New ministers oath: ಮೊದಲ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಇಂದು ಒಟ್ಟು 24 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನೂತನ ಸಚಿವರ ಅಂತಿಮ ಪಟ್ಟಿಯು CM ಕಚೇರಿಯಿಂದ ಶುಕ್ರವಾರ ರಾತ್ರಿ ರಾಜಭವನಕ್ಕೆ ಕಳುಹಿಸಲಾಗಿದೆ.
ಇಂದು ಬೆಳಗ್ಗೆ11.30ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ರಾಜ್ಯಪಾಲ ಗೆಹ್ಲೋಟ್ ಅವರಿಂದ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಲಾಗುತ್ತದೆ. ಸಚಿವ ಸ್ಥಾನದ ಅವಕಾಶ ಪಡೆದಿರುವ 24 ಮಂದಿಯಲ್ಲಿ ಹೆಚ್ಚಿನವರು ಈಗಾಗಲೇ ಈ ಹಿಂದಿನ ಸರ್ಕಾರಗಳಲ್ಲಿ ಮಂತ್ರಿಗಳಾಗಿ ಕೆಲಸ ಮಾಡಿದ್ದಾರೆ.
ಇದನ್ನು ಓದಿ: 27 ಮೇ 2023 ಶನಿವಾರ ಅಮೃತಕಾಲ ಮತ್ತು ಯಮಗಂಡ ಕಾಲ ಯಾವಾಗ ಬರಲಿದೆ…!
24 ನೂತನ ಸಚಿವರ ಅಧಿಕೃತ ಪಟ್ಟಿ
HK ಪಾಟೀಲ್, ಕೃಷ್ಣ ಬೈರೇಗೌಡ, N. ಚೆಲುವರಾಯಸ್ವಾಮಿ, K. ವೆಂಕಟೇಶ್, ಡಾ. HC ಮಹದೇವಪ್ಪ, ಈಶ್ವರ್ ಖಂಡ್ರೆ, KN ರಾಜಣ್ಣ, ದಿನೇಶ್ ಗುಂಡೂರಾವ್, ಶರಣಬಸಪ್ಪ ದರ್ಶನಾಪುರ್, ಶಿವಾನಂದ್ ಪಾಟೀಲ್, RB ತಿಮ್ಮಾಪುರ್, SS ಮಲ್ಲಿಕಾರ್ಜುನ್, ಶಿವರಾಜ್ ತಂಗಡಗಿ, ಡಾ. ಶರಣಪ್ರಕಾಶ್ ಪಾಟೀಲ್, ಮಂಕಾಳ್ ವೈದ್ಯ, ಲಕ್ಷ್ಮೀ ಹೆಬ್ಬಾಳ್ಕರ್, ರಹೀಂ ಖಾನ್, D. ಸುಧಾಕರ್, ಸಂತೋಷ್ ಲಾಡ್, NS ಬೋಸರಾಜು, ಬೈರತಿ ಸುರೇಶ್, ಮಧು ಬಂಗಾರಪ್ಪ, ಡಾ. MC ಸುಧಾಕರ್, B. ನಾಗೇಂದ್ರ.
ಇದನ್ನು ಓದಿ: 27 ಮೇ 2023 ಇಂದು ಮಿಥುನ ಮತ್ತು ಕರ್ಕಾಟಕ ರಾಶಿಯವರು ನಷ್ಟವನ್ನು ಅನುಭವಿಸಬಹುದು..!
ಮೊದಲ ಬಾರಿಗೆ ಸಚಿವರಾಗುತ್ತಿರುವ ಶಾಸಕರು
- ಲಕ್ಷ್ಮಿ ಹೆಬ್ಬಾಳ್ಕರ್-ಬೆಳಗಾವಿ ಗ್ರಾಮೀಣ ಕ್ಷೇತ್ರ
- ಡಾ.ಎಂ.ಸಿ. ಸುಧಾಕರ್-ಚಿಂತಾಮಣಿ ಕ್ಷೇತ್ರ
- ಮಧು ಬಂಗಾರಪ್ಪ-ಸೊರಬ ಕ್ಷೇತ್ರ
- ಎನ್‌ಎಸ್. ಬೋಸರಾಜು-ಎಐಸಿಸಿ ಕಾರ್ಯದರ್ಶಿ
- ಕೆಎನ್ ರಾಜಣ್ಣ-ಮಧುಗಿರಿ ಕ್ಷೇತ್ರ
- ಬಿ. ನಾಗೇಂದ್ರ-ಬಳ್ಳಾರಿ ಗ್ರಾಮೀಣ ಕ್ಷೇತ್ರ
- ಕೆ. ವೆಂಕಟೇಶ್-ಪಿರಿಯಪಟ್ಟಣ ಕ್ಷೇತ್ರ
- ಮಾಂಕಾಳ್ ವೈದ್ಯ-ಭಟ್ಕಳ
ಸಿದ್ದು ಸಚಿವ ಸಂಪುಟದಲ್ಲಿ ಏಕೈಕ ಮಹಿಳೆಗೆ ಸ್ಥಾನ
CM ಸಿದ್ದರಾಮಯ್ಯನವರ ಸಂಪುಟದಲ್ಲಿ ಈ ಬಾರಿ ಏಕೈಕ ಮಹಿಳೆಗೆ ಸಚಿವ ಸ್ಥಾನ ನೀಡಲಾಗಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿಯಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಮಂತ್ರಿ ಸ್ಥಾನದ ಅವಕಾಶ ಒಲಿದು ಬಂದಿದ್ದು, ಅವರು ಎಂಎ ಪದವೀಧರಾಗಿದ್ದಾರೆ. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾಗಿಯೂ ಪಕ್ಷವನ್ನು ಸಂಘಟಿಸಿರುವ ಅವರು ಪಂಚಮಸಾಲಿ ಲಿಂಗಾಯತ ಸಮುದಾಯದ ಪ್ರತಿನಿಧಿಯಾಗಿದ್ದಾರೆ. 2018ರಲ್ಲಿ ಮೊದಲ ಬಾರಿಗೆ ಲಕ್ಷ್ಮಿ ಶಾಸಕಿಯಾಗಿ ಆಯ್ಕೆಗೊಂಡು ವಿಧಾನಸಭೆ ಪ್ರವೇಶಿಸಿದ್ದರು.
