ಬೆಂಗಳೂರು: KPTCL , ಎಸ್ಕಾಂ ಹಾಗೂ ಸಾರಿಗೆ ನೌಕರರ ವೇತನ ಹೆಚ್ಚಳ ಮಾಡಲಾಗುತ್ತದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದು, ದಕ್ಕೆ ಸಂಬಂಧಿಸಿದಂತೆ ಇಂದೇ ಆದೇಶ ಹೊರಡಿಸಲಾಗುತ್ತದೆ ಎಂದಿದ್ದಾರೆ.
ಇದನ್ನು ಓದಿ: ಆಧಾರ್ ಕಾರ್ಡ್ ಹೊಂದಿರುವವರಿಗೆ ಭರ್ಜರಿ ಗುಡ್ ನ್ಯೂಸ್
ಹೌದು, ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ಕೆಪಿಟಿಸಿಎಲ್ ನೌಕರರ ವೇತನವನ್ನು ಶೇ.20ರಷ್ಟು ಹಾಗೂ ಸಾರಿಗೆ ನೌಕರರ ವೇತನವನ್ನು ಶೇ.15ರಷ್ಟು ಹೆಚ್ಚಳ ಮಾಡಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಇಂದೇ ಆದೇಶ ಹೊರಡಿಸಲಾಗುತ್ತದೆ ಎಂದಿದ್ದಾರೆ. ನಿನ್ನೆ ನಡೆದ ಕೆಪಿಟಿಸಿಎಲ್ ನೌಕರರ ನಡುವಿನ ಸಂಧಾನಸಭೆ ಸಫಲವಾಗಿದ್ದು, ಸಾರಿಗೆ ನೌಕರರ ಸಂಧಾನ ವಿಫಲವಾಗಿತ್ತು.
ಇದನ್ನು ಓದಿ: ನೌಕರರ ವೇತನ ಪರಿಷ್ಕರಣೆ: KPTCL, ಎಸ್ಕಾಂ ನೌಕರರ ಇಂದಿನ ಮುಷ್ಕರ ರದ್ದು
ವಿಜಯಪ್ರಭ.ಕಾಂ ಫಾಲೋ ಮಾಡಿ
ಕ್ಷಣ ಕ್ಷಣದ ಮಾಹಿತಿಗಾಗಿ Vijayaprabha WhatsApp Group ಫಾಲೋ ಮಾಡಿ ಮಹತ್ವದ ಮಾಹಿತಿಗಾಗಿ Vijayaprabha Facebook Page ಫಾಲೋ ಮಾಡಿ ವೈವಿಧ್ಯಮಯ ಸುದ್ದಿಗಳಿಗಾಗಿ Vijayaprabha Twitter ಪೇಜ್ ಫಾಲೋ ಮಾಡಿ