ಕಾರ್ಮಿಕರ ಕೆಲಸದ ಅವಧಿಯನ್ನು ಹೆಚ್ಚಿಸುವ ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ವಿಧೇಯಕವನ್ನು ವಿಧಾನ ಪರಿಷತ್‌ನಲ್ಲಿ ಅಂಗೀಕರಿಸಲಾಗಿದೆ.
ಇದರಂತೆ ಕಾರ್ಮಿಕರು ವಾರದಲ್ಲಿ ಆರು ದಿನಗಳಲ್ಲಿ ಕೆಲಸ ಮಾಡುವ ಅವಧಿ ದಿನಕ್ಕೆ 8 ಗಂಟೆಯಂತೆ ವಾರಕ್ಕೆ 48 ಗಂಟೆ ಇರುತ್ತದೆ. ಆಡಳಿತ ಮಂಡಳಿ ಹಾಗೂ ಕಾರ್ಮಿಕರು ಪರಸ್ಪರ ಒಪ್ಪಿಕೊಂಡಲ್ಲಿ ಮಾತ್ರ ದಿನಕ್ಕೆ 12 ಗಂಟೆಯಂತೆ ವಾರಕ್ಕೆ 4 ದಿನ ಮಾಡಬಹುದು. ಈ ಕುರಿತು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರು ವಿಧೇಯಕವನ್ನು ಮಂಡಿಸಿದರು.