ಪರಸ್ಪರ ಒಪ್ಪಿಗೆಯಿಂದ ದಂಪತಿ ವಿಚ್ಛೇದನಕ್ಕೆ ಪ್ರಕರಣ ದಾಖಲಿಸಿದಾಗಿನಿಂದಲೂ ನ್ಯಾಯಾಲಯ ಆದೇಶ ಮಾಡುವವರೆಗೂ ಪತಿ ಪತ್ನಿ ಇಬ್ಬರಲ್ಲೂ ವಿಚ್ಛೇದನಕ್ಕೆ ಸಮ್ಮತಿ ಇರಲೇಬೇಕು.
ಈ ಅವಧಿಯಲ್ಲಿ ಬೇಕಿದ್ದರೆ ವಿಚ್ಛೇದನಕ್ಕೆ ತಾವೇ ಕೊಟ್ಟಿರುವ ಒಪ್ಪಿಗೆಯನ್ನು ಹಿಂದೆ ಪಡೆಯಬಹುದು. ದಂಪತಿಯಲ್ಲಿ ಒಬ್ಬರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಆನಂತರ ಬರದೇ ಹೋದರೆ, 18 ತಿಂಗಳವರೆಗೆ ಕೋರ್ಟ್ ಸಮಯ ಕೊಡುತ್ತದೆ. ಆ ಬಳಿಕ ಪ್ರಕರಣವನ್ನು ವಜಾಗೊಳಿಸುತ್ತದೆ.