ EMI ಸೌಲಭ್ಯ!

Vijayaprabha

ಕ್ರೆಡಿಟ್ ಮೂಲಕ ಮಾಡುವ ವಹಿವಾಟುಗಳನ್ನು ಇಎಂಐಗೆ (EMI) ಪರಿವರ್ತಿಸಬಹುದು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದ್ದು, ಕೆಲವು ಬ್ಯಾಂಕುಗಳು ಡೆಬಿಟ್ ಕಾರ್ಡ್ ಮೂಲಕ EMI ಗೆ ಪರಿವರ್ತಿಸಲು ಸಹ ಅವಕಾಶ ನೀಡುತ್ತವೆ. ಆದರೆ ಈಗ UPI ಪಾವತಿಯನ್ನು EMI ಗೆ ಪರಿವರ್ತಿಸಬಹುದು. ಹೌದು, ಖಾಸಗಿ ವಲಯದ ಪ್ರಮುಖ ಐಸಿಐಸಿಐ ಬ್ಯಾಂಕ್ (ICIC Bank) ತನ್ನ ಗ್ರಾಹಕರಿಗೆ ಈ ಸೌಲಭ್ಯವನ್ನು ಒದಗಿಸಿದ್ದು, ICIC ಬ್ಯಾಂಕ್ ನೀಡುವ ‘ಪೇ ಲೆಟರ್’ (Pay Letter) ಗ್ರಾಹಕರು ಈ ಸೌಲಭ್ಯವನ್ನು ಪಡೆಯಬಹುದು.

ಇದನ್ನು ಓದಿ: ಭರ್ಜರಿ ಗುಡ್ ನ್ಯೂಸ್: ನಿಮ್ಮ ಖಾತೆಗೆ 2000ರೂ, ಪಿಎಂ ಕಿಸಾನ್‌ 14ನೇ ಕಂತು ಬಿಡುಗಡೆ!

ಈಗ UPI ಮೂಲಕ QR ಕೋಡ್ ಸ್ಕ್ಯಾನ್ ಮಾಡಿದ ಯಾವುದೇ ಐಟಂನ ಯಾವುದೇ ಖರೀದಿಯನ್ನು EMI ಅಡಿಯಲ್ಲಿ ಮಾಡಬಹುದಾಗಿದ್ದು, ಈ EMI ಆಯ್ಕೆಯು ಎಲೆಕ್ಟ್ರಾನಿಕ್ಸ್, ಫ್ಯಾಷನ್, ಉಡುಪು, ಗೃಹೋಪಯೋಗಿ ವಸ್ತುಗಳು ಇತ್ಯಾದಿಗಳಿಗೆ ಅನ್ವಯಿಸುತ್ತದೆ. ಆದರೆ ಈ ಖರೀದಿ ಮೊತ್ತ ಕನಿಷ್ಠ ರೂ10 ಸಾವಿರ ಇರಬೇಕಾಗಿದ್ದು, ರೂ10 ಸಾವಿರಕ್ಕಿಂತ ಹೆಚ್ಚಿನ ಮೊತ್ತವನ್ನು ಇಎಂಐ ಆಗಿ ಪರಿವರ್ತಿಸಬಹುದು.

ಇದನ್ನು ಓದಿ: WhatsApp ಮೂಲಕ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಡೌನ್‌ಲೋಡ್ ಮಾಡಿ

ಈ ವಿಷಯದ ಬಗ್ಗೆ ಐಸಿಐಸಿಐ ಬ್ಯಾಂಕ್‌ನ ಡಿಜಿಟಲ್ ಚಾನೆಲ್ ಮತ್ತು ಪಾಲುದಾರಿಕೆಯ ಮುಖ್ಯಸ್ಥ ಬಿಜಿತ್ ಭಾಸ್ಕರ್ ಅವರು, `ಇತ್ತೀಚೆಗೆ ಐಸಿಐಸಿಐ ನೀಡುವ ಬೈ ನೌ ಪೇ ಲೇಟರ್ ಸೇವೆಗಳನ್ನು (Buy Now Pay Letter Service) ಹೆಚ್ಚು ಜನರು ಬಳಸುತ್ತಿರುವುದನ್ನು ಗಮನಿಸಿ ನಾವು ಇಎಂಐ ಸೌಲಭ್ಯವನ್ನು(EMI Facility) ತಂದಿದ್ದೇವೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಪಡಿತರ ಚೀಟಿದಾರರಿಗೆ ಸರ್ಕಾರದಿಂದ ಭರ್ಜರಿ ಗಿಫ್ಟ್; ಅಕ್ಕಿ ಜೊತೆ ಈ ವಸ್ತುಗಳು ಉಚಿತವಾಗಿ ಸಿಗಲಿವೆ!

ಈ ಆಯ್ಕೆಯನ್ನು ಹೇಗೆ ಬಳಸುವುದು

* ಈ ಸೌಲಭ್ಯವನ್ನು ಮೊದಲು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ICICI ‘iMobile’ ಆಪ್ ತೆರೆಯಿರಿ.

* ಅದರ ನಂತರ ಪಾವತಿ ಮಾಡಲು ಬಯಸುವ QR ಕೋಡ್ ಅನ್ನು ಸ್ಕ್ಯಾನ್ ಮಾಡಿ.

* ಇನ್ನು, ಈ ಮೊತ್ತವು 10 ಸಾವಿರಕ್ಕಿಂತ ಹೆಚ್ಚಿದ್ದರೆ ನೀವು EMI ಆಯ್ಕೆಯನ್ನು ಆರಿಸಿಕೊಳ್ಳಬಹುದು.

* ಇಎಂಐ ಆಯ್ಕೆಗಳನ್ನು ಮೂರೂ ಮಾದರಿಗಳಲ್ಲಿ, ಅಂದರೆ ಮೂರು, ಆರು, ಒಂಬತ್ತು ತಿಂಗಳುಗಳಾಗಿ ಆಯ್ಕೆ ಮಾಡಬಹುದು.

* ಇನ್ನು, UPI ಪಾವತಿಯನ್ನು ಖಚಿತಪಡಿಸಿದ ನಂತರ, ವಹಿವಾಟು ಪೂರ್ಣಗೊಳ್ಳುತ್ತದೆ.

ಇದನ್ನು ಓದಿ: ಕೇಂದ್ರ ಸರ್ಕಾರದಿಂದ ಮತ್ತೊಂದು ಯೋಜನೆ; ರೈತರಿಗೆ 15 ಲಕ್ಷ ರೂ ನೀಡುತ್ತಿರುವ ಯೋಜನೆ ಇದೆ

Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version