ಬಿಹಾರದ ಖಗಾಡಿಯಾ ಜಿಲ್ಲೆಯ ಹಾರ್ದಿಯಾ ಗ್ರಾಮದಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದ್ದು, ಅಲ್ಲಿನ ಮುಕೇಶ್ ಎಂಬಾತ, ಅದೇ ಗ್ರಾಮದ ನೀರಜ್ ಎಂಬಾತನ ಪತ್ನಿ ರೂಬಿ ಜೊತೆ ಪ್ರೇಮ ಸಂಬಂಧ ಬೆಳೆಸಿ ಪರಾರಿಯಾಗಿದ್ದ. ಇತ್ತ ನೀರಜ್ ಮುಕೇಶ್ ನ ಹೆಂಡತಿಯನ್ನು ಪ್ರೀತಿಸಿ ಮದುವೆಯಾಗಿದ್ದು, ಆಕೆಯ ಹೆಸರು ಕೂಡ ರೂಬಿ ಎಂದಾಗಿದೆ.
ಹಾಗಾಗಿ, ಇದು ಪ್ರೀತಿ ಎಂಬುವುದಕ್ಕಿಂತ, ಇಬ್ಬರು ಪರಸ್ಪರ ಹೆಂಡತಿಯರನ್ನು ಬದಲಾಯಿಸಿಕೊಂಡಂತಾಗಿದ್ದು, ಈ ಮದುವೆ ವಿಚಾರ ಇದೀಗ ಎಲ್ಲೆಡೆ ಚರ್ಚೆಯ ವಿಷಯವಾಗಿದೆ.