ಅನ್ನದಾತರೇ: ಈ ರೀತಿ ಮಾಡಿದ್ರೆ ನಿಮ್ಮ ಖಾತೆ ಸೇರುತ್ತೆ ಬರೋಬ್ಬರಿ 42 ಸಾವಿರ; ಸರ್ಕಾರದ ಈ ಹಣವನ್ನು ನಿಮ್ಮದಾಗಿಸಿಕೊಳ್ಳಿ!

Vijayaprabha

PM Kisan Yojana and PM Kisan ManDhan Scheme: ಕೇಂದ್ರ ಸರ್ಕಾರ ರೈತರಿಗಾಗಿ ಹಲವಾರು ಯೋಜನೆಗಳನ್ನು ನೀಡುತ್ತಿದ್ದು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಮತ್ತು ಪಿಎಂ ಕಿಸಾನ್ ಮನ್ ಧನ್ ಈ ಎರಡು ಯೋಜನೆಗಳ ಮೂಲಕ ರೈತರಿಗೆ 42 ಸಾವಿರ ಕ್ಲೈಮ್ ಮಾಡಬಹುದು.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ (Kisan Samman Nidhi Yojana) ರೈತರಿಗೆ 6 ಸಾವಿರ

ಹೌದು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಎಲ್ಲರಿಗೂ ತಿಳಿದಿದ್ದು, ಪ್ರಧಾನಿ ನರೇಂದ್ರ ಮೋದಿ(Narendra Modi) ಸರ್ಕಾರವೂ ವಾರ್ಷಿಕವಾಗಿ ರೈತರಿಗೆ 6 ಸಾವಿರ ಉಚಿತವಾಗಿ ಹಣ ನೀಡುತ್ತದೆ. ಆದರೆ ಈ ಹಣ ರೈತರಿಗೆ ಒಂದೇ ಬಾರಿ ಬರುವುದಿಲ್ಲ. ಕಂತುಗಳ ರೂಪದಲ್ಲಿ ರೈತರ ಖಾತೆಗೆ ಜಮಾ ಆಗುತ್ತದೆ.

ಇದನ್ನು ಓದಿ: ನಿಮ್ಮ ಆಧಾರ್ ಕಾರ್ಡ್ ಕಳೆದು ಹೋಗಿದೆಯಾ? ಆಧಾರ್ ಸಂಖ್ಯೆ ಕೂಡ ಗೊತ್ತಿಲ್ವಾ? ಆದರೂ ಡೌನ್‌ಲೋಡ್ ಮಾಡಿಕೊಳ್ಳಿ!

ಹೌದು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ (Pradhan Mantri Kisan Samman Nidhi Yojana) ನಾಲ್ಕು ತಿಂಗಳಿಗೊಮ್ಮೆ ವರ್ಷಕ್ಕೆ ಮೂರು ಬಾರಿ 2 ಸಾವಿರ ರೂಪಾಯಿಯಂತೆ 6 ಸಾವಿರ ರೈತರಿಗೆ ದೊರೆಯಲಿದ್ದು, ಇತ್ತೀಚೆಗೆ ಸರ್ಕಾರ 13ನೇ ಕಂತಿನ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಿದೆ.

ಇದನ್ನು ಓದಿ: ಜನ ಸಾಮಾನ್ಯರಿಗೆ ಬಂಪರ್ ಗಿಫ್ಟ್; 300ರೂ LPG ಸಬ್ಸಿಡಿ ಘೋಷಣೆ

ಈಗಾಗಲೇ ಕೋಟ್ಯಂತರ ರೈತರು ಈ ಯೋಜನೆಗೆ ಸೇರ್ಪಡೆಗೊಂಡಿದ್ದು, ಪಿಎಂ ಕಿಸಾನ್ ವೆಬ್‌ಸೈಟ್ https://pmkisan.gov.in/ ಮೂಲಕವೂ ನೀವು ಈ ಯೋಜನೆಗೆ ಸೇರಬಹುದು. ಇದಕ್ಕಾಗಿ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್, ಪಡಿತರ ಚೀಟಿ, ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆ, ಜಮೀನಿನ ದಾಖಲೆಗಳು ಇದ್ದಾರೆ ಸಾಕು. ನೀವು ಉಚಿತವಾಗಿ ಈ ಯೋಜನೆಗೆ ಸೇರಬಹುದು.

ಪಿಎಂ ಕಿಸಾನ್ ಮನ್ ಧನ್ (PM Kisan ManDhan Scheme) ಯೋಜನೆಯಡಿ 36 ಸಾವಿರ

ಭಾರತ ಸರ್ಕಾರವು ಅನ್ನದಾತರಿಗೆ ಮತ್ತೊಂದು ಯೋಜನೆಯನ್ನು ಸಹ ಒದಗಿಸುತ್ತಿದ್ದು, ಇದರ ಹೆಸರು ಪಿಎಂ ಕಿಸಾನ್ ಮನ್ ಧನ್ ಯೋಜನೆ (PM Kisan ManDhan Scheme). ಹೌದು, ಈ ಯೋಜನೆಗೆ ಸೇರುವ ಮೂಲಕ ರೈತರಿಗೆ ರೂ 3 ಸಾವಿರ ದೊರೆಯಲಿದ್ದು, ವರ್ಷಕ್ಕೆ ಒಟ್ಟು 36 ಸಾವಿರ ಪಡೆಯಬಹುದು.

ಇದನ್ನು ಓದಿ: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್: ಉಚಿತ ಅಕ್ಕಿ ಜೊತೆಗೆ ಇದೂ ಫ್ರಿ..!

ಇನ್ನು, ಈ ಹಣ ಪಡೆಯಬಯಸುವ ರೈತರು ಪ್ರತಿ ತಿಂಗಳು ರೂ 55 ಪಾವತಿಸಬೇಕು. ಪಾವತಿಸಬೇಕಾದ ಮೊತ್ತವು ಪಾವತಿದಾರರ ವಯಸ್ಸನ್ನು ಅವಲಂಬಿಸಿದ್ದು, 18 ವರ್ಷ ವಯಸ್ಸಿನಲ್ಲಿ ಈ ಯೋಜನೆಗೆ ಸೇರಿದರೆ ತಿಂಗಳಿಗೆ 55 ರೂ ಸಾಕು ಗರಿಷ್ಠ ರೂ 200 ಪಾವತಿಸಬೇಕಾಗುತ್ತದೆ.ಹೀಗೆ ಮಾಡುವುದರಿಂದ ರೈತರಿಗೆ 60 ವರ್ಷ ತುಂಬಿದ ನಂತರ ಪ್ರತಿ ತಿಂಗಳು ರೂ 3 ಸಾವಿರ ಬರಲಿದೆ.

ಕೇಂದ್ರ ಸರ್ಕಾರ ನೀಡುವ ಈ ಯೋಜನೆಯಲ್ಲಿ 18 ರಿಂದ 40 ವರ್ಷದೊಳಗಿನವರಿಗೆ ಮಾತ್ರ ಸೇರಲು ಅವಕಾಶವಿದ್ದು, ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ ಹೋಗುವ ಮೂಲಕ ಈ ಯೋಜನೆಗೆ ಉಚಿತವಾಗಿ ಸೇರಬಹುದು.

ಇದನ್ನು ಓದಿ: ಎಸ್‌ಬಿಐನಲ್ಲಿ ರೂ.1 ಲಕ್ಷ ಠೇವಣಿ ಇಟ್ಟರೆ ನಿಮಗೆ ಎಷ್ಟು ಸಿಗುತ್ತದೆ? ನೀವೇ ತಿಳಿದುಕೊಳ್ಳಿ..

ಒಂದು ವೇಳೆ ಯೋಜನೆಯಲ್ಲಿ ಸೇರಿರುವ ವ್ಯಕ್ತಿ ಮರಣಹೊಂದಿದರೆ, ನಂತರ ಅವರು ಪಾವತಿಸಿದ ಮೊತ್ತವನ್ನು ಬಡ್ಡಿಯೊಂದಿಗೆ ಹಿಂದಿರುಗಿಸುತ್ತಾರೆ. ಬೇಕಿದ್ದರೆ ಪಾಲುದಾರರು ಪಿಎಂ ಕಿಸಾನ್ ಮನ್ ಧನ್ ಯೋಜನೆಯನ್ನು (PM Kisan ManDhan Scheme) ಮುಂದುವರಿಸಬಹುದು. ಯೋಜನೆಯಲ್ಲಿ ವ್ಯಕ್ತಿ ಮೃತಪಟ್ಟರೆ, ಪಾಲುದಾರನಿಗೆ ರೂ1500 ಪಿಂಚಣಿ (pension) ಸಿಗುತ್ತದೆ ಮತ್ತು ಇಬ್ಬರೂ ಮೃತಪಟ್ಟರೆ ನಾಮಿನಿಗೆ ಹಣ ಸಿಗುತ್ತದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 6 ಸಾವಿರ ಮತ್ತು ಪಿಎಂ ಕಿಸಾನ್ ಮನ್ ಧನ್ ಯೋಜನೆಯಡಿ 36 ಸಾವಿರ ರಾಪಾಯಿಗಳಂತೆ, ಕೇಂದ್ರ ಸರ್ಕಾರ ನೀಡುವ ಈ ಎರಡು ಯೋಜನೆಗಳ ಮೂಲಕ ವಾರ್ಷಿಕವಾಗಿ ಒಟ್ಟಾರೆಯಾಗಿ ರೈತರಿಗೆ 42 ಸಾವಿರ ಸಿಗುತ್ತದೆ.

ಇದನ್ನು ಓದಿ: ಪಡಿತರ ಚೀಟಿ, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರಿಗೆ ಭರ್ಜರಿ ಸಿಹಿ ಸುದ್ದಿ..!

Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version