ಬಿಜೆಪಿಯ ನಾಯಕರ ಸೆಳೆಯಲು ಕಾಂಗ್ರೆಸ್ ಮುಂದಾಗಿದ್ದು, ವಸತಿ ಸಚಿವ ವಿ.ಸೋಮಣ್ಣ ಅವರ ಜೊತೆ ಮಾಜಿ ಸಿಎಂ ಸಿದ್ದರಾಮಯ್ಯ ಮುಂದಿನ ವಾರ ಮಾತುಕತೆ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಹೌದು, ಸಚಿವ ಸೋಮಣ್ಣ ಅವರ ಜೊತೆ ಪೂರ್ವಭಾವಿ ಮಾತುಕತೆ ನಡೆಸಲಾಗಿದೆ ಎಂದು ಕಾಂಗ್ರೆಸ್ನ ನಾಯಕರೊಬ್ಬರು ಹೇಳಿದ್ದು, ಇದು ಊಹಾಪೋಹ ಈ ಬಗ್ಗೆ ಸಚಿವರು ಸದ್ಯಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದು ಸೋಮಣ್ಣ ಆಪ್ತ ಮೂಲಗಳು ಹೇಳಿವೆ.
ಇನ್ನು, ಇತ್ತೀಚೆಗೆ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಗೆ ಸಚಿವ ವಿ. ಸೋಮಣ್ಣ ಅವರು ಗೈರಾಗಿದ್ದು, ಪಕ್ಷದೊಂದಿಗೆ ಅಸಮಾಧಾನವಿದೆ ಎನ್ನಲಾಗಿದೆ.