ಫೇಶಿಯಲ್ ಮಾಡಿಸಿಕೊಳ್ಳಲು ಹೋದ ವರ ಓಡಿಹೋಗಿದ್ದು, ವರನ ತಮ್ಮನೊಂದಿಗೆ ವಧು ಸಪ್ತಪದಿ ತುಳಿದಿರುವ ಘಟನೆ ಯುಪಿಯಲ್ಲಿ ನಡೆದಿದೆ.
ಹೌದು, ಇಷ್ಟವಿಲ್ಲದ ಮದುವೆಯಿಂದ ತಪ್ಪಿಸಿಕೊಳ್ಳಲು ಫೇಶಿಯಲ್ ಮಾಡಿಸಿಕೊಳ್ಳಲು ಹೋದ ವರ ಓಡಿಹೋಗಿದ್ದಾನೆ. ಹೀಗಾಗಿ, ವರನ ತಮ್ಮನೊಂದಿಗೆ ವಧು ಸಪ್ತಪದಿ ತುಳಿದಿದ್ದಾಳೆ.
ಬರೇಲಿಯ ತಿಲಕ್ ತನ್ನ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗುತ್ತಿದ್ದ. ಪಾಲಕರಿಗೆ ಹೇಳಿದರೂ ಕಿವಿಗೆ ಹಾಕಿಕೊಂಡಿರಲಿಲ್ಲ. ಹೀಗಾಗಿ, ಆತ ಮದುವೆ ಮಂಟಪದಿಂದ ಕಾಲ್ಕಿತ್ತಿದ್ದ. ಎಷ್ಟೋ ಹೊತ್ತಾದರೂ ಮದುಮಗ ಹಿಂತಿರುಗದ ಕಾರಣ ಎರಡೂ ಮನೆಯವರು ಚರ್ಚಿಸಿ ಆತನ ತಮ್ಮನೊಂದಿಗೆ ಎರಡೇ ಗಂಟೆಯಲ್ಲಿ ಮದುವೆ ಮಾಡಿದ್ದಾರೆ. ಇದರಿಂದಾಗಿ ಈ ಮದುವೆ ಸುದ್ದಿ ವೈರಲ್ ಆಗುತ್ತಿದೆ.
ವಿಜಯಪ್ರಭ.ಕಾಂ ಫಾಲೋ ಮಾಡಿ
ಕ್ಷಣ ಕ್ಷಣದ ಮಾಹಿತಿಗಾಗಿ Vijayaprabha WhatsApp Group ಫಾಲೋ ಮಾಡಿ ಮಹತ್ವದ ಮಾಹಿತಿಗಾಗಿ Vijayaprabha Facebook Page ಫಾಲೋ ಮಾಡಿ ವೈವಿಧ್ಯಮಯ ಸುದ್ದಿಗಳಿಗಾಗಿ Vijayaprabha Twitter ಪೇಜ್ ಫಾಲೋ ಮಾಡಿ