ರಾಮನಗರ: ಹೆಚ್.ಡಿ ಕುಮಾರಸ್ವಾಮಿಯನ್ನು ಲಾಕ್ ಮಾಡಲು ವಿಪಕ್ಷ ನಾಯಕ ಸಿದ್ದರಾಮಯ್ಯ ದಾಳವನ್ನು ಹೂಡಿದ್ರಾ ಎಂದು ಪ್ರಶ್ನೆ ಎದ್ದಿದ್ದು, ಗೆಲುವಿನ ಮಂತ್ರಕ್ಕೆಹೊಸ ತಂತ್ರಗಾರಿಕೆಯ ಮುನ್ನುಡಿಯನ್ನು ಸಿದ್ದರಾಮಯ್ಯ ಬರೆದಿದ್ದಾರೆ.
ಹೌದು, ಕಾಂಗ್ರೆಸ್ ಗೆದ್ದು ಅಧಿಕಾರ ಹಿಡಿಯಬೇಕಾದರೆ ಹಳೇ ಮೈಸೂರು ಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಬೇಕು. ಹೀಗಾಗಿ ಒಕ್ಕಲಿಗರ ಮತ ಸೆಳೆಯಲು ಚನ್ನಪಟ್ಟಣದಿಂದ ಸ್ಯಾಂಡಲ್ ವುಡ್ ಕ್ವೀನ್, ಮೋಹಕ ತಾರೆ, ಮಾಜಿ ಸಂಸದೆ ರಮ್ಯಾ ಅವರನ್ನು ಅಖಾಡಕ್ಕೆ ಇಳಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಹೀಗಾಗಲೇ ಕಾಂಗ್ರೆಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ರಮ್ಯಾ ಅವರು ಬಿಜೆಪಿ ಸೇರಿಲಿದ್ದಾರೆ ಎನ್ನಲಾಗಿತ್ತು. ಇನ್ನು, ಸಿದ್ದರಾಮಯ್ಯ ಅವರ ಈ ಪ್ಲ್ಯಾನ್ ವರ್ಕೌಟ್ ಆಗುತ್ತಾ ಕಾದುನೋಡಬೇಕು.