ಬಾಲಿವುಡ್ ಖ್ಯಾತ ನಟಿ ಕಾಜೊಲ್ ಜೊತೆ ನಟಿಸುವ ಆಸೆ ಇರುವುದಾಗಿ ನಟ ಕಿಚ್ಚ ಸುದೀಪ್ ಹೇಳಿದ್ದು, ಇದಕ್ಕೆ ಕೆಲ ಷರತ್ತು ಹಾಕಿದ್ದಾರೆ.
ಹೌದು, ಮಾಧ್ಯಮ ಜತೆ ಮಾತನಾಡಿದ ನಟ ಕಿಚ್ಚ ಸುದೀಪ್ ‘ನಾನು ಕಾಜೊಲ್ ಜೊತೆ ನಟಿಸಲು ಕಾಯುತ್ತಿದ್ದೇನೆ. ಅಂಥದ್ದೊಂದು ಅವಕಾಶ ಸಿಗಲಿ. ಅವಕಾಶ ಸಿಕ್ಕಾಗ ಅಜಯ್ ದೇವಗನ್ ಕೋಪಿಸಿಕೊಳ್ಳದಿರಲಿ’ ಎಂದು ಹೇಳಿದ್ದಾರೆ.
ಇನ್ನು, ವೈಯಕ್ತಿಕ ವಿಚಾರಕ್ಕೆ ನಟ ಅಜಯ್ ದೇವಗನ್ ಜೊತೆ ವಾದ ಮಾಡಿರಲಿಲ್ಲ ಮತ್ತು ಎಲ್ಲವೂ ಸುಖಾಂತ್ಯವಾಗಿದೆ ಎಂದು ಕಿಚ್ಚ ಸುದೀಪ್ ತಿಳಿಸಿದರು. ಭಾಷಾ ವಿಷಯದಲ್ಲಿ ಸುದೀಪ್ ಮತ್ತು ಅಜಯ್ ದೇವಗನ್ ನಡುವೆ ಟ್ವೀಟ್ ವಾರ್ ನಡೆದಿತ್ತು.