ನನ್ನ ವಿಕಿಪೀಡಿಯಾವನ್ನು ಎಡಪಂಥೀಯರು ಹೈಜಾಕ್ ಮಾಡಿದ್ದಾರೆ ಎಂದು ಬಾಲವುಡ್ ಕ್ವೀನ್ ನಟಿ ಕಂಗನಾ ರಣಾವತ್ ಆರೋಪಿಸಿದ್ದಾರೆ.
ಹೌದು, ನನ್ನ ಜನ್ಮದಿನ, ಎತ್ತರ ಹಾಗೂ ನನ್ನ ಹಿನ್ನೆಲೆಯ ಬಗ್ಗೆ ಹೆಚ್ಚಿನ ಮಾಹಿತಿಯು ವಿಕಿಪೀಡಿಯಾದಲ್ಲಿ ಸಂಪೂರ್ಣ ತಪ್ಪಾಗಿದೆ. ನಾವು ಅದನ್ನು ಸರಿಪಡಿಸಲು ಎಷ್ಟು ಪ್ರಯತ್ನಿಸಿದರೂ ಆಗುತ್ತಿಲ್ಲ. ವಿಕಿಪೀಡಿಯಾದಲ್ಲಿ ನನ್ನ ಜನ್ಮದಿನ ಮಾರ್ಚ್ 20 ಅಂತ ಇದೆ. ಆದ್ರೆ, ನನ್ನ ಜನ್ಮದಿನ ಮಾರ್ಚ್ 23. ದಯವಿಟ್ಟು ವಿಕಿಪೀಡಿಯಾದ ಮಾಹಿತಿಯನ್ನು ನಂಬಬೇಡಿ ಎಂದು ನಟಿ ಕಂಗನಾ ರಾಣಾವತ್ ತಿಳಿಸಿದ್ದಾರೆ.