ದಾವಣಗೆರೆ: ಮತಗಳ ಪಡೆಯಲು ಜನರ ಓಲೈಕೆಗೆ ರಾಜಕಾರಣಿಗಳು ಮುಂದಾಗಿದ್ದು, ಗಿಫ್ಟ್‌ಗಳ ಮಹಾಪೂರವೇ ಹರಿದುಬರುತ್ತಿದೆ. ಈಗ ಬಿಜೆಪಿ ಶಾಸಕ M.P ರೇಣುಕಾಚಾರ್ಯ 500 ರೂ.ನ ನೋಟು ಹಂಚಿ ವಿವಾದಕ್ಕೆ ಸಿಲುಕಿದ್ದಾರೆ.
ಹೌದು, ಹೊನ್ನಳ್ಳಿ ಶಾಸಕರಾದ M.P ರೇಣುಕಾಚಾರ್ಯ ಅವರು, ದಾವಣಗೆರೆ ಜಿಲ್ಲೆಯ ಚೀಲೂರು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ 50ಕ್ಕೂ ಹೆಚ್ಚು ಮಹಿಳೆಯರಿಗೆ 500 ರೂ.ನ ನೋಟು ಹಂಚಿದ್ದಾರೆ. ಹಣ ಹಂಚಿದ್ದು, ವಿವಾದಕ್ಕೆ ಕಾರಣವಾಗಿದೆ.