ಅಡುಗೆ ಎಣ್ಣೆ ಬೆಲೆಯಲ್ಲಿ ತೀವ್ರ ಏರಿಕೆ ಕಂಡುಬಂದಿದ್ದು, ಒಂದು ತಿಂಗಳಲ್ಲಿ ಕಡಲೆಕಾಯಿ ಎಣ್ಣೆ ಬೆಲೆ ಲೀಟರ್‌ಗೆ ₹15ರಿಂದ ₹20ಗೆ ಏರಿಕೆಯಾಗಿದ್ದು, ಇದರ ಜೊತೆಗೆ ತಾಳೆ ಎಣ್ಣೆ ಲೀಟರ್‌ಗೆ ₹3ರಿಂದ ₹5ವರೆಗೆ ಏರಿಕೆ ಕಂಡಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.
ಹೌದು, ದೇಶದಲ್ಲಿ ಎಣ್ಣೆ ಕಾಳುಗಳ ಉತ್ಪಾದನೆ ಕುಸಿತವಾಗಿದ್ದು, ಚೀನಾದಿಂದ ಕಡಲೆಕಾಯಿಗೆ ಬೇಡಿಕೆ ಹೆಚ್ಚಳ ಹಾಗೂ ಅಡುಗೆ ಎಣ್ಣೆ ಪೂರೈಕೆದಾರ ರಾಷ್ಟ್ರವಾದ ಉಕ್ರೇನ್‌ನಲ್ಲಿ ಯುದ್ಧದ ಕಾರಣದಿಂದ ದೇಶದಲ್ಲಿ ಎಣ್ಣೆ ಬೆಲೆ ಹೆಚ್ಚಿದೆ.