ದಾವಣಗೆರೆ: ಶಿಶು ಅಭಿವೃದ್ಧಿ ಯೋಜನೆ ಹರಿಹರ ಕಚೇರಿಗೆ ಕಂಪ್ಯೂಟರ್ ಆಪರೇಟರ್ ಹಾಗೂ ಮೆಸೆಂಜರ್ ಸೇವೆಯನ್ನು ಪಡೆಯಲು ಹೊರಸಂಪನ್ಮೂಲ ಏಜೆನ್ಸಿಗಳಿಂದ ಅಲ್ಪಾವಧಿ ಟೆಂಡರ್ಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತರು ಮಾರ್ಚ 21 ರ ಮಧ್ಯಾಹ್ನ 2 ಗಂಟೆಯೊಳಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ , ಪಿ. ಎಲ್. ಡಿ. ಬ್ಯಾಂಕ್ ಕಟ್ಟಡ , ಶಿವಮೊಗ್ಗ ರಸ್ತೆ , ಹರಿಹರ ಇಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂ. ಸಂ: 08192-241431 ಸಂಪರ್ಕಿಸಲು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.