ರಾಯಚೂರು: ಶಾರ್ಟ್ ಸರ್ಕ್ಯೂಟ್ ನಿಂದ ಎಸಿ ಸ್ಪೋಟಗೊಂಡು ತಾಯಿ ಮತ್ತು ಇಬ್ಬರು ಮಕ್ಕಳು ಸಜೀವ ದಹನವಾಗಿರುವ ಘಟನೆ ರಾಯಚೂರು ಜಿಲ್ಲೆಯ ಶಕ್ತಿ ನಗರದಲ್ಲಿ ನಡೆದಿದೆ.
ಹೌದು, ಉಷ್ಣ ವಿದ್ಯುತ್ ಸ್ಥಾವರದಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಸಿದ್ದಲಿಂಗಯ್ಯ ಅವರ ಮನೆಯಲ್ಲಿ ನಿನ್ನೆ ರಾತ್ರಿ ಶಾರ್ಟ್ ಸರ್ಕ್ಯೂಟ್ ನಿಂದ ಎಸಿ ಸ್ಫೋಟಗೊಂಡಿದ್ದು, ಬಳಿಕ ಉಂಟಾದಂತ ಬೆಂಕಿಯಿಂದಾಗಿ ಮನೆಯಲ್ಲಿದ್ದಂತ ಪತ್ನಿ ರಂಜಿತಾ, ಮಕ್ಕಳಾದ ಮೃದುಲಾ (13) ಮತ್ತು ಕಾರುಣ್ಯ (11) ಸಜೀವ ದಹನವಾಗಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು, ಮೃತ ದುರ್ದೈವಿಗಳು ಮಂಡ್ಯ ಮೂಲದವರು ಎಂದು ತಿಳಿದು ಬಂದಿದ್ದು, ಶಕ್ತಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಜಯಪ್ರಭ.ಕಾಂ ಫಾಲೋ ಮಾಡಿ
ಕ್ಷಣ ಕ್ಷಣದ ಮಾಹಿತಿಗಾಗಿ Vijayaprabha WhatsApp Group ಫಾಲೋ ಮಾಡಿ ಮಹತ್ವದ ಮಾಹಿತಿಗಾಗಿ Vijayaprabha Facebook Page ಫಾಲೋ ಮಾಡಿ ವೈವಿಧ್ಯಮಯ ಸುದ್ದಿಗಳಿಗಾಗಿ Vijayaprabha Twitter ಪೇಜ್ ಫಾಲೋ ಮಾಡಿ