5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಭರ್ಜರಿ ಸಿಹಿಸುದ್ದಿ; ಪ್ರತಿ ಎಕರೆಗೆ 5 ಸಾವಿರ ಸಹಾಯಧನ, ನಿಮ್ಮ ಖಾತೆಗೆ ಒಟ್ಟು 31 ಸಾವಿರ ರೂ!

Vijayaprabha

ಕೇಂದ್ರ ಸರ್ಕಾರ (central government) ಮತ್ತು ರಾಜ್ಯ ಸರ್ಕಾರಗಳು(State Govt) ರೈತರಿಗಾಗಿ(Farmer) ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿಸುವುದು ಈ ಯೋಜನೆಗಳ ಉದ್ದೇಶವಾಗಿದೆ. ಈಗಾಗಲೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು (Kisan Samman Nidhi Yojana)  ಕೇಂದ್ರ ಸರ್ಕಾರ ರೈತರಿಗಾಗಿ ಜಾರಿಗೆ ತಂದಿದ್ದು, ಅದೇ ರೀತಿ ಮುಖ್ಯಮಂತ್ರಿ ಕೃಷಿ ಆಶೀರ್ವಾದ ಯೋಜನೆ (MMKAY) ಒಂದಾಗಿದ್ದು, ಈ ಯೋಜನೆಯಡಿ ರೈತರಿಗೆ ವಾರ್ಷಿಕ 5000 ರೂಪಾಯಿಗಳನ್ನು ನೀಡಲಾಗುತ್ತಿದೆ.

ಇದನ್ನು ಓದಿ: 10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಹೊಂದಿರುವವರಿಗೆ ಹೊಸ ನಿಯಮ; ಜೂನ್ 14 ಕೊನೆಯ ದಿನ, ಬೇಗನೆ ಈ ಕೆಲಸ ಮಾಡಿ!

ಹೌದು, ಮುಖ್ಯಮಂತ್ರಿ ಕೃಷಿ ಆಶೀರ್ವಾದ ಯೋಜನೆಯಡಿಯಲ್ಲಿ (MMKAY) 5 ಎಕರೆ ಅಥವಾ ಅದಕ್ಕಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ರೈತರಿಗೆ ಪ್ರತಿ ಎಕರೆಗೆ 5 ಸಾವಿರ ರೂಪಾಯಿಯನ್ನು ಸರ್ಕಾರ ನೀಡುತ್ತಿದ್ದು, ರೈತರಿಗೆ ಯಾವುದೇ ತೊಂದರೆಯಾಗಬಾರದು ಅಂತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗಾಗಿ ವಿವಿಧ ಯೋಜನೆಗಳನ್ನು ನಡೆಸುತ್ತಿವೆ. ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿಸುವುದು ಈ ಯೋಜನೆಗಳ ಉದ್ದೇಶವಾಗಿದೆ.

ಇದನ್ನು ಓದಿ: Sukanya Samriddhi Yojana: ಹೀಗೆ ಮಾಡಿದ್ರೆ ನಿಮ್ಮ ಕೈಗೆ ಸಿಗಲಿದೆ ಬರೋಬ್ಬರಿ 64 ಲಕ್ಷ ರೂ!

ಈ ಯೋಜನೆಗಳಡಿ ರೈತನ ಕತೆಗೆ ಒಟ್ಟು 31 ಸಾವಿರ ರೂ

ಹೌದು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು (Kisan Samman Nidhi Yojana) ಕೇಂದ್ರ ಸರ್ಕಾರ ರೈತರಿಗಾಗಿ ಜಾರಿಗೆ ತಂದಿದ್ದು, ಅದೇ ರೀತಿ ಕೃಷಿ ಆಶೀರ್ವಾದ ಯೋಜನೆಯನ್ನು ಜಾರ್ಖಂಡ್ ಸರ್ಕಾರ (Jharkhand Govt) ರೈತರಿಗಾಗಿ ಜಾರಿಗೆ ತಂದಿದೆ. ಇನ್ನು, ಕೃಷಿ ಆಶೀರ್ವಾದ ಯೋಜನೆಯಡಿಯಲ್ಲಿ (MMKAY) 5 ಎಕರೆ ಅಥವಾ ಅದಕ್ಕಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ರೈತರಿಗೆ ಪ್ರತಿ ಎಕರೆಗೆ 5000 ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡಲಾಗುತ್ತಿದ್ದು, ಖಾರಿಫ್ ಹಂಗಾಮಿನ ಕೃಷಿಗೆ ಮುನ್ನ ಈ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗುವುದು. MMKAY ಯೋಜನೆಯಡಿ 5 ಎಕರೆ ಜಮೀನು ಹೊಂದಿರುವ ರೈತರು ಗರಿಷ್ಠ 25,000 ರೂ ಪಡೆಯುತ್ತಾರೆ. ರಾಜ್ಯದಲ್ಲಿ ಪಿಎಂ ಕಿಸಾನ್ ನಿಧಿಯ ಲಾಭ ಪಡೆಯುವ ರೈತರಿಗೆ ಕನಿಷ್ಠ 11,000 ರೂ ದಿಂದ ಗರಿಷ್ಠ 31,000 ರೂ ಸಿಗುತ್ತದೆ.

ಇದನ್ನು ಓದಿ: ರೇಷನ್‌ ಕಾರ್ಡ್‌ ಇದ್ದವರಿಗೆ ಹೊಸ ರೂಲ್ಸ್‌; ಜೂನ್‌ 30 ರೊಳಗೆ ತಪ್ಪದೇ ಈ ಕೆಲಸ ಮಾಡಿ, ಇಲ್ಲದಿದ್ದರೆ ನಿಮ್ಮ ರೇಷನ್‌ ಕಡಿತ ಪಕ್ಕಾ.!

ಒಂದು ಎಕರೆ ಅಥವಾ ಅದಕ್ಕಿಂತ ಕಡಿಮೆ ಜಮೀನು ಹೊಂದಿದರುವ ರೈತ ಖಾರಿಫ್ ಹಂಗಾಮಿನ ಕಟಾವಿಗೆ ಮುಂಚಿತವಾಗಿ ಸರ್ಕಾರದಿಂದ ಕೃಷಿ ಆಶೀರ್ವಾದ ಯೋಜನೆಯಡಿ 5000 ರೂ ಪಡೆಯುತ್ತಾನೆ. ಪಿಎಂ ಕಿಸಾನ್ ಯೋಜನೆಯಡಿ (Kisan Samman Nidhi Yojana) ಈಗಾಗಲೇ ವಾರ್ಷಿಕ 6000 ರೂಗಳ ಪ್ರಯೋಜನವನ್ನು ಪಡೆಯುತ್ತಿದ್ದು, ಈ ಮೂಲಕ ವರ್ಷದಲ್ಲಿ ಒಟ್ಟು 11,000 ರೂ ಪಡೆಯಬಹುದು. ಅದೇ ರೀತಿ 5 ಎಕರೆ ಕೃಷಿ ಭೂಮಿ ಹೊಂದಿರುವ ರೈತನ ಖಾತೆಗೆ ರಾಜ್ಯ ಸರ್ಕಾರದಿಂದ 25 ಸಾವಿರ ರೂ ಮತ್ತು ಕೇಂದ್ರ ಸರ್ಕಾರದಿಂದ 6000 ರೂ ಸೇರಿದಂತೆ ರೈತನಿಗೆ ಹೀಗೆ ವರ್ಷದಲ್ಲಿ ಒಟ್ಟು 31 ಸಾವಿರ ರೂ ಬಂದು ಸೇರುತ್ತದೆ.

ಇದನ್ನು ಓದಿ: EPFO​​ನಲ್ಲಿ 2859 ಹುದ್ದೆಗಳಿಗೆ ಬಂಪರ್ ನೇಮಕಾತಿ: ಪಿಯುಸಿ, ಪದವಿ ವಿದ್ಯಾರ್ಹತೆ, ಇಂದೇ ಅರ್ಜಿ ಸಲ್ಲಿಸಿ

MMKAY ಯೋಜನೆಗೆ ಸಂಬಂಧಿಸಿದ ಷರತ್ತುಗಳು:-

ರೈತರು ಗರಿಷ್ಠ 5 ಎಕರೆವರೆಗೆ ಕೃಷಿಯೋಗ್ಯ ಭೂಮಿಯನ್ನು ಹೊಂದಿರಬೇಕು.

ಬಡವರು ಮತ್ತು ಸಣ್ಣ ರೈತರು ಮಾತ್ರ ಈ ಯೋಜನೆಯ ಲಾಭವನ್ನು ಪಡೆಯಬಹುದು.

ರೈತರು ಜಾರ್ಖಂಡ್‌ನ ಖಾಯಂ ನಿವಾಸಿಗಳಾಗಿರಬೇಕು.

ಇದನ್ನು ಓದಿ: ಪಡಿತರ ಚೀಟಿದಾರರಿಗೆ ಮಹತ್ವದ ಸುದ್ದಿ, ದೇಶದಾತ್ಯಂತ ಹೊಸ ನಿಯಮ ಜಾರಿ!

Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version