ಇದನ್ನು ಓದಿ: ನಿಮಗೆ ಪಿಎಂ ಕಿಸಾನ್ 14 ನೇ ಕಂತಿನ ಹಣ ಬೇಕಾದರೆ ಈ ರೀತಿ ಮಾಡಿ..!
ಶಾಸಕರಲ್ಲದ ಬೋಸರಾಜ್‌ಗೆ ಒಲಿದ ಮಂತ್ರಿ ಸ್ಥಾನ
ಅತ್ತ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರೂ ಆಗದೆ ಇತ್ತ ವಿಧಾನ ಪರಿಷತ್‌ನ ಸದಸ್ಯರೂ ಅಲ್ಲದ NS ಬೋಸರಾಜ್ ಅವರಿಗೆ ಮಂತ್ರಿ ಸ್ಥಾನ ನೀಡಿರುವುದು ಇದೀಗ ಸಾಕಷ್ಟು ಕುತೂಹಲ & ಚರ್ಚೆಗೆ ಕಾರಣವಾಗಿದೆ. ಏಕೆಂದರೆ, ಕಾಂಗ್ರೆಸ್‌ನಲ್ಲಿ ನಾಲ್ಕೈದು ಬಾರಿ ಶಾಸಕರಾಗಿದ್ದವರು ಹಾಗೂ ಪಕ್ಷಕ್ಕೆ ನಿಷ್ಠರಾಗಿರುವ ಅನೇಕ ಹಿರಿಯ ನಾಯಕರು ಸಾಕಷ್ಟು ಲಾಬಿ ನಡೆಸಿದ್ದರು ಕೂಡ ಸಚಿವ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಅಂಥದರಲ್ಲಿ ಬೋಸರಾಜ್ ಅವರಿಗೆ ಸಚಿವ ಪದವಿ ಒಲಿದಿರುವುದು ವಿಶೇಷ.
ಇದನ್ನು ಓದಿ: ನಿಮ್ಮ PF ಖಾತೆಯಲ್ಲಿ ಮೊಬೈಲ್ ಸಂಖ್ಯೆ, ಇಮೇಲ್ ಐಡಿ ನವೀಕರಿಸಿಲ್ಲವೇ..? ಹೀಗೆ ಮಾಡಿ
ಪುಟ್ಟರಂಗಶೆಟ್ಟಿಗೆ ಡೆಪ್ಯೂಟಿ ಸ್ಪೀಕರ್ ಸ್ಥಾನ
ಈ ಬಾರಿ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂದು ಭಾರೀ ನಿರೀಕ್ಷೆಯಲ್ಲಿದ್ದ ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿ. ಪುಟ್ಟರಂಗಶೆಟ್ಟಿ ನಿರಾಸೆ ಅನುಭವಿಸಿದ್ದಾರೆ. ಅವರಿಗೆ ಡೆಪ್ಯೂಟಿ ಸ್ಪೀಕರ್ ಸ್ಥಾನ ನೀಡಲಾಗಿದೆ. ಉಪ್ಪಾರ ಜಾತಿಯ ರಾಜ್ಯದ ಏಕೈಕ ಶಾಸಕ ಪುಟ್ಟರಂಗಶೆಟ್ಟಿ, ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರಾಗಿದ್ದಾರೆ. ಹೀಗಾಗಿ ಇವರಿಗೆ ಮಣೆ ಹಾಕುವುದು ನಿಶ್ಚಿತ ಎಂದೇ ಹೇಳಲಾಗಿತ್ತು. ಆದರೆ ದಿಲ್ಲಿಯಲ್ಲಿ ನಡೆದ ಸಂಪುಟ ಸರ್ಕಸ್‌ನಲ್ಲಿ ಪುಟ್ಟರಂಗಶೆಟ್ಟಿಗೆ ಮಂತ್ರಿಪಟ್ಟ ಕೈತಪ್ಪಿದೆ.
ಇದನ್ನು ಓದಿ: ಸರ್ಕಾರದಿಂದ ಉಚಿತ ವಿದ್ಯುತ್, 2000ರೂ ನೀಡಲು ಡೇಟ್ ಫಿಕ್ಸ್