ನಾನು ಪ್ರತಿ ತಿಂಗಳೂ ಗರ್ಭಿಣಿಯಾಗುತ್ತಿದ್ದೆ, ಅದೆಷ್ಟು ಮಕ್ಕಳಿಗೆ ಜನ್ಮ ನೀಡಿದ್ದೇನೊ ದೇವರಿಗೇ ಗೊತ್ತು ಎಂದು ಬಾಲಿವುಡ್ ಡರ್ಟಿ ಪಿಕ್ಚರ್ ಖ್ಯಾತಿಯ ನಟಿ ವಿದ್ಯಾಬಾಲನ್ ಸಂಚಲನ ಹೇಳಿಕೆ ನೀಡಿದ್ದಾರೆ.
ಹೌದು, ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ವಿದ್ಯಾಬಾಲನ್ ಅವರು, ನಾನು ದಪ್ಪಗಿರುವುದನ್ನು, ನನ್ನ ಫೋಟೋವನ್ನು ನೋಡಿ ಜನರು ಇಲ್ಲ-ಸಲ್ಲದ್ದನ್ನೆ ಮಾತಾಡುತ್ತಾರೆ. ವಿದ್ಯಾ ಗರ್ಭಿಣಿಯಾಗಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಾರೆ. ಇದರಿಂದ ನಾನು ಪ್ರತಿ ತಿಂಗಳೂ ಗರ್ಭಿಣಿಯಾಗುತ್ತಿದ್ದೆ, ಅದೆಷ್ಟು ಮಕ್ಕಳಿಗೆ ಜನ್ಮ ನೀಡಿದ್ದೇನೊ ದೇವರಿಗೇ ಗೊತ್ತು ಎಂದು ನಟಿ ವಿದ್ಯಾಬಾಲನ್ ವ್ಯಂಗ್ಯವಾಡಿದ್ದಾರೆ.
ಇನ್ನು, ಕೆಲವರು ನಾನು ಸಣ್ಣಗಾಗಲು ಸಲಹೆ ಕೂಡ ನೀಡಿದ್ದರು. ದಪ್ಪಗಿರುವುದು ನನಗೆ ಸಮಸ್ಯೆ ಅನ್ನಿಸಿಲ್ಲ ಎಂದು ನಟಿ ವಿದ್ಯಾಬಾಲನ್ ಹೇಳಿದ್ದಾರೆ.