ಹಿರಿಯ ನಟಿ 

ಸುಧಾರಾಣಿ ಪ್ರೆಗ್ನೆಂಟ್..? 

ಶಾಕ್ ಆದ ಫ್ಯಾನ್ಸ್..!

ಹಲವು ವರ್ಷಗಳಿಂದ ಸಿನಿರಂಗದಿಂದ ದೂರ ಉಳಿದಿದ್ದ ಹಿರಿಯ ನಟಿ ಸುಧಾರಾಣಿ ಕಿರುತೆರೆಗೆ ಎಂಟ್ರಿ ಕೊಟ್ಟಿರೋ ವಿಚಾರ ಗೊತ್ತೇ ಇದೆ.

ಶ್ರೀರಸ್ತು ಶುಭಮಸ್ತು ಧಾರವಾಹಿಯ ಮೂಲಕ ನಟಿ ಸುಧಾರಾಣಿ ಎಲ್ಲರನ್ನೂ ರಂಜಿಸುತ್ತ ಕನ್ನಡಿಗರ ಹೃದಯ ಗೆದ್ದಿದ್ದಾರೆ.

ಇನ್ನು, ಈ ಧಾರವಾಹಿಯ ಬಗ್ಗೆ ಕೇಳುವುದೇ ಬೇಡ. ಜನರನ್ನು ರಂಜಿಸುವುದು ಅಷ್ಟೇ ಅಲ್ಲದೆ, ಒಂದು ಒಳ್ಳೆ ಸಂದೇಶವನ್ನು ಸಹ ಜನರಿಗೆ ತಲುಪಿಸುತ್ತಿದೆ.

ಶುರುವಿನಿಂದ ಇಂದಿನ ವರೆಗೂ ಒಂದಲ್ಲ ಒಂದು ಸಂದೇಶ ನೀಡುತ್ತಾ ಬಂದಿರುವ ಶ್ರೀರಸ್ತು ಶುಭಮಸ್ತು ಧಾರವಾಹಿ ಇದೀಗ ಸಡನ್ ಆಗಿ ಪ್ರೇಕ್ಷಕರಿಗೆ ಶಾಕ್ ಕೊಟ್ಟಿದೆ.

ಈ ಧಾರಾವಾಹಿಯಲ್ಲಿ ಮಕ್ಕಳ ವಿರೋಧದ ನಡುವೆ ಇಬ್ಬರ ಸೊಸೆಯಂದಿರು ಮುಂದೆ ನಿಂತು ತುಳಸಿ ಹಾಗು ಮಾಧವಗೆ ಮದುವೆ ಮಾಡಿಸುತ್ತಾರೆ.

ಹೀಗೆ ಒಳ್ಳೆಯ ಸಂದೇಶದ ಜೊತೆ ಸಾಗುತಿದ್ದ ಕಥೆಗೆ ಇದೀಗ ಸಡನ್ ಟ್ವಿಸ್ಟ್ ಕೊಟ್ಟಿದೆ ಧಾರವಾಹಿ ತಂಡ. 

ದ್ವೇಷದಿಂದ ತುಳಸಿಯನ್ನು ನೋಡುತ್ತಿದ್ದ ಮಕ್ಕಳು ಈಗಷ್ಟೇ ಅವರನ್ನು ಪ್ರೀತಿಯೊಂದಿಗೆ ನೋಡುತ್ತಿದ್ದು, ನಿಧಾನವಾಗಿ ಅಮ್ಮನ ಪ್ರೀತಿಯ ಕಡೆಗೆ ವಾಲುತ್ತಿದ್ದಾರೆ.  

ಅಷ್ಟರಲ್ಲೇ ತುಳಸಿಗೆ ತಾನು ಗರ್ಭಿಣಿ ಎನ್ನುವುದು ಗೊತ್ತಾಗಿದ್ದು, ಈ ವಿಷಯವನ್ನು ಯಾರ ಬಳಿ ಹೇಳಿಕೊಳ್ಳಲಾಗದೆ ನಟಿ ಮುಜುಗರಕ್ಕಿಡಾಗಿದ್ದಾರೆ

ಈ ನಡುವೆ ಅಷ್ಟೇ ಪ್ರೀತಿಯೊಂದಿಗೆ ತನ್ನೊಂದಿಗೆ ಮಾತನಾಡುತ್ತಿದ್ದ ಮಕ್ಕಳು ತಾನು ಗರ್ಭಿಣಿ ಅಂಥ ಗೊತ್ತಾದ್ರೆ ತನ್ನೊಂದಿಗೆ ಮಾತನಡುತ್ತಾರಾ? ಇಲ್ಲವೇ ಮನೆಯಿಂದ ಹೊರ ಹಾಕ್ತರ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.

ಇನ್ನೊಂದೆಡೆ, ಈ ರೀತಿ ಪ್ರೆಗ್ನೆಂಟ್ ಎನ್ನುವ ಕಾನ್ಸೆಪ್ಟ್ ತಂದು ಸಂಬದಕ್ಕೆ ಧಕ್ಕೆ ತರಬೇಡಿ ಸ್ಟೋರಿ ಚೇಂಜ್ ಮಾಡಿ ಎಂದು ಅಭಿಮಾನಿಗಳು ಕೇಳುತ್ತಿದ್ದರೆ, ಇನ್ನು ಕೆಲವರು ಈ ಸಂದೇಶ ಕೂಡ ಚೆನ್ನಾಗಿದೆ. ಲೇಟ್ ಪ್ರೆಗ್ನೆಂಸಿ ಬಗ್ಗೆ ಅರಿವು ಬಹಳ ಮುಖ್ಯ ಎಂದು ಹೇಳುತ್ತಿದ್ದಾರೆ